ಜೋಕೊ ಪಡೆದ ಗ್ರ್ಯಾನ್ ಸ್ಲ್ಯಾಮ್ ಬಗ್ಗೆ ಎಲ್ಲರಿಗೂ ಗೊತ್ತು. ಕಾರ್ ಕಲೆಕ್ಷನ್ ಬಗ್ಗೆ ಗೊತ್ತಾ?
ವಿಶ್ವದ ಸ್ಟಾರ್ ಆಟಗಾರ ಸರ್ಬಿಯಾದ ನೋವಾಕ್ ಜೋಕೊವಿಚ್. ಇವರು ಆಟವಾಡಲು ಮೈದಾನಕ್ಕೆ ರಾಕೆಟ್ ಹಿಡಿದು ಇಳಿದರೆ, ಅಭಿಮಾನಿಗಳು ಇವರನ್ನು ಕಣ್ಣು ತುಂಬಿಕೊಳ್ಳಲು ಮುಗಿ ಬೀಳುತ್ತಾರೆ. ಹಲವು ದಾಖಲೆಗಳಿಗೆ ತಮ್ಮ ಹೆಸರು ನಮೂದಿಸಿಕೊಂಡಿರುವ ಸ್ಟಾರ್ ಆಟಗಾರ ಕೋಟಿ ಕೋಟಿಗಳ ಒಡೆಯ.

ಸರಿ ಸುಮಾರು 2 ದಶಕಗಳ ಕಾಲ ಮೈದಾನದಲ್ಲಿ ಮಿಂಚು ಹರಿಸಿರುವ ಜೋಕೊ ದಾಖಲೆಗಳನ್ನು ಬರೆಯುತ್ತಲ್ಲೆ ಇದ್ದಾರೆ. ಇವರು ಈ ವರೆಗೆ ಒಟ್ಟಾರೆ 86 ಎಟಿಪಿ ಸಿಂಗಲ್ಸ್ ಪ್ರಶಸ್ತಿ, 37 ಮಾಸ್ಟರ್ಸ್ ಪ್ರಶಸ್ತಿ ಹಾಗೂ ದಾಖಲೆಯ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದು ಬೀಗಿದ್ದಾರೆ. ಇತ್ತೀಚಿಗೆ ನಡೆದ ವಿಂಬಲ್ಡನ್ ಟೂರ್ನಿಯ ಚಾಂಪಿಯನ್ ನೋವಾಕ್ ಜೋಕೊವಿಚ್ ವಿವಾದಗಳಿಂದಲೂ ದೂರವಿಲ್ಲ.

ಕೊರೊನಾ ಲಸಿಕೆ ಪಡೆಯದೆ ಇದ್ದಿದ್ದರಿಂದ ಮೈದಾನಕ್ಕೆ ಎಂಟ್ರಿ ನೀಡುವುದಿಲ್ಲ ಎಂದು ಆಸ್ಟ್ರೇಲಿಯಾ ಓಪನ್ ಆಡಲು ಅನುಮತಿ ನೀಡದ ಆಯೋಜಕರ ವಿರುದ್ಧ ನ್ಯಾಯಂಗ ಸಮರ ನಡೆಸಿದ್ದರು.

ಸಾವಿರಾರು ಕೋಟಿಗಳ ಒಡೆಯ ಐಶಾರಾಮಿ ಜೀವನ ನಡೆಸುತ್ತಾರೆ. ಅಂದರೆ ಇವರ ಬಳಿ ಕಾಸ್ಟ್ಲಿ ಕಾರ್ ಗಳಿಗೆ ಬರವಿಲ್ಲ.

ಇವರ ಮನೆಯ ಅಂಗಳದಲ್ಲಿ ವಿಶ್ವದ ನಾನಾ ಕಂಪನಿಯ ದುಬಾರಿ ಕಾರ್ ಗಳ ಸಂಗ್ರಹವೇ ಇದೆ. ಈ ಕಾರುಗಳ ಮೌಲ್ಯ ನೋಡಿದರೆ ಒಂದು ಬಾರಿ ನಿಮ್ಮ ಮೂಗಿನ ಮೇಲೆ ಬೆರೆಳು ಇಟ್ಟುಕೊಳ್ಳುವುದು ನಿಶ್ಚಿತ. ಇವರು ಇತರ ಅನೇಕ ಕ್ರೀಡಾ ಅನುಮೋದನೆಗಳ ಜೊತೆಗೆ, ಜೊಕೊವಿಚ್ ಫ್ರೆಂಚ್ ಕಾರ್ ಕಂಪನಿ ಪಿಯುಗಿಯೊಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇವರಿಗೆ ಕಂಪನಿ 2020 ರಲ್ಲಿ ಉಡುಗೊರೆ ರೂಪದಲ್ಲಿ RCZ ಮತ್ತು ಸೀಮಿತ ಆವೃತ್ತಿಯ E-208 ಕಾರ್ ನೀಡಿದೆ.

ಇನ್ನು ಇವರ ಸಂಗ್ರಹಣೆಯಲ್ಲಿ Mercedes Benz S500, Aston Martin DB9, Audi R8 ಮತ್ತು BMW M55D, Bentley GT and a Tesla Model X ಸೇರಿವೆ.

Novak Djokovic, luxury car, collection, Tennis