ಟೀಮ್ ಇಂಡಿಯಾದ (TeamIndia) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಚುಟುಕು ವಿಶ್ವಕಪ್‌ನ ಪ್ಲಾನ್‌ನಲ್ಲಿದ್ದಾರಾ ಅನ್ನುವ ಪ್ರಶ್ನೆ ಇದೆ. ಆದರೆ ಸದ್ಯಕ್ಕೆ ಕಿಂಗ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ (T20 World Cup) ತಂಡದಲ್ಲಿ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ ಎಂದು ಹೇಳಲಾಗುತ್ತಿದೆ. ಯಾಕಂದರೆ ವಿರಾಟ್ ಈಗ ಚುಟುಕು ಕ್ರಿಕೆಟ್‌ನಲ್ಲ ಟೀಮ್ ಇಂಡಿಯಾದ ಖಾಯಂ ಸದಸ್ಯನಲ್ಲ.
ಕಳೆದ ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಪದೇ ಪದೇ ವಿರಾಮದ ಹೆಸರಿನಲ್ಲಿ ಟೀಮ್ ಇಂಡಿಯಾದಿಂದ ದೂರ ಇದ್ದಾರೆ. ಅಷ್ಟೇ ಅಲ್ಲಿ ಭಾರತ 24 ಪಂದ್ಯಗಳನ್ನು ಆಡಿದ್ದರೂ, ಕೊಹ್ಲಿ ಅರ್ಧದಷ್ಟು ಪಂದ್ಯಗಳನ್ನು ಕೂಡ ಆಡಿಲ್ಲ. ತಂಡ ಆಡಿರುವ ಪಂದ್ಯಗಳ ಪೈಕಿ ೩ನೇ ಒಂದು ಭಾಗದಷ್ಟು ಪಂದ್ಯಗಳನ್ನು ಕೂಡ ವಿರಾಟ್ ಆಡಿಲ್ಲ. ಹೀಗಾಗಿ ವಿರಾಟ್‌ಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಸಿಗುವುದು ಡೌಟ್ ಎಂದು ಹೇಳಲಾಗುತ್ತಿದೆ.

- ನ್ಯೂಜಿಲೆಂಡ್ ವಿರುದ್ಧ 3 ಪಂದ್ಯ
- ಶ್ರೀಲಂಕಾ ವಿರುದ್ಧ 3 ಪಂ5ದ್ಯ
- ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯ
- ಐರ್ಲೆಂಡ್ ವಿರುದ್ಧ 2 ಪಂದ್ಯ
- ವೆಸ್ಟ್‌ಇಂಡೀಸ್ ಪಂದ್ಯ 5 ಪಂದ್ಯ
- ಇಂಗ್ಲೆಂಡ್ ವಿರುದ್ಧ 1 ಪಂದ್ಯ
- ವಿಂಡೀಸ್ ವಿರುದ್ಧ 1 ಪಂದ್ಯ
2021ರ T20 ವಿಶ್ವಕಪ್ ಬಳಿಕ ಭಾರತ ಆಡಿದ 24 ಟಿ20 ಪಂದ್ಯಗಳ ಪೈಕಿ ವಿರಾಟ್ ಕೊಹ್ಲಿ ಆಡಿದ್ದು ಕೇವಲ 4 ಪಂದ್ಯಗಳನ್ನು ಮಾತ್ರ. ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ಧದ ತಲಾ 3 ಪಂದ್ಯಗಳ ಸರಣಿಯಿಂದ ವಿರಾಟ್ ವಿರಾಮ ಪಡೆದಿದ್ದರು. ದಕ್ಷಿಣ ಆಫ್ರಿಕಾ & ವಿಂಡೀಸ್ ವಿರುದ್ಧದ ತಲಾ 5 ಪಂದ್ಯಗಳ ಸರಣಿಯಿಂದಲೂ ಹೊರಗಿದ್ದರು. 2 ಪಂದ್ಯಗಳ ಐರ್ಲೆಂಡ್ ವಿರುದ್ಧದ ಸರಣಿಗೆ ಲಭ್ಯ ಇರಲಿಲ್ಲ. ಇಂಗ್ಲೆಂಡ್, ವಿಂಡೀಸ್ ವಿರುದ್ಧ ತಲಾ 2 ಪಂದ್ಯಗಳನ್ನು ಆಡಿದ್ದ ಕೊಹ್ಲಿ ಒಟ್ಟು 2 ಮ್ಯಾಚ್‌ಗಳನ್ನು ಆಡಿಲ್ಲ.
ವಿರಾಟ್ ಕೊಹ್ಲಿ ಫಿಟ್‌ನೆಸ್ ಎಂದೂ ಸಮಸ್ಯೆಯಾಗಿಲ್ಲ. ಆದರೆ ಬ್ಯಾಟಿಂಗ್ ಫಾರ್ಮ್ ಕೈ ಕೊಟ್ಟಿದೆ. ಅಷ್ಟೇ ಅಲ್ಲ ಟಿ20ಗೆ ಹೊಂದಿಕೊಳ್ಳಬಲ್ಲ ಸ್ಟ್ರೈಕ್‌ರೇಟ್‌ನಲ್ಲೂ ಹಿಂದೆ ಬಿದ್ದಿದ್ದಾರೆ. ಒಟ್ಟಿನಲ್ಲಿ ವಿರಾಟ್ ಈಗ ಟಫ್ ಟೈಮ್‌ನಲ್ಲಿದ್ದಾರೆ.