FIFA ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಬಂದಿದೆ. ಭಾನುವಾರ ಮೊರಾಕೊ ಬೆಲ್ಜಿಯಂ ತಂಡವನ್ನು 2-0 ಗೋಲುಗಳಿಂದ ಸೋಲಿಸಿದೆ. ವಿಶ್ವ ಎರಡನೇ ಶ್ರೇಯಾಂಕಿತ ತಂಡ ಬೆಲ್ಜಿಯಂ ಸೋಲು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತ ಸೋತ ಬೆನ್ನಲ್ಲೆ ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್ ಸೇರಿದಂತೆ ಮೂರು ನಗರಗಳಲ್ಲಿ ಗಲಭೆಗಳು ಭುಗಿಲೆದಿದೆ. ಫುಟ್ಬಾಲ್ ಅಭಿಮಾನಿಗಳು ಅನೇಕ ಅಂಗಡಿಗಳು ಮತ್ತು ವಾಹನಗಳನ್ನು ಧ್ವಂಸಗೊಳಿಸಿದರು. ಬೆಂಕಿ ಹಚ್ಚಿದ ಘಟನೆಗಳೂ ನಡೆದಿವೆ.
🇧🇪 Émeutes de colons marocains en #Belgique après le match contre le #Maroc. #BELMAR #Bruxelles pic.twitter.com/MKbS5oeDCn
— Damien Rieu (@DamienRieu) November 27, 2022
ಮೊರಾಕೊ ವಿರುದ್ಧದ ಸೋಲಿನ ನಂತರ ಬ್ರಸೆಲ್ಸ್‌ನಲ್ಲಿ ಬೆಲ್ಜಿಯಂ ಫುಟ್‌ಬಾಲ್ ಅಭಿಮಾನಿಗಳು ಅಂಗಡಿಯ ಕಿಟಕಿಗಳನ್ನು ಒಡೆದು ಹಾಕಿದರು. ಅಂಗಡಿಗಳ ಒಳಗೆ ಪಟಾಕಿಗಳನ್ನೂ ಎಸೆದರು. ಕೆಲವು ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಪಂದ್ಯ ಮುಗಿಯುವ ಮುನ್ನವೇ ಗಲಾಟೆ ಶುರುವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಗಲಭೆಕೋರರು ಪೊಲೀಸರೊಂದಿಗೆ ವಾಗ್ವಾದ ನಡೆದಿದೆ. ಈ ಜನರ ಬಳಿಯೂ ಆಯುಧಗಳು ಇದ್ದವು. ಈ ಗಲಾಟೆಯ ನಂತರ, ಬ್ರಸೆಲ್ಸ್ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ.
https://twitter.com/suzseddon/status/1596973275178860546?t=B4XvocWiaFnVZ3hSzmcTIA&s=19
ಈ ಗದ್ದಲದ ನಂತರ ರಾಜಧಾನಿಯಲ್ಲಿ ನೂರಾರು ಪೊಲೀಸರನ್ನು ನಿಯೋಜಿಸಲಾಯಿತು. ನಗರದ ಕೆಲವು ಪ್ರದೇಶಗಳಿಗೆ ಜನರು ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಕೆಲವು ಮೆಟ್ರೋ ನಿಲ್ದಾಣಗಳು ಮತ್ತು ರಸ್ತೆಗಳನ್ನು ಕೆಲವು ಗಂಟೆಗಳ ಕಾಲ ಮುಚ್ಚಬೇಕಾಯಿತು. ಮೊರೊಕನ್ ಮೂಲದ ಹೆಚ್ಚಿನ ಸಂಖ್ಯೆಯ ಜನರು ಬೆಲ್ಜಿಯಂನಲ್ಲಿ ವಾಸಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ, ಅವರ ಸಂಖ್ಯೆ 5 ಲಕ್ಷಕ್ಕೂ ಹೆಚ್ಚು. ಮೊರೊಕ್ಕೊ ವಿಜಯದ ನಂತರ ಈ ಜನರ ಸಂಭ್ರಮಾಚರಣೆಯ ನಂತರವೇ ಗಲಭೆಗಳ ಘಟನೆಗಳು ಮುನ್ನೆಲೆಗೆ ಬರುತ್ತಿವೆ.
🚨BREAKING NEWS🚨
Brussels, home of the EU parliament, ERUPTS in street riots as Moroccans 'celebrate' their victory over their now home country.
Are we feeling enriched? pic.twitter.com/YI0h6nXSxt
— UNN (@UnityNewsNet) November 27, 2022
ಸುಮಾರು 50 ಜನರ ಗುಂಪೊಂದು ಪೂರ್ವ ಬೆಲ್ಜಿಯಂ ನಗರದ ಲೀಜ್‌ನಲ್ಲಿರುವ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದೆ. ಇಲ್ಲಿ ಪೊಲೀಸ್ ಠಾಣೆಯ ಗಾಜುಗಳನ್ನು ಒಡೆದಿದೆ. ಎರಡು ಪೊಲೀಸ್ ವಾಹನಗಳಿಗೂ ಸಂಪೂರ್ಣ ಹಾನಿಯಾಗಿದೆ. ಇಲ್ಲಿ ಗಲಭೆಕೋರರನ್ನು ನಿಯಂತ್ರಿಸಲು ಪೊಲೀಸರು ಜಲ ಪ್ರಹಾರ ನಡೆಸಿದರು. ಉತ್ತರದ ಆಂಟ್ವೆರ್ಪ್ ನಗರದಲ್ಲಿ ಇದೇ ರೀತಿಯ ಗಲಾಟೆಯಿಂದಾಗಿ ಹತ್ತಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು.
ಬೆಲ್ಜಿಯಂ ಮತ್ತು ಮೊರಾಕೊ ನಡುವಿನ ಈ ಪಂದ್ಯದಲ್ಲಿ ಸಮಬಲದ ಪೈಪೋಟಿ ಏರ್ಪಟ್ಟಿತ್ತು. ಆದರೆ ದ್ವಿತೀಯಾರ್ಧದಲ್ಲಿ ಮೊರೊಕ್ಕೊ 73ನೇ ಮತ್ತು ನಿಲುಗಡೆ ಸಮಯದಲ್ಲಿ (90+2′ ನಿಮಿಷ) ಗೋಲು ಗಳಿಸಿ ಜಯ ಸಾಧಿಸಿತು. ಈ ಫಲಿತಾಂಶದ ಬಳಿಕ ಬೆಲ್ಜಿಯಂಗೆ 16ರ ಘಟ್ಟ ಪ್ರವೇಶಿಸುವುದು ತುಸು ಕಷ್ಟವೆನಿಸಿದೆ.