Virat Kohli Dance – ಡಾನ್ಸ್.. ವಿರಾಟ್.. ಡಾನ್ಸ್ ಚೀಕೂ..!

ಸದ್ಯ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿದ್ದಾರೆ. ಟೀಮ್ ಇಂಡಿಯಾದ ವೆಸ್ಟ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಯಿಂದಲೂ ದೂರವೇ ಉಳಿದುಕೊಂಡಿದ್ದಾರೆ.
ಮುಂದೆ ಏನಿದ್ರೂ ಏಷ್ಯಾಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯವರನ್ನು ತಂಡದಲ್ಲಿ ಕಾಣಬಹುದು.
ಹೌದು, ವಿರಾಟ್ ಕೊಹ್ಲಿ ಕಳೆದ ಎರಡುವರೆ ವರ್ಷಗಳಿಂದ ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದಾರೆ. ಅದರಲ್ಲೂ ಈ ವರ್ಷವಂತೂ ತನ್ನ ಕ್ರಿಕೆಟ್ ಬದುಕಿನ ಕೆಟ್ಟ ಸಮಯವನ್ನು ಎದುರಿಸುತ್ತಿದ್ದಾರೆ.
ಸಾಲು ಸಾಲು ವೈಫಲ್ಯಗಳಿಂದ ಕಂಗೆಟ್ಟಿರುವ ವಿರಾಟ್, ಐಪಿಎಲ್ ನಂತರ ದಕ್ಷಿಣ ಆಫ್ರಿಕಾ, ಐರ್ಲೆಂಡ್ ಸರಣಿಯಲ್ಲೂ ಆಡಿರಲಿಲ್ಲ. ಇನ್ನು ಇಂಗ್ಲೆಂಡ್ ಪ್ರವಾಸದಲ್ಲೂ ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ವಿರಾಟ್ ಕೊಹ್ಲಿಯವರನ್ನು ಟಿ-20 ತಂಡದಿಂದ ಕೈಬಿಡಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಇನ್ನೊಂದೆಡೆ ವಿಶ್ವದ ಬಹುತೇಕ ಕ್ರಿಕೆಟಿಗರು ವಿರಾಟ್ ಕೊಹ್ಲಿ ಮತ್ತೆ ಕಮ್ ಬ್ಯಾಕ್ ಮಾಡ್ತಾರೆ ಅಂತ ಬೆಂಬಲವನ್ನು ನೀಡುತ್ತಿದ್ದಾರೆ.

ಇದೆಲ್ಲದರ ಮಧ್ಯೆ, ವಿರಾಟ್ ಕೊಹ್ಲಿ ಈಗ ಪ್ಯಾರೀಸ್ ಟೂರ್ ನಲ್ಲಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ, ಮಗಳು ವಾಮಿಕಾ ಜೊತೆ ವಿರಾಟ್ ಕೊಹ್ಲಿ ಪ್ಯಾರಿಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಇದೀಗ ವಿರಾಟ್ ಕೊಹ್ಲಿ ತನ್ನ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯ ಕಮೆಂಟ್ ಗಳನ್ನು ಹಾಕಿದ್ದಾರೆ. ಆದ್ರೆ ಈ ವಿಡಿಯೋ ನೋಡಿದಾಗ ವಿರಾಟ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಕ್ರಿಕೆಟ್ ಆಟದ ಕಳಪೆ ಫಾರ್ಮ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇನ್ನೂ ಕೂಡ ಆಡಲು ಫಿಟ್ ಆಗಿದ್ದೇನೆ. ಮತ್ತೆ ಕಮ್ ಬ್ಯಾಕ್ ಮಾಡುತ್ತೇನೆ ಎಂಬುದನ್ನು ಈ ವಿಡಿಯೋ ನೋಡಿದಾಗ ಗೊತ್ತಾಗುತ್ತದೆ.

ಹೌದು, ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಭ್ಯಾಸ ಮತ್ತು ಫಿಟ್ ನೆಸ್ ಅನ್ನು ಯಾವತ್ತೂ ಬಿಟ್ಟುಕೊಡುವುದಿಲ್ಲ. ಇವರೆಡು ವಿರಾಟ್ ಅವರ ದಿನ ನಿತ್ಯದ ದಿನಚರಿ. ಅದರಲ್ಲೂ ಜಿಮ್ ನಲ್ಲಿ ವರ್ಕ್ ಔಟ್ ಮಾಡಿಕೊಂಡು ಫಿಟ್ ಆಂಡ್ ಫೈನ್ ಆಗಿರುವ ವಿರಾಟ್ ಕೊಹ್ಲಿ ಯುವ ಕ್ರಿಕೆಟಿಗರಿಗೆ ಸ್ಪೂರ್ತಿಯೇ ಸರಿ.
ಅಷ್ಟಕ್ಕೂ ವಿರಾಟ್ ಕೊಹ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋ ಸಕತ್ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಕಿಂಗ್ ಕೊಹ್ಲಿ ಮಾಡಿರುವ ಡಾನ್ಸ್.
ಹೌದು, ಒಳಾಂಗಣದಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿರಾಟ್ ಕೊಹ್ಲಿ, ಬಾಘಿ-2, ಜನಪ್ರಿಯ ಪಂಜಾಬ್ ಹಾಡು ಮುಂಡಿಯನ್ ಹಾಡಿಗೆ ಮುಂಡಿಯನ್ ಹಾಡಿಗೆ ವಿರಾಟ್ ಕೊಹ್ಲಿ ವ್ಯಾಯಮದ ಶೈಲಿಯಲ್ಲೇ ನೃತ್ಯ ಮಾಡಿದ್ದಾರೆ. ಈ ಹಾಡಿಗೆ ತನ್ನ ಇಡೀ ದೇಹವನ್ನೇ ಶೇಕ್ ಮಾಡಿ ನೃತ್ಯ ಮಾಡಿರುವ ವಿರಾಟ್ ಎಲ್ಲರ ಗಮನ ಸೆಳೆದಿದ್ದಾರೆ.
https://www.instagram.com/virat.kohli/?utm_source=ig_embed&ig_rid=206019ef-b997-47cc-ab98-9efd3a00692a
ಇದು ಸುಮಾರು ದಿನಗಳಿಂದ ಬಾಕಿ ಉಳಿದಿತ್ತು. ಆದ್ರೆ ಇದು ಎಂದಿಗೂ ತಡವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಶೀಘ್ರದಲ್ಲೇ ತನ್ನ ಹಳೆಯ ಕಹಿ ಘಟನೆಗಳನ್ನು ಮರೆತು ಹೊಸ ಹುರುಪಿನೊಂದಿಗೆ ಟೀಮ್ ಇಂಡಿಯಾವನ್ನು ಸೇರಿಕೊಳ್ಳಬೇಕಿದೆ.
Virat Kohli Dance – ಡಾನ್ಸ್.. ವಿರಾಟ್.. ಡಾನ್ಸ್ ಚೀಕೂ..!