Virat Kohli – ಕಿಂಗ್ ಕೊಹ್ಲಿಗೆ ಕ್ರಿಕೆಟ್ ದೇವ್ರ ಆಶೀರ್ವಾದ..!

ವಿರಾಟ್ ಕೊಹ್ಲಿ.. ಆಧುನಿಕ ಕ್ರಿಕೆಟ್ ಜಗತ್ತಿನ ಸ್ಫೂತಿಯ ಚಿಲುಮೆ. ಅದು ಆಟದಲ್ಲಿ ಇರಬಹುದು.. ಫಿಟ್ ನೆಸ್ ನಲ್ಲಿ ಇರಬಹುದು. ವಿರಾಟ್ ಕೊಹ್ಲಿ ಯುವ ಆಟಗಾರರಿಗೆ ಮಾದರಿ ಆಟಗಾರ.
ಕ್ರಿಕೆಟ್ ಮೈದಾನದಲ್ಲಿ ಅದ್ಭುತವಾದ ಸಾಧನೆಯನ್ನು ಮಾಡಿರುವ ವಿರಾಟ್ ಕೊಹ್ಲಿ, ಇದೀಗ ನೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ವಿರಾಟ್ ಕೊಹ್ಲಿಯವರ ಐತಿಹಾಸಿಕ ಪಂದ್ಯಕ್ಕೆ ಮೊಹಾಲಿ ಅಂಗಣ ಸಾಕ್ಷಿಯಾಗಲಿದೆ. ಶ್ರೀಲಂಕಾ ವಿರುದ್ಧ ತನ್ನ ವೃತ್ತಿ ಬದುಕಿನ ಅವಿಸ್ಮರಣೀಯ ಪಂದ್ಯವನ್ನು ಆಡುತ್ತಿದ್ದಾರೆ.
ವಿರಾಟ್ ಕೊಹ್ಲಿಯವರ ಈ ಐತಿಹಾಸಿಕ ಸಾಧನೆಗೆ ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಆಶೀರ್ವಾದ ಮಾಡಿದ್ದಾರೆ. ಅಲ್ಲದೆ ಟೀಮ್ ಇಂಡಿಯಾದ ಗರ್ಭಗುಡಿಯಲ್ಲಿ ವಿರಾಟ್ ಕೊಹ್ಲಿ ಜೊತೆ ಕಳೆದ ಅಲ್ಪ ಸಮಯದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಇದೊಂದು ಅದ್ಭುತವಾದ ಸಾಧನೆ. ನನಗೆ ಇನ್ನೂ ನೆನಪಿದೆ. ವಿರಾಟ್ ಕೊಹ್ಲಿಯ ಬಗ್ಗೆ ಟೀಮ್ ಇಂಡಿಯಾದ ಡ್ರೆಸಿಂಗ್ ರೂಮ್ ನಲ್ಲಿ ಚರ್ಚೆ ಮಾಡುತ್ತಿದ್ದ ಸುದ್ದಿ. ಅದು 2007-2008. ಮಲೇಶಿಯಾದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕಿರಿಯರ ತಂಡ 19 ವಯೋಮಿತಿ ವಿಶ್ವಕಪ್ ಟೂರ್ನಿ ನಡೆಯುತ್ತಿತ್ತು. ಆಗ ಟೀಮ್ ಇಂಡಿಯಾದ ಡ್ರೆಸಿಂಗ್ ರೂಮ್ ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಬಗ್ಗೆ ಮಾತನಾಡುತ್ತಿದ್ದರು. ಈ ಹುಡುಗ ಮುಂದೊಂದು ದಿನ ಭಾರತದ ಪರ ಆಡುತ್ತಾನೆ ಅಂತ ಸಹ ಆಟಗಾರರು ಮಾತನಾಡುತ್ತಿದ್ದರು ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.
