ವಿರಾಟ್ ಕೊಹ್ಲಿ(Virat Kohli) ಬ್ಯಾಟಿಂಗ್ ವೈಫಲ್ಯದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲವು ಮಾಜಿ ಆಟಗಾರರು ವಿರಾಟ್ ವೈಫಲ್ಯವನ್ನ ಟೀಕಿಸಿದರೆ, ಕೆಲವರು ಕಿಂಗ್ ಕೊಹ್ಲಿ ಬೆನ್ನಿಗೆ ನಿಲ್ಲುವ ಮೂಲಕ ಭಾರತದ ʼರನ್ ಮಷಿನ್ʼ ಆತ್ಮವಿಶ್ವಾಸ ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಫಾರ್ಮ್ ವೈಫಲ್ಯದ ಬಗ್ಗೆ ಮಾತನಾಡಿರುವ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಮುಷ್ತಾಕ್ ಅಹ್ಮೆದ್(Mushtaq Ahmed), “ವಿರಾಟ್ ಕೊಹ್ಲಿಗೆ ಎಲ್ಲಾ ಮಾದರಿ ಕ್ರಿಕೆಟ್ನಿಂದ 3-4 ತಿಂಗಳ ಕಾಲ ಬ್ರೇಕ್ ಬೇಕಿದೆ. ಆ ನಂತರದಲ್ಲಿ ಕೊಹ್ಲಿ ಹೊಸ ಮನಸ್ಥಿತಿಯೊಂದಿಗೆ ಕ್ರಿಕೆಟ್ ಜರ್ನಿ ಮುಂದುವರಿಸಲಿ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೈಡ್ಲೈನ್ನಲ್ಲಿ ಕೂರುವುದರಿಂದ ಮಾನಸಿಕವಾಗಿ ಹೊಸ ಆತ್ಮವಿಶ್ವಾಸ ಪಡೆದು ಕಮ್ ಬ್ಯಾಕ್ ಮಾಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ದೊಡ್ಡ ಸರಣಿಗಳನ್ನ ಕೈಬಿಡಬೇಕಿದೆ. ಆ ಮೂಲಕ 3-4 ತಿಂಗಳು ಕ್ರಿಕೆಟ್ನಿಂದ ಸಂಪೂರ್ಣ ವಿಶ್ರಾಂತಿ ಪಡೆಯಬೇಕಿದೆ ಎಂದಿದ್ದಾರೆ.
ನನ್ನನ್ನು ತಂಡದಿಂದ ಕೈಬಿಟ್ಟಾಗ ಅಥವಾ ವಿಶ್ರಾಂತಿ ಪಡೆದಾಗಲೆಲ್ಲಾ ನಾನು ಟಿವಿಯಲ್ಲಿ ನನ್ನ ಸಹ ಆಟಗಾರರ ಪ್ರದರ್ಶನ ನೋಡುತ್ತಿದ್ದೆ. ಇದು ನನ್ನ ಮನಸ್ಥಿತಿ ಪಾಸಿಟಿವ್ ಅಂಶಗಳನ್ನ ನೀಡುತ್ತಿತ್ತು. ಜೊತೆಗೆ ಇದರಿಂದ ನಿಮ್ಮ ತರಬೇತಿ ಸಹ ಪರಿಣಾಮಕಾರಿಯಾಗಿ ಇರಲಿದೆ ಎಂದು ಮುಷ್ತಾಕ್ ಅಹ್ಮೆದ್ ಸಲಹೆ ನೀಡಿದ್ದಾರೆ.
ವಿರಾಟ್ ಕೊಹ್ಲಿ 3-4 ತಿಂಗಳ ವಿಶ್ರಾಂತಿ ನಂತರ ಕಮ್ಬ್ಯಾಕ್ ಮಾಡಿದರೆ, ಟೆಸ್ಟ್ ಕ್ರಿಕೆಟ್ನಲ್ಲಿ 27 ಶತಕ ಅಥವಾ ODIನಲ್ಲಿ 40+ ಶತಕಗಳಿಸಿದ್ದೇನೆ ಎಂಬುದನ್ನ ಮರೆತು ಹೊಸ ಜರ್ನಿ ಆರಂಭಿಸಲಿದ್ದಾರೆ. ಅವರ ಆತ್ಮವಿಶ್ವಾಸ ಮತ್ತು ಗಮನವು ಸಹ ಹೆಚ್ಚಾಗಲಿದೆ. ಯಾರಾದರೋ ಹಸಿದಿದ್ದಾಗ ಅವರಿಗೆ ಊಟದ ಬೆಲೆ ಹೆಚ್ಚಾಗಿ ಗೊತ್ತಾಗಲಿದ್ದು, ಕ್ರಿಕೆಟ್ ಸಹ ಅದೇ ರೀತಿಯಾಗಿದೆ. 3-4 ತಿಂಗಳ ಬ್ರೇಕ್ ನಂತರ ಕಮ್ ಬ್ಯಾಕ್ ಮಾಡಿದರೆ ನಿಮ್ಮ ಎನರ್ಜಿ ಹಾಗೂ ಮನಸ್ಥಿತಿ ಸಂಪೂರ್ಣವಾಗಿ ಬದಲಾಗಿರಲಿದೆ ಎಂದು ಪಾಕ್ ತಂಡದ ಮಾಜಿ ಆಟಗಾರ ತಿಳಿಸಿದ್ದಾರೆ.