Virat Kohli -ಕೈಬಿಡಲು ಬಿಸಿಸಿಐಗೆ ಧಮ್ ಇಲ್ಲ… ಕಾರಣ ಏನು ?

ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡ್ತಾ ಇರೋದನ್ನು ನೋಡ್ತಾ ಇದ್ರೆ ಖಂಡಿತವಾಗಿಯೂ ಫಾರ್ಮ್ ನಲ್ಲಿ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಬ್ಯಾಟಿಂಗ್ ಕೌಶಲ್ಯ ಮತ್ತು ಆಕ್ರಮಣಕಾರಿ ಪ್ರವೃತ್ತಿಗಳಲ್ಲಿ ಒಂಚೂರು ಲೋಪದೋಷಗಳು ಇಲ್ಲ.
ಆದ್ರೆ ವಿರಾಟ್ ಕೊಹ್ಲಿ ಹೆಚ್ಚು ಸಮಯ ಕ್ರೀಸ್ ನಲ್ಲಿ ನಿಲ್ಲುತ್ತಿಲ್ಲ. ಪಂದ್ಯದ ಮೇಲೆ ಹಿಡಿತ ಸಾಧಿಸಿಕೊಳ್ಳುತ್ತಾರೆ ಅಂದುಕೊಂಡುವಷ್ಟರಲ್ಲೇ ವಿಕೆಟ್ ಒಪ್ಪಿಸುತ್ತಾರೆ. ಇದು ಕಳೆದ ಎರಡುವರೆ ವರ್ಷಗಳಿಂದ ನಡೆಯುತ್ತಿದೆ.
ಇದೀಗ ವಿರಾಟ್ ಕೊಹ್ಲಿಯವರನ್ನು ಟೀಮ್ ಇಂಡಿಯಾದಿಂದ ಕೈಬಿಡಬೇಕು ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ.
ಆದ್ರೆ ಬಿಸಿಸಿಐಗೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಧಮ್ ಇಲ್ಲ. ಮೊದಲನೇ ಕಾರಣ, ವಿರಾಟ್ ಕೊಹ್ಲಿಯವರ ಈ ಹಿಂದಿನ ದಾಖಲೆಗಳು ಮತ್ತು ಸಾಧನೆಗಳು. ಮತ್ತೊಂದೆಡೆ ಆಟಗಾರನೊಬ್ಬ ಕೆಟ್ಟ ಫಾರ್ಮ್ ನಲ್ಲಿರುವುದು ಸಹಜ. ಮತ್ತೆ ಫಾರ್ಮ್ ಕಂಡುಕೊಳ್ಳುತ್ತಾರೆ ಅನ್ನೋ ನಂಬಿಕೆಯನ್ನಿಟ್ಟುಕೊಂಡಿದೆ.

