ಕತಾರ್‌ನಲ್ಲಿ ನಡೆಯುತ್ತಿರುವ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಸ್ಟಾರ್ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ಪ್ರೀ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ನಾಕೌಟ್ ಸುತ್ತಿಗೆ ಪ್ರವೇಶಿಸಿದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ತಂಡ ಪಾತ್ರವಾಗಿದೆ. ಪೋರ್ಚುಗಲ್ ಮೊದಲು, ಫ್ರಾನ್ಸ್ ಮತ್ತು ಬ್ರೆಜಿಲ್ ಅಗ್ರ 16 ರಲ್ಲಿ ಸ್ಥಾನ ಪಡೆದಿವೆ. ಬ್ರೆಜಿಲ್ ಸೋಮವಾರವೇ ಅರ್ಹತೆ ಗಳಿಸಿತು.
ಮಂಗಳವಾರ ರಾತ್ರಿ ಲುಸೇಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲಾರ್ಧ ಗೋಲು ರಹಿತವಾಗಿತ್ತು. ಎರಡೂ ತಂಡಗಳ ಆಟಗಾರರು ಗೋಲು ಗಳಿಸುವ ಪ್ರಯತ್ನ ನಡೆಸಿದರು. ಆದರೆ, ಯಾರಿಗೂ ಯಶಸ್ಸು ಸಿಗಲಿಲ್ಲ. ಇತ್ತೀಚೆಗೆ ಮ್ಯಾಂಚೆಸ್ಟರ್ ಯುನೈಟೆಡ್ ತೊರೆದಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ಕೂಡ ಗೋಲು ಗಳಿಸಲು ವಿಫಲರಾಗಿದ್ದರು. ಪೋರ್ಚುಗಲ್ ತಂಡ ಗುರಿಯತ್ತ ಒಂದೇ ಒಂದು ಹೊಡೆತವನ್ನು ಹೊಡೆಯಲಿಲ್ಲ.
ಮೊದಲಾರ್ಧದಲ್ಲಿ ಉರುಗ್ವೆ ತಂಡಕ್ಕೆ ಮುನ್ನಡೆ ಸಾಧಿಸಲು ಉತ್ತಮ ಅವಕಾಶಗಳಿದ್ದರೂ ರೊಡ್ರಿಗೋ ಬೆಂಟನ್ಕುರ್ ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಬೆಂಟನ್ಕುರ್ ಮೂರು ಪೋರ್ಚುಗೀಸ್ ಡಿಫೆಂಡರ್‌ಗಳನ್ನು ತಪ್ಪಿಸುತ್ತಾ ಗೋಲ್ ಪೋಸ್ಟ್‌ಗೆ ಬಹಳ ಹತ್ತಿರ ಬಂದರು. ಆದರೆ, ಗೋಲ್‌ಕೀಪರ್ ಡಿಯೊಗೊ ಕೋಸ್ಟಾ ಅವರ ಕಣ್ಣನ್ನು ತಪ್ಪಿಸಿ ಚೆಂಡು ದಾಟಲು ಸಾಧ್ಯವಾಗಲಿಲ್ಲ.
ಸ್ವಲ್ಪ ಸಮಯದ ನಂತರ, ಬ್ರೂನೋ ಫೆರ್ನಾಂಡಿಸ್ 54 ನೇ ನಿಮಿಷದಲ್ಲಿ ಪೋರ್ಚುಗಲ್ ಪರವಾಗಿ ಪೆನಾಲ್ಟಿ ಬಾಕ್ಸ್‌ನ ಹೊರಗಿನಿಂದ ಅದ್ಭುತ ಗೋಲು ಗಳಿಸಿದರು. ಹೆಚ್ಚುವರಿ ಸಮಯದಲ್ಲಿ (93ನೇ ನಿಮಿಷ) ಬ್ರೂನೋ ಫೆರ್ನಾಂಡಿಸ್ ಪೆನಾಲ್ಟಿಯಲ್ಲಿ ಎರಡನೇ ಗೋಲು ಗಳಿಸಿದರು.
2 ಪಂದ್ಯಗಳಲ್ಲಿ ಪೋರ್ಚುಗಲ್‌ಗೆ ಇದು ಎರಡನೇ ಗೆಲುವು ಸಾಧಿಸಿದೆ. ಇದರಿಂದಾಗಿ ಅವರು ಗ್ರೂಪ್-ಎಚ್‌ನಲ್ಲಿ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇದೇ ಸಮಯದಲ್ಲಿ, ಘಾನಾ ತಂಡವು 3 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಕೊರಿಯಾ ಮತ್ತು ಉರುಗ್ವೆ ತಲಾ ಒಂದು ಅಂಕದೊಂದಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.
fifa, cristiano ronaldo, portugal, world cup football,