ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ಅದೇನು ಮಾಡಿದರೂ ದಾಖಲೆಯೇ. ಶತಕ ಸಿಡಿಸಿದರೆ ದಾಖಲೆ, ಗಳಿಸುವ ಪ್ರತಿಯೊಂದು ರನ್ ಕೂಡ ಒಂದೊಂದು ಮೈಲಿಗಲ್ಲು. ಹೊಡೆಯುವ ಬೌಂಡರಿಗಳು, ಸಿಕ್ಸರ್ಗಳು ಕೂಡ ದಾಖಲೆಯಾಗಿ ಇತಿಹಾಸ ಸೇರಿಕೊಳ್ಳುತ್ತವೆ. ಆದರೆ ಶೂನ್ಯ ಸುತ್ತುವುದರಲ್ಲೂ ವಿರಾಟ್ ದಾಖಲೆ ಬರೆದಿದ್ದಾರೆ.
2021ರಲ್ಲಿ ಟೆಸ್ಟ್ನಲ್ಲಿ 4 ಶೂನ್ಯ
ಇದು ವಿರಾಟ್ ಕೊಹ್ಲಿ ಹಿಂದೆಂದೂ ಕಾಣದ ವೈಫಲ್ಯಕ್ಕೆ ಸಾಕ್ಷಿ. ಈ ವರ್ಷ ಆಡಿರುವ 16 ಇನ್ನಿಂಗ್ಸ್ಗಳಲ್ಲಿ ವಿರಾಟ್ 4 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಚೆನ್ನೈ ಹಾಗೂ ಅಹ್ಮದಾಬಾದ್ ಟೆಸ್ಟ್ನಲ್ಲಿ ಖಾತೆ ತೆರೆಯದೆ ಔಟಾದರೆ, ನಾಟಿಂಗ್ ಹ್ಯಾಂನಲ್ಲೂ ಇಂಗ್ಲೆಂಡ್ ವಿರುದ್ಧ ರನ್ಗಳಿಸದೆ ಔಟಾಗಿದ್ದರು. ಈಗ ಮುಂಬೈ ಟೆಸ್ಟ್ನಲ್ಲಿ ಶೂನ್ಯಕ್ಕೆ ಔಟಾಗಿ ಒಂದೇ ವರ್ಷ 4 ಬಾರಿ ಶೂನ್ಯಕ್ಕೆ ಔಟಾದ ಮೊದಲ ನಾಯಕ ಅನ್ನುವ ಅನಗತ್ಯ ದಾಖಲೆ ಬರೆದರು. ಈ ಹಿಂದೆ ಕೊಹ್ಲಿ 2012ರಲ್ಲಿ 2 ಬಾರಿ ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು.
ಶತಕವಿಲ್ಲದ ವರ್ಷ,ಅಭಿಮಾನಿಗಳಿಗಿಲ್ಲ ಹರ್ಷ
ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸದೆ 2 ವರ್ಷಗಳಾಗುತ್ತಾ ಬಂತು. ಈ ಬಾರಿಯಂತೂ ಕೊಹ್ಲಿ ರನ್ಗಾಗಿ ಪರದಾಟ ನಡೆಸಿದ್ದಾರೆ. ಟೆಸ್ಟ್ನಲ್ಲಿ 16 ಇನ್ನಿಂಗ್ಸ್ಗಳಿಂದ ಕೇವಲ 447 ರನ್ಗಳಿಸಿದ್ದಾರೆ. ಸರಾಸಿ ಕೇವಲ 27.33. ಈ ವರ್ಷ ಕೊಹ್ಲಿ ವೇಗಿಗಳಿಗೆ 10 ಬಾರಿ ವಿಕೆಟ್ ಒಪ್ಪಿಸಿದ್ದರೆ, ಸ್ಪಿನ್ನರ್ಗಳ ಎದುರು 6 ಬಾರಿ ಔಟಾಗಿದ್ದರು.
ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಇಲ್ಲಿ ತನಕ 14 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಕೊಹ್ಲಿ ಔಟ್ ಆಫ್ ಫಾರ್ಮ್ನಲ್ಲಿರುವುದು ಕ್ಲೀಯರ್ ಆಗಿ ಗೊತ್ತಾಗುತ್ತಿದೆ. ಬಹುಷಃ ಕೊಹ್ಲಿಯ ಕ್ರಿಕೆಟ್ ಮುಗಿಲೆತ್ತರಕ್ಕೆ ಏರಿ ಕೆಳಮುಖವಾಗಿ ಇಳಿಯುತ್ತಿದೆ ಅನ್ನುವ ಭಾವನೆ ಎಲ್ಲೆಡೆ ವ್ಯಕ್ತವಾಗುತ್ತಿದೆ.