ಇನ್ನು ಅದಕ್ಕಿಂತ ಮುಖ್ಯ ಕಾರಣವೊಂದಿದೆ. ಅದುವೇ ದುಡ್ಡು. ಈ ಬಿಸಿಸಿಐ ಮತ್ತು ದುಡ್ಡು ನಡುವೆ ಉತ್ತಮ ಬಾಂಧವ್ಯವಿದೆ. ಹಾಗೇ ನೋಡಿದ್ರೆ ಬಿಸಿಸಿಐ ಬೊಕ್ಕಸಕ್ಕೆ ದುಡ್ಡೇ ಹರಿದು ಬರುತ್ತಿದೆ. ಅದರ ಮಹಿಮೆಯೇ ಅಂತಹುದ್ದು.
ಹೌದು, ಕ್ರಿಕೆಟ್ ಆಟದಿಂದ ಹೇಗೆ ದುಡ್ಡು ಗಳಿಸಬಹುದು ಎಂದು ವಿಶ್ವ ಕ್ರಿಕೆಟ್ ಬಿಸಿಸಿಐ ಅನ್ನು ನೋಡಿ ಕಲಿಯಬೇಕಿದೆ. ಹೀಗಾಗಿ ಬಿಸಿಸಿಐ ದುಡ್ಡಿಗಾಗಿ ವಿರಾಟ್ ಕೊಹ್ಲಿಯವರನ್ನು ತಂಡದಿಂದ ಕೈಬಿಡುತ್ತಿಲ್ಲ.
ಇದೀಗ ವಿರಾಟ್ ಕೊಹ್ಲಿಯವರ ಬಗ್ಗೆ ಬಿಸಿಸಿಐ ತೋರುತ್ತಿರುವ ಮೃದು ಧೋರಣೆ ಬಗ್ಗೆ ಇಂಗ್ಲೆಂಡ್ ನ ಮಾಜಿ ಸ್ಪಿನ್ನರ್ ಮೊಂಟಿ ಪನೆಸರ್ ಸಣ್ಣ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಿಸಿಸಿಐ ವಿರುದ್ಧ ಟೀಕೆಯನ್ನು ಮಾಡಿದ್ದಾರೆ.
ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ನಲ್ಲಿದ್ರೂ ಬಿಸಿಸಿಐ ಯಾಕೆ ತಂಡದಿಂದ ಕೈಬಿಡುತ್ತಿಲ್ಲ ಅನ್ನೋದಕ್ಕೆ ಕಾರಣ ದುಡ್ಡು ಎಂದು ಮಾಂಟಿ ಪನೇಸರ್ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ಗೆ ಈಗಲೂ ವಿರಾಟ್ ಕೊಹ್ಲಿಯೇ ಪೋಸ್ಟರ್ ಬಾಯ್. ವಿರಾಟ್ ಕೊಹ್ಲಿಗೆ ಮಾರುಕಟ್ಟೆ ಬೆಲೆ ಹೆಚ್ಚು ಇದೆ. ಹೀಗಾಗಿ ವಿರಾಟ್ ಅವರನ್ನು ಕೈಡಲು ಬಿಸಿಸಿಐ ಹಿಂದೇಟು ಹಾಕುತ್ತಿದೆ. ವಿರಾಟ್ ಕೊಹ್ಲಿಯವರನ್ನು ಕೈಬಿಟ್ರೆ, ಬಿಸಿಸಿಐಗೆ ಹಣದ ಪ್ರವಾಹ ಕಡಿಮೆಯಾಗುತ್ತದೆ ಎಂದು ಮಾಂಟಿ ಪನೇಸರ್ ಅಭಿಪ್ರಾಯಪಟ್ಟಿದ್ದಾರೆ.

ಫುಟ್ ಬಾಲ್ ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಇದ್ದಂತೆ ಭಾರತದ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ಕೂಡ. ಕ್ರಿಸ್ಟಿಯಾನೊ ರೊನಾಲ್ಡೊ ಆಡಿದ್ರೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಪಂದ್ಯವನ್ನು ವೀಕ್ಷಣೆ ಮಾಡ್ತಾರೆ. ಅದೇ ರೀತಿ ವಿರಾಟ್ ಕೊಹ್ಲಿಗೆ ಕೂಡ ಪ್ರೇಕ್ಷಕರನ್ನು ಪಂದ್ಯ ನೋಡುವಂತೆ ಮಾಡುವ ಸಾಮಥ್ರ್ಯವಿದೆ. ಹೀಗಾಗಿ ಬಿಸಿಸಿಐ ವಿರಾಟ್ ಕೊಹ್ಲಿಗೆ ಬೆನ್ನಿಗೆ ನಿಲ್ಲುತ್ತಿದೆ ಎಂದು ಪನೇಸರ್ ಹೇಳಿದ್ದಾರೆ.
ನಿಜ, ವಿರಾಟ್ ಕೊಹ್ಲಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಪ್ರೇಕ್ಷಕರನ್ನು ಸೆಳೆಯುತ್ತಾರೆ. ಭಾರತೀಯ ಕ್ರಿಕೆಟ್ ಗೆ ಮಾತ್ರವಲ್ಲ, ಬೇರೆ ದೇಶಗಳ ಕ್ರಿಕೆಟ್ ಮಂಡಳಿಗಳಿಗೂ ವಿರಾಟ್ ಆಡಿದ್ರೆ ಲಾಭವಿದೆ. ಆದ್ರೆ ಕೇವಲ ದುಡ್ಡನ್ನು ನೋಡಿದ್ರೆ ಸಾಕಾಗುವುದಿಲ್ಲ. ಭಾರತ ಕ್ರಿಕೆಟ್ ತಂಡದ ಭವಿಷ್ಯವನ್ನು ನೋಡಬೇಕು. ವಿರಾಟ್ ಕೊಹ್ಲಿ ಈಗ ಆಡುತ್ತಿರುವ ರೀತಿಯಲ್ಲಿ ಆಡಿದ್ರೆ ಭಾರತ ತಂಡಕ್ಕೆ ಏನಾದ್ರೂ ಲಾಭ ಇದೆಯಾ ಅನ್ನೋದನ್ನು ಅರ್ಥಮಾಡಿಕೊಳ್ಳಬೇಕು ಎಂದು ಮಾಂಟಿ ಪನೇಸರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.