Wi vs Aus: ಮಾರ್ನಸ್, ಸ್ಮಿತ್ ಭರ್ಜರಿ ದ್ವಿಶತಕ
ಸ್ಟಾರ್ ಆಟಗಾರರಾದ ಮಾರ್ನಸ್ ಲ್ಯಾಬುಶೈನ್ ಹಾಗೂ ಸ್ಟೀವನ್ ಸ್ಮಿತ್ ಅವರು ಬಾರಿಸಿದ ಶತಕದ ಬಲದಿಂದ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಬೃಹತ್ ಮೊತ್ತ ಕಲೆ ಹಾಕಿದೆ.
ಗುರುವಾರ 2 ವಿಕೆಟ್ ಗೆ 293 ರನ್ ಗಳಿಂದ ಇನ್ನಿಂಗ್ಸ್ ಮುಂದುವರೆಸಿದ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 598 ರನ್ ಬಾರಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್ ಆರಂಭಿಸಿರುವ ವಿಂಡೀಸ್ ತಂಡದ ಸ್ಟಾರ್ ಆರಂಭಿಕರಾದ ಕ್ರೈಗ್ ಬ್ರಾಥ್‌ವೈಟ್ (ಅಜೇಯ 18), ಟಾಗೆನರಿನ್ ಚಂದ್ರಪಾಲ್ (ಅಜೇಯ 47) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಆಸ್ಟ್ರೇಲಿಯಾ ಪರ ದಿನದಾಟ ಆರಂಭಿಸಿದ ಸ್ಟಾರ್ ಆಟಗಾರರು ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಮಾರ್ನಸ್ ಲ್ಯಾನುಶೈನ್ 350 ಎಸೆತಗಳಲ್ಲಿ 20 ಬೌಂಡರಿ, 1 ಸಿಕ್ಸರ್ ಸಹಾಯದಿಂದ 204 ರನ್ ಬಾರಿಸಿ ಔಟ್ ಆದ್ರು.
ಅನುಭವಿ ಸ್ಟೀವನ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಜೊತೆಗೂಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಆತಿಥೇಯರು ವಿಫಲರಾದರು. ಅಂತಿಮವಾಗಿ ಟ್ರಾವಿಸ್ ಹೆಡ್ 99 ರನ್ ಬಾರಿಸಿದ್ದಾಗ ಬೋಲ್ಡ್ ಆದರು.
ಸ್ಟೀವನ್ ಸ್ಮಿತ್ ತಮ್ಮ ನೈಜ ಆಟ ಆಡಿದರು. ಇವರು 311 ಎಸೆತಗಳಲ್ಲಿ 17 ಬೌಂಡರಿ ಸೇರಿದಂತೆ ಅಜೇಯ 200 ರನ್ ಬಾರಿಸಿದರು.