Cheteshwar Pujara – ಲಾಡ್ರ್ಸ್ ಅಂಗಣದಲ್ಲಿ ದ್ವಿಶತಕ..!
![Cheteshwar Pujara - ಲಾಡ್ರ್ಸ್ ಅಂಗಣದಲ್ಲಿ ದ್ವಿಶತಕ..! 3 Cheteshwar Pujara](http://sportskarnataka.com/wp-content/uploads/2022/05/Cheteshwar-Pujara-300x178.jpg)
ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಚೇತೇಶ್ವರ ಪೂಜಾರ ಅವರು ಸಸೆಕ್ಸ್ ತಂಡದ ಪರ ಆಡುತ್ತಿದ್ದಾರೆ. ಅಲ್ಲದೆ ಸಸೆಕ್ಸ್ ತಂಡದ ಪರ ಮೂರನೇ ದ್ವಿಶತಕ ದಾಖಲಿಸಿದ್ದ ಹಿರಿಮೆಗೂ ಪಾತ್ರರಾಗಿದ್ದಾರೆ.
ಲಾಡ್ರ್ಸ್ ಅಂಗಣದಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಸಸೆಕ್ಸ್ ತಂಡಕ್ಕೆ ಚೇತೇಶ್ವರ ಪೂಜಾರ ಹಂಗಾಮಿ ನಾಯಕನಾಗಿದ್ದಾರೆ. ಮೆಡ್ಲ್ ಸೆಕ್ಸ್ ತಂಡದ ವಿರುದ್ದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಆಕರ್ಷಕ 231 ರನ್ ಗಳಿಸಿದ್ರು.
115 ರನ್ ಗಳೊಂದಿಗೆ ಆಟ ಮುಂದುವರಿಸಿದ್ದ ಪೂಜಾರ ಅವರು ಒಟ್ಟು 403 ಎಸೆತಗಳನ್ನು ಎದುರಿಸಿದ್ದರು. ಇದರಲ್ಲಿ 21 ಬೌಂಡರಿ ಮತ್ತು ಮೂರು ಸಿಕ್ಸರ್ ಗಳಿದ್ದವು. ಅಲ್ಲದೆ, ನಾಲ್ಕು ಬಾರಿ 150ಕ್ಕಿಂತ ಹೆಚ್ಚು ರನ್ ಗಳಿಸಿದ್ದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಸಸೆಕ್ಸ್ ತಂಡದ ಪರ ಕೊನೆಯವರಾಗಿ ಪೆವಿಲಿಯನ್ ಗೆ ಹಿಂತಿರುಗಿದ್ದ ಪೂಜಾರ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಪೂಜಾರ ಅವರ ಅಮೋಘ ದ್ವಿಶತಕದ ನೆರವಿನಿಂದ ಸಸೆಕ್ಸ್ ತಂಡ 523 ರನ್ ದಾಖಲಿಸಿತ್ತು.
![Cheteshwar Pujara - ಲಾಡ್ರ್ಸ್ ಅಂಗಣದಲ್ಲಿ ದ್ವಿಶತಕ..! 4 Cheteshwar Pujara sports karnataka](http://sportskarnataka.com/wp-content/uploads/2022/07/pujara-300x254.jpg)
2022ರ ಕೌಂಟಿ ಚಾಂಪಿಯನ್ ಷಿಪ್ ನಲ್ಲಿ ಚೇತೇಶ್ವರ ಪೂಜಾರ ಅವರು ಒಟ್ಟು ಏಳು ಪಂದ್ಯಗಳ ಹತ್ತು ಇನಿಂಗ್ಸ್ ಗಳನ್ನು ಆಡಿದ್ದಾರೆ. ಮೂರು ದ್ವಿಶತಕ ಸೇರಿ ಒಟ್ಟು ಐದು ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ 124.63ರ ಸರಾಸರಿಯಲ್ಲಿ 997ರ ರನ್ ಗಳಿಸಿದ್ದಾರೆ.
ಇನ್ನು ಕೌಂಟಿ ಟೂರ್ನಿಯಲ್ಲಿ ಲಾಡ್ಸ್ ್ ಅಂಗಣದಲ್ಲಿ ದ್ವಿಶತಕ ದಾಖಲಿಸಿದ್ದ ಭಾರತದ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಹಾಗೇ 118 ವರ್ಷಗಳ ಬಳಿಕ ಸಸೆಕ್ಸ್ ತಂಡದ ಪರ ಮೂರು ದ್ವಿಶತಕ ದಾಖಲಿಸಿದ್ದ ಮೊದಲ ಆಟಗಾರನಾಗಿದ್ದಾರೆ.
ಇನ್ನೊಂದೆಡೆ ಮೆಡ್ಲ್ ಸೆಕ್ಸ್ ತಂಡದ ಪರ ಟೀಮ್ ಇಂಡಿಯಾದ ವೇಗಿ ಉಮೇಶ್ ಯಾದವ್ ಆಡಿದ್ದಾರೆ. ಆದ್ರೆ ಉಮೇಶ್ ಯಾದವ್ ನೀರಸ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಯಾವುದೇ ವಿಕೆಟ್ ಗಳನ್ನು ಪಡೆಯದೇ ನಿರಾಸೆ ಅನುಭವಿಸಿದ್ದಾರೆ.