ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಬಾರಿಸಿದ ಸಿಕ್ಸರ್ ಗೆ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಪ್ರತಿಕ್ರಿಯಿಸಿದ್ದಾರೆ.
29 ವರ್ಷದ ವೇಗದ ಬೌಲರ್, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ. ‘ಕೊಹ್ಲಿ ವಿಶ್ವಕಪ್‌ನಲ್ಲಿ ಆಡಿದ ರೀತಿಯಲ್ಲಿ, ಅವರು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಯಾವ ರೀತಿಯ ಹೊಡೆತಗಳನ್ನು ಆಡುತ್ತಾರೆ ಮತ್ತು ಚೆಂಡನ್ನು ಸಿಕ್ಸರ್‌ಗಳಿಗೆ ಹೊಡೆಯುವ ರೀತಿ ಎಲ್ಲರಿಗೂ ತಿಳಿದಿದೆ. ಹಾಗೆ ಸಿಕ್ಸರ್ ಬಾರಿಸಬಲ್ಲ ಆಟಗಾರ ಮತ್ತೊಬ್ಬನಿಲ್ಲ ಎಂದು ನಾನು ಭಾವಿಸುತ್ತೇನೆ. ದಿನೇಶ್ ಕಾರ್ತಿಕ್ ಹೊಡೆದಿದ್ದರೆ ಅಥವಾ ಹಾರ್ದಿಕ್ ಪಾಂಡ್ಯ ಹೊಡೆದಿದ್ದರೆ ನನಗೆ ಬೇಸರವಾಗುತ್ತಿತ್ತು. ಆದರೆ, ಕೊಹ್ಲಿ ಹೊಡೆದಿದ್ದಾರೆ. ಅವರು ಬೇರೆ ರೀತಿಯ ಆಟಗರ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 23 ರಂದು ಮೆಲ್ಬೋರ್ನ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹ್ಯಾರಿಸ್ ರೌಫ್ ಅವರಿಗೆ ಬ್ಯಾಕ್ ಟು ಬ್ಯಾಕ್ 2 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಪಂದ್ಯದ ಗತಿಯನ್ನು ತಿರುಗಿಸಿದರು. ಮತ್ತು ಸೋತ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು ಸಹಾಯ ಮಾಡಿದರು. 19ನೇ ಓವರ್‌ನ ಕೊನೆಯ 2 ಎಸೆತಗಳಲ್ಲಿ ಈ ಸಿಕ್ಸರ್‌ಗಳು ಬರುವ ಮೊದಲು ಭಾರತದ ಗೆಲುವಿಗೆ 8 ಎಸೆತಗಳಲ್ಲಿ 28 ರನ್‌ಗಳ ಅಗತ್ಯವಿತ್ತು.
ಇದಕ್ಕೂ ಮುನ್ನ ಕೊಹ್ಲಿ ಈ ಬಗ್ಗೆ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. 23 ಅಕ್ಟೋಬರ್ 2022 ರಂದು ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಆ ಇನ್ನಿಂಗ್ಸ್ ತನಗೆ ಸ್ಮರಣೀಯ ಎಂದು ಕೊಹ್ಲಿ ಬಣ್ಣಿಸಿದ್ದಾರೆ. ನವೆಂಬರ್ 26 ರಂದು ಸಾಮಾಜಿಕ ಪೋಸ್ಟ್‌ನಲ್ಲಿ ವಿರಾಟ್ ಬರೆದಿದ್ದಾರೆ.
Virat Kohli, Haris Rauf, Pakistan, India