ನಂತರ ನಾವಿಬ್ಬರು ಟೀಮ್ ಇಂಡಿಯಾದ ಪರ ಕೆಲವು ವರ್ಷಗಳ ಕಾಲ ಜೊತೆಯಾಗಿ ಆಡಿದ್ದೇವು. ವಿರಾಟ್ ಕೊಹ್ಲಿಯವರಲ್ಲಿ ಕಲಿಯುವ ಗುಣಗಳಿದ್ದವು. ಜೊತೆಗೆ ತನ್ನ ಆಟವನ್ನು ಸುಧಾರಿಸಿಕೊಳ್ಳುವ ಕಲೆಯನ್ನು ಕೂಡ ಮೈಗೂಡಿಸಿಕೊಂಡಿದ್ದರು ಎಂದು ಸಚಿನ್ ತೆಂಡುಲ್ಕರ್ ವಿರಾಟ್ ಬದ್ಧತೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ವಿರಾಟ್ ಕೊಹ್ಲಿ 99 ಟೆಸ್ಟ್ ಪಂದ್ಯಗಳಲ್ಲಿ 7962 ರನ್ ದಾಖಲಿಸಿದ್ದಾರೆ. ಇದರಲ್ಲಿ 27 ಶತಕಗಳಿವೆ. ಹಾಗೇ 260 ಏಕದಿನ ಪಂದ್ಯಗಳಲ್ಲಿ 12,311 ರನ್ ಹಾಗೂ 43 ಶತಕಗಳನ್ನು ಸಿಡಿಸಿದ್ದಾರೆ. 97 ಟಿ-20 ಪಂದ್ಯಗಳಲ್ಲಿ 3296 ರನ್ ದಾಖಲಿಸಿದ್ದಾರೆ. Virat Kohli -Sachin Tendulkar’s tribute to Kohli ahead of landmark 100th Test
ವಿರಾಟ್ ಸಾಧನೆಯನ್ನು ನೋಡಿದಾಗ ತುಂಬಾ ಖುಷಿಯಾಗುತ್ತಿದೆ. ಸಾಧನೆಗಳ ಅಂಕಿ ಅಂಶಗಳು ಕೇವಲ ಪಾತ್ರವಷ್ಟೇ. ಆದ್ರೆ ಈ ಪೀಳಿಗೆಗೆ ಸ್ಫೂರ್ತಿಯ ಚಿಲುಮೆಯಾಗಿದ್ದು ವಿರಾಟ್ ಅವರ ಸಾಧನೆ ಮತ್ತು ನಿಜವಾದ ಸಾಮಥ್ರ್ಯ. ಭಾರತೀಯ ಕ್ರಿಕೆಟ್ ಗೆ ವಿರಾಟ್ ಕೊಡುಗೆ ಅಪಾರವಾದದ್ದು. ಇದು ವಿರಾಟ್ ಕೊಹ್ಲಿಯವರ ಯಶಸ್ಸು. ನಿಮ್ಮ ಕ್ರಿಕೆಟ್ ಬದುಕಿಗೆ ನನ್ನ ಶುಭ ಹಾರೈಕೆಗಳು. ಇನ್ನಷ್ಟು ಸಾಧನೆ ಮತ್ತು ಯಶಸ್ಸನ್ನು ಸಾಧಿಸಿ ಎಂದು ಸಚಿನ್ ತೆಂಡುಲ್ಕರ್ ಅವರು ಚೀಕೂಗೆ ಆಶೀರ್ವಾದ ಮಾಡಿದ್ದಾರೆ.

ಅದೊಂದು ಇಳಿ ಸಂಜೆ.. ನೀವು ಹೇಳಿದ ಮಾತು ನನಗೆ ಈಗಲೂ ನೆನಪಿದೆ. ಆ ಮಾತನ್ನು ನೀವು ಹೇಳಿದ್ದೀರಿ ಮತ್ತು ನೀವು ನಿಮ್ಮ ಗುರಿಯನ್ನು ಸಾಧಿಸಿದ್ದೀರಿ. ಇದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಫಿಟ್ ನೆಸ್ ಬಗ್ಗೆ ತುಂಬಾನೇ ಗಂಭೀರವಾಗಿದ್ದರು. ಇದರ ಬಗ್ಗೆಯೂ ವಿರಾಟ್ ಹೇಳಿರುವ ಮಾತನ್ನು ಸಚಿನ್ ಈ ಸಂದರ್ಭದಲ್ಲಿ ಜ್ಞಾಪಿಸಿಕೊಂಡಿದ್ದಾರೆ. 2011ರಲ್ಲಿ ಕ್ಯಾನೆ ಬೆರಾ ದ ಹೊಟೇಲ್ ಗೆ ಹೋಗಿದ್ದೇವು. ಅಲ್ಲಿ ನಮಗೆ ಬೇಕಾದನ್ನು ತಿಂದುಕೊಂಡು ವಾಪಸ್ ಬಂದಾಗ ವಿರಾಟ್ ಕೊಹ್ಲಿ ಒಂದು ಮಾತು ಹೇಳಿದ್ದರು. ಸಿಕ್ಕಾಪಟ್ಟೆ ತಿಂದಿದ್ದೇವೆ ಪಾಜಿ.ನಾವು ಫಿಟ್ ನೆಸ್ ಕಡೆಗೂ ಗಮನ ಹರಿಸಬೇಕು ಎಂದು ವಿರಾಟ್ ಸಚಿನ್ ಬಳಿ ಹೇಳಿಕೊಂಡಿದ್ದರು. ಈ ವಿಚಾರವನ್ನು ಕೂಡ ಸಚಿನ್ ತೆಂಡುಲ್ಕರ್ ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ನೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಚೀಕೂಗೆ ಆಲ್ ದಿ ಬೆಸ್ಟ್..!