ಕೊನೆ ಬಾಲ್‌ವರೆಗೂ ತೀವ್ರ ಕುತೂಹಲದಿಂದ ಕೂಡಿದ್ದ ಪಂದ್ಯದಲ್ಲಿ ಎಡವಿದ ಐರ್ಲೆಂಡ್, ಪೌಲ್ ಸ್ಟಿರ್ಲಿಂಗ್(120) ಹಾಗೂ ಹ್ಯಾರಿ ಟೆಕ್ಟರ್(108) ಶತಕದ ನಡುವೆಯೂ ಅತಿಥೇಯ ನ್ಯೂಜಿ಼ಲೆಂಡ್ ವಿರುದ್ಧದ 3ನೇ ODIನಲ್ಲಿ 1 ರನ್‌ಗಳ ವಿರೋಚಿತ ಸೋಲು ಕಂಡಿದೆ.
ಡುಬ್ಲಿನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿವೀಸ್, 50 ಓವರ್‌ಗಳಲ್ಲಿ 6 ವಿಕೆಟ್‌ಗೆ 360 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಟಾರ್ಗೆಟ್ ಬೆನ್ನತ್ತಿದ ಐರ್ಲೆಂಡ್, 50 ಓವರ್‌ಗಳಲ್ಲಿ 9 ವಿಕೆಟ್‌ಗೆ 359 ರನ್‌ಗಳಿಸುವ ಮೂಲಕ 1 ರನ್‌ಗಳಿಂದ ಸೋಲನುಭವಿಸಿತು. ಈ ಜಯದ ಮೂಲಕ ನ್ಯೂಜಿ಼ಲೆಂಡ್ ಮೂರು ಪಂದ್ಯಗಳ ODI ಸರಣಿಯಲ್ಲಿ 3-0 ಅಂತರದಿಂದ ತನ್ನದಾಗಿಸಿಕೊಂಡಿತು.

ಗಪ್ಟಿಲ್ ಶತಕದ ಅಬ್ಬರ:
ಮೊದಲು ಬ್ಯಾಟ್ ಮಾಡಿದ ನ್ಯೂಜಿ಼ಲೆಂಡ್‌ಗೆ ಮಾರ್ಟಿನ್ ಗಪ್ಟಿಲ್(115) ಹಾಗೂ ಫಿನ್ ಅಲೆನ್(33) ಮೊದಲ ವಿಕೆಟ್‌ಗೆ 78 ರನ್‌ಗಳ ಆರಂಭ ನೀಡಿದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಗಪ್ಟಿಲ್, ಅಮೋಘ ಶತಕ ಸಿಡಿಸಿ ಮಿಂಚಿದರು. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿ ನಿಕೋಲ್ಸ್(79) ಹಾಗೂ ಗ್ಲೆನ್ ಫಿಲಿಪ್ಸ್(47) ಅದ್ಭತ ಆಟದ ಮೂಲಕ ತಂಡಕ್ಕೆ ಆಸರೆಯಾದರು. ಉಳಿದಂತೆ ಲಾಥಂ(30), ಬ್ರೇಸ್‌ವೆಲ್(21) ಸ್ಯಾಂಟ್ನರ್(14) ರನ್‌ಗಳಿಸುವ ಮೂಲಕ ತಂಡದ ಮೊತ್ತವನ್ನ 360ಕ್ಕೆ ಏರಿಸಿದರು. ಐರ್ಲೆಂಡ್ ಪರ ಜೊಶುವಾ ಲಿಟಿಲ್ 2 ವಿಕೆಟ್ ಪಡೆದರು.

ಸ್ಟಿರ್ಲಿಂಗ್-ಟೆಕ್ಟರ್ ಶತಕ:
ನ್ಯೂಜಿ಼ಲೆಂಡ್ ನೀಡಿದ 361 ರನ್‌ಗಳ ಕಠಿಣ ಟಾರ್ಗೆಟ್ ಬೆನ್ನತ್ತಿದ ಐರ್ಲೆಂಡ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಆಂಡ್ರೋ ಬಾಲ್ಬರ್ನಿ(0) ಹಾಗೂ ಆಂಡಿ ಮೆಕ್ಬ್ರೈನ್(26) ತಂಡಕ್ಕೆ ಆಸರೆಯಾಗಲಿಲ್ಲ. ಈ ಹಂತದಲ್ಲಿ ಜೊತೆಯಾದ ಪೌಲ್ ಸ್ಟಿರ್ಲಿಂಗ್ 120(103) ಹಾಗೂ ಹ್ಯಾರಿ ಟೆಕ್ಟರ್ 108(106) ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಕಿವೀಸ್ ಬೌಲರ್‌ಗಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಈ ಜೋಡಿ 3ನೇ ವಿಕೆಟ್‌ಗೆ 179 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಇವರಿಬ್ಬರು ಔಟಾದ ನಂತರ ಬಂದ ಡೆಲೆನಿ(22), ಕ್ಯಾಂಪರ್(5), ಟಾಕರ್(14), ಜಾರ್ಜ್ ಡಾಕ್ರೆಲ್(22), ಗ್ರಾಮ್ ಹುಮೆ(7), ಕ್ರೇಗ್ ಯಂಗ್(6) ತಂಡದ ಗೆಲುವಿಗಾಗಿ ಕೊನೆವರೆಗೂ ಹೋರಾಡಿದರು ಕೇವಲ 1 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ಕಿವೀಸ್ ಪರ ಮ್ಯಾಟ್ ಹೆನ್ರಿ(4/68) ಹಾಗೂ ಸ್ಯಾಂಟ್ನರ್(3/71) ವಿಕೆಟ್ ಪಡೆದು ಮಿಂಚಿದರು. ಅಂತಿಮ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ ಮಾರ್ಟಿನ್ ಗಪ್ಟಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ. ಮೈಕಲ್ ಬ್ರೇಸ್‌ವೆಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
IRE v NZ 3rd ODI : ಸ್ಟಿರ್ಲಿಂಗ್-ಟೆಕ್ಟರ್ ವ್ಯರ್ಥ ಶತಕ