ಓಪನರ್ ಸಮರ್ಥ ಅವರ ಭರ್ಜರಿ ಬ್ಯಾಟಿಂಗ್ ನೆರೆವಿನಿಂದ ಕರ್ನಾಟಕ ಕ್ರಿಕೆಟ್ ತಂಡ ಪಂಜಾಬ್ ವಿರುದ್ಧ 4 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ವಿಜಯ್ ಹಜಾರೆ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ನಿಗದಿತ 50 ಓವರ್ಗಳಲ್ಲಿ 235 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕ ತಂಡ 49.2 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 238 ರನ್ ಕಲೆ ಹಾಕಿತು.
236 ರನ್ ಗುರಿ ಬೆನ್ನತ್ತಿದ ಕರ್ನಾಟಕ ಪರ ನಾಯಕ ಮಯಾಂಕ್ ಅಗರ್ವಾಲ್ 1, ಆರ್. ಸಮರ್ಥ್ 71 ರನ್ ( 106 ಎಸೆತ, 5 ಬೌಂಡರಿ) ನಿಕಿನ್ ಜೋಸ್ 29, ಮನೀಶ್ ಪಾಂಡೆ 35, ಶ್ರೇಯಸ್ ಗೋಪಾಲ್ 42, ಶರತ್ 14, ಮನೋಜ್ ಭಡಾಂಜೆ 25 ರನ್ ಗಳಿಸಿದರು. ಪಂಜಾಬ್ ಸನ್ವಿರ್ ಸಿಂಗ್ 28ಕ್ಕೆ 2, ಸಿದ್ದಾರ್ಥ್ ಕೌಲ್ ಭಲ್ತೇಜ್ ಸಿಂಗ್, ಮರ್ಕಂಡೆ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಪಂಜಾಬ್ ಪರ ಅಭಿಷೇಕ್ ಶರ್ಮಾ109,ಅನಮೋಲ್ ಮಲ್ಹೋತ್ರಾ 29,ಸನ್ವೀರ್ ಸಿಂಗ್ 39 ರನ್ ಹೊಡೆದರು.
ಕರ್ನಾಟಕ ಪರ ವಿದ್ವತ್ ಕಾವೇರಪ್ಪ 40ಕ್ಕೆ 4 ವಿಕೆಟ್, ರೋನಿತ್ ಮೋರೆ 48ಕ್ಕೆ 2, ವಾಸುಕಿ ಕೌಶಿಕ, ಮನೋಜ್ ಭಡಾಂಜೆ, ಕೆ.ಗೌತಮ್ ತಲಾ 1 ವಿಕೆಟ್ ಪಡೆದರು.