ಐಸಿಸಿ ಮಹಿಳಾ ವಿಶ್ವಕಪ್ಗೆ ಕ್ಷಣಗಣನೆ ಆರಂಭವಾಗಿದೆ. ನ್ಯೂಜಿಲೆಂಡ್ ಆತಿಥ್ಯ ನೀಡುವ ಈ ಟೂರ್ನಿಯಲ್ಲಿ 8 ತಂಡಗಳು ಅಖಾಡಕ್ಕೆ ಇಳಿಯಲಿವೆ. ಮೊದಲ ಪಂದ್ಯ ಆತಿಥೇಯ ನ್ಯೂಜಿಲೆಂಡ್ ಮತ್ತು ವೆಸ್ಟ್ಇಂಡೀಸ್ ನಡುವೆ ನಡೆಯಲಿದೆ.
ನ್ಯೂಜಿಲೆಂಡ್ ಈ ಬಾರಿಯ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ತಂಡಗಳ ಪೈಕಿ ಒಂದಾಗಿದೆ. ತವರಿನಲ್ಲಿ ಆಡುವ ಎಡ್ವಾಂಟೇಜ್ ಪಡೆದಿರುವ ಕಿವೀಸ್ ಇತ್ತೀಚೆಗೆ ಭಾರತದ ವಿರುದ್ಧದ ಏಕದಿನ ಸರಣಿಯನ್ನು ಕೂಡ ಸುಲಭವಾಗಿ ಗೆದ್ದುಕೊಂಡಿತ್ತು. ಅಭ್ಯಾಸ ಪಂದ್ಯದಲ್ಲೂ ನ್ಯೂಜಿಲೆಂಡ್ ಆಸ್ಟ್ರೇಲಿಯಾವನ್ನು ಮಣಿಸಿತ್ತು.
ನ್ಯೂಜಿಲೆಂಡ್ ವನಿತಾ ತಂಡ ಸಖತ್ ಸ್ಟ್ರಾಂಗ್ ಆಗಿದೆ. ನಾಯಕಿ ಸೋಫಿ ಡಿವೈನ್, ಮಾಜಿ ನಾಯಕಿ ಸೂಝಿ ಬೇಟ್ಸ್, ಆಲ್ರೌಂಡರ್ ಅಮೆಲಿಯ ಕೆರ್ ಮತ್ತು ಜೆಸ್ ಕೆರ್ ತಂಡಕ್ಕೆ ಆಧಾರವಾಗಿದ್ದಾರೆ. ಇವರ ಜೊತೆಗೆ ಅಮಿ ಸೆಟರ್ವೇಟ್, ಲಾರೆನ್ ಡೌನ್, ಮ್ಯಾಡಿ ಗ್ರೀನ್, ಲಿಯ ತಹುಹುರಂತಹ ಆಟಗಾರ್ತಿಯರ ಬಲವಿದೆ.
ವೆಸ್ಟ್ಇಂಡೀಸ್ ತಂಡ ಡಿಯೊಂಡ್ರಾ ಡಾಟಿನ್ ಮೇಲೆ ಹೆಚ್ಚು ನಂಬಿಕೆ ಇಟ್ಟಿದೆ. ಸ್ಟೆಫಾನಿ ಟೇಲರ್, ಹೇಲಿ ಮ್ಯಾಥ್ಯೂಸ್ ಮತ್ತು ಅನಿಸಾ ಸಲ್ಮಾನ್ರಂತಹ ಆಟಗಾರ್ತಿಯರೇ ಕೆರಿಬಿಯನ್ ತಂಡದ ಬಲ. ಹೀಗಾಗಿ ಎರಡೂ ತಂಡಗಳು ಮೌಂಟ್ ಮಂಗ್ನುಯಿಯಲ್ಲಿ ಭರ್ಜರಿ ಆಟ ಆಡಲು ತಯಾರಿ ಮಾಡಿಕೊಳ್ಳುತ್ತಿವೆ.