Viktor Axelsen ವಿಶ್ವ ಬ್ಯಾಡ್ಮಿಂಟನ್ ಕಿರೀಟದೊಂದಿಗೆ ವಿನೂತನ ಸಾಧನೆ
2022ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಕಿರೀಟ ಡೆನ್ಮಾರ್ಕ್ ವಿಕ್ಟರ್ ಅಕ್ಸಲ್ ಸೆನ್ ಅವರ ಪಾಲಾಗಿದೆ. ಪುರುಷರ ಫೈನಲ್ ನಲ್ಲಿ ವಿಕ್ಟರ್ ಅವರು ಥಾಯ್ಕೆಂಡ್ ನ ಕುನ್ಲಾವುಟ್ ವಿಟಿಡ್ಸರ್ನ್ ಅವರನ್ನು ಸೋಲಿಸಿ ವಿನೂತನ ಸಾಧನೆಯನ್ನು ಮಾಡಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್ ಕಿರೀಟದೊಂದಿಗೆ ವಿಕ್ಟರ್ ಅವರಿಗೆ ಒಲಿಂಪಿಕ್ ಚಿನ್ನದ ಪದಕ, ವಿಶ್ವ ಚಾಂಪಿಯನ್ ಷಿಪ್ , ಬಿಡಬ್ಲ್ಯು ಎಫ್ ವಲ್ರ್ಡ್ ಟೂರ್ ಫೈನಲ್ಸ್ ಹಾಗೂ ಸೂಪರ್ 1000 ನ ಮೂರು ಪ್ರಶಸ್ತಿಗಳು ವಿಕ್ಟರ್ ಅವರ ಹೆಸರಿನಲ್ಲಿ ದಾಖಲಾಗಿವೆ. ಈ ಹಿಂದೆ 2017ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲೂ ವಿಕ್ಟರ್ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ಇನ್ನು ಮಹಿಳೆಯರ ಸಿಂಗಲ್ಸ್ ನಲ್ಲಿ ಜಪಾನ್ ನ ಆಕಾನೆ ಯಮಗುಚಿ ಅವರು ಮತ್ತೆ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ.