Deepak Chahar – ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಯಾವಾಗ ?

ಇದು ಟೀಮ್ ಇಂಡಿಯಾಗೆ ಗುಡ್ ನ್ಯೂಸ್. ಯಾಕಂದ್ರೆ ರೋಹಿತ್ ಕ್ಯಾಂಪ್ ಗೆ ಸ್ಟಾರ್ ಆಲ್ ರೌಂಡರ್ ಸದ್ಯದಲ್ಲೇ ಸೇರಿಕೊಳ್ಳುವ ಸೂಚನೆ ಸಿಕ್ಕಿದೆ.
ಹೌದು, ಟೀಮ್ ಇಂಡಿಯಾದ ಆಲ್ ರೌಂಡರ್ ದೀಪಕ್ ಚಾಹರ್ ಫುಲ್ ಫಿಟ್ ಆಗಿದ್ದಾರೆ. ಸುಮಾರು 5 ತಿಂಗಳುಗಳ ಬಳಿಕ ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಬೌಲಿಂಗ್ ಕೂಡ ಮಾಡಿದ್ದಾರೆ.
https://www.instagram.com/reel/CgLmxvVJp2S/?utm_source=ig_embed&ig_rid=0d07d555-db7d-468c-834d-45a5c58e66b5
ತಾನು ಫುಲ್ ಫಿಟ್ ಆಗಿ ಮೈದಾನದಲ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೋವನ್ನು ಸ್ವತಃ ದೀಪಕ್ ಚಾಹರ್ ಅವರೇ ತನ್ನ ಇನ್ ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಐದು ತಿಂಗಳ ಬಳಿಕ ಪಂದ್ಯವೊಂದರಲ್ಲಿ ಬೌಲಿಂಗ್ ಮಾಡಿದ್ದೇನೆ. ನನಗೆ ಚೊಚ್ಚಲ ಪಂದ್ಯವನ್ನಾಡಿದ್ದಷ್ಟೇ ಖುಷಿಯಾಗುತ್ತಿದೆ ಎಂದು ಕೂಡ ಬರೆದುಕೊಂಡಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ದೀಪಕ್ ಚಾಹರ್ ಅವರು ವೆಸ್ಟ್ ಇಂಡೀಸ್ ಸರಣಿಯ ವೇಳೆ ಗಾಯಗೊಂಡಿದ್ದರು. ಬೆನ್ನು ನೋವಿನಿಂದ ಬಳಲುತ್ತಿರುವ ದೀಪಕ್ ಚಾಹರ್ ಅವರು ಎನ್ ಸಿಎ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಬಳಿಕ ಐಪಿಎಲ್ ನಲ್ಲಿ ಸಿಎಸ್ ಕೆ ತಂಡದಕ್ಕೆ ದುಬಾರಿ ಬೆಲೆಗೆ ಮಾರಾಟವಾಗಿದ್ರೂ ಒಂದು ಪಂದ್ಯವನ್ನು ಕೂಢ ಆಡಲಿಲ್ಲ. ನಂತರ ದಕ್ಷಿಣ ಆಫ್ರಿಕಾ, ಐರ್ಲೆಂಡ್, ಇಂಗ್ಲೆಂಡ್ ಇದೀಗ ವೆಸ್ಟ್ ಇಂಡೀಸ್ ಸರಣಿಯನ್ನು ಕೂಡ ಮಿಸ್ ಮಾಡಿಕೊಂಡಿದ್ದರು.
ಇದೀಗ ಫುಲ್ ಫಿಟ್ ಆಗಿರುವ ದೀಪಕ್ ಚಾಹರ್ ಅವರು ಮುಂಬರುವ ಜಿಂಬಾಬ್ವೆ ಸರಣಿಯ ವೇಳೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಹಾಗೇ ಏಷ್ಯಾಕಪ್ ಟೂರ್ನಿಯಲ್ಲೂ ಆಡುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಟೀಮ್ ಇಂಡಿಯಾದ ಟಿ-20 ವಿಶ್ವಕಪ್ ಅಭಿಯಾನಕ್ಕೆ ದೀಪಕ್ ಚಾಹರ್ ತಂಡವನ್ನು ಸೇರಿಕೊಂಡ್ರೆ ರೋಹಿತ್ ಬಳಗ ಇನ್ನಷ್ಟು ಬಲಿಷ್ಠಗೊಳ್ಳಲಿದೆ.