Virat Kohli -Anushka Sharma ವಿರಾಟ್ -ಅನುಷ್ಕಾ.. ಪ್ಯಾರಿಸ್ ಪ್ರಣಯ..!

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಕುಟುಂಬದ ಜೊತೆ ಪ್ಯಾರೀಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.
ಈ ವಿಚಾರವನ್ನು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಬಾಲಿವುಡ್ ನಟಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಾಮಿಕಾ ಜೊತೆ ಪ್ಯಾರೀಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಪ್ಯಾರೀಸ್ ತಾಪಮಾನ ತುಂಬಾ ಬಿಸಿಯಾಗಿದೆ. 41 ಡಿಗ್ರಿ ಸೆಲ್ಸಿಯಸ್ ಇಲ್ಲಿನ ತಾಪಮಾನವಾಗಿದೆ. ಲಂಡನ್ ಗಿಂತ ಪ್ಯಾರೀಸ್ ನ ತಾಪಮಾನ ಹೆಚ್ಚಿದೆ ಎಂದು ಅನುಷ್ಕಾ ಶರ್ಮಾ ತನ್ನ ಇನ್ ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿದ್ದಾರೆ. ಕೊಹ್ಲಿ ಅವರು ವೆಸ್ಟ್ ಇಂಡೀಸ್ ಸರಣಿಯನ್ನು ಆಡಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು. ಆದ್ರೆ ವಿಶ್ರಾಂತಿ ಬಯಸಿದ್ದ ಕಾರಣ ಅವರನ್ನು ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆ ಮಾಡಿಲ್ಲ.

ಆದ್ರೆ ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡಕ್ಕೂ ಕೊಹ್ಲಿ ಸಿಲುಕಲಿದ್ದಾರೆ.
ಹೌದು, ಕಳೆದ 33 ತಿಂಗಳಿಂದ ವಿರಾಟ್ ಕೊಹ್ಲಿ ಶತಕದ ಬರದ ಜೊತೆಗೆ ರನ್ ಕೂಡ ಗಳಿಸುತ್ತಿಲ್ಲ. ಫಿಟ್ ನೆಸ್, ಬ್ಯಾಟಿಂಗ್ ಕೌಶಲ್ಯಗಳಿದ್ರೂ ಪದೇ ಪದೇ ಅಲ್ಪ ಮೊತ್ತಕ್ಕೆ ವಿಕೆಟ್ ಕೈಚೆಲ್ಲಿಕೊಳ್ಳುತ್ತಿದ್ದಾರೆ. ತನ್ನ ಕ್ರಿಕೆಟ್ ಬದುಕಿನಲ್ಲಿ ಮೊದಲ ಬಾರಿ ಕೆಟ್ಟ ಸಮಯವನ್ನು ಎದುರಿಸುತ್ತಿರುವ ವಿರಾಟ್ ಗೆ ಕೂಡ ಏನಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ.
ಬಹುತೇಕ ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿಗೆ ಬೆಂಬಲವಾಗಿ ನಿಂತ್ರೂ ಕೆಲವು ಮಾಜಿ ಕ್ರಿಕೆಟಿಗರು ಟಿ-20 ತಂಡದಿಂದ ವಿರಾಟ್ ಅವರನ್ನು ಕೈಬಿಡಬೇಕು ಎಂದು ಹೇಳಿದ್ದಾರೆ.
ಅಲ್ಲದೆ ಕಳೆದ ಇಂಗ್ಲೆಂಡ್ ಸರಣಿಯಲ್ಲೂ ವಿರಾಟ್ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿ ಟೀಕೆಗೂ ಗುರಿಯಾಗಿದ್ದರು. ಆದ್ರೆ ವಿರಾಟ್ ನಂತಹ ಆಟಗಾರ ಕಳಪೆ ಫಾರ್ಮ್ ನಿಂದ ಹೊರಬರುತ್ತಾರೆ ಎಂಬ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್.
ಒಟ್ಟಿನಲ್ಲಿ ಮಾನಸಿಕವಾಗಿ ಕುಗ್ಗಿರುವ ವಿರಾಟ್ ಕೊಹ್ಲಿ ಇದೀಗ ತನ್ನ ಕುಟುಂಬದ ಜೊತೆ ಹಾಯಾಗಿ ಕಾಲ ಕಳೆದು ಹೊಸ ಹುರುಪಿನೊಂದಿಗೆ ಮತ್ತೆ ಕಣಕ್ಕಿಳಿಯಲಿದ್ದಾರೆ.
ಒಂದು ನೆನಪಿಡಿ, ಏಷ್ಯಾಕಪ್ ಟೂರ್ನಿಯ ಪ್ರದರ್ಶನದ ಮೇಲೆ ವಿರಾಟ್ ಕೊಹ್ಲಿ ಅವರ ಟಿ-20 ವಿಶ್ವಕಪ್ ಭವಿಷ್ಯ ನಿಂತಿದೆ ಎಂಬುದು ಸುಳ್ಳು. ಯಾಕಂದ್ರೆ ವಿರಾಟ್ ಕೊಹ್ಲಿ ಆಡಲಿ, ಆಡದೇ ಇರಲಿ, ಟೀಮ್ ಇಂಡಿಯಾದಲ್ಲಿರುವುದಂತು ಗ್ಯಾರಂಟಿ.