Vijay Hazare: ಕರ್ನಾಟಕ-ಸೌರಾಷ್ಟ್ರ ಸೆಮಿಫೈನಲ್ ಫೈಟ್
ವಿಜಯ್ ಹಜಾರೆ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಸೆಮಿಫೈನಲ್ ಪಂದ್ಯದಲ್ಲಿ ಬುಧವಾರ ಸೌರಾಷ್ಟ್ರ ತಂಡದ ವಿರುದ್ಧ ಕಾದಾಟ ನಡೆಸಲಿದೆ.
ಅಹಮದಾಬಾದ್ ನಲ್ಲಿ ನಡೆಯುವ ಪಂದ್ಯ ಎರಡೂ ತಂಡಗಳಿಗೆ ಪ್ರಮುಖವಾಗಿದೆ. ಕ್ವಾರ್ಟರ್ ಫೈನಲ್ ನಲ್ಲಿ ಪಂಜಾಬ್ ತಂಡವನ್ನು ಮಣಿಸಿರುವ ಕರ್ನಾಟಕ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಸೌರಾಷ್ಟ್ರ ಸಹ ಎಂಟರ ಘಟ್ಟದ ಪಂದ್ಯದಲ್ಲಿ ತಮಿಳು ನಾಡು ತಂಡವನ್ನು ಮಣಿಸಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಎರಡೂ ತಂಡಗಳು ಬಲಾಢ್ಯವಾಗಿವೆ.

ಕರ್ನಾಟಕ ತಂಡ ಸಂಘಟಿತ ಆಟದ ಮೇಲೆ ವಿಶ್ವಾಸ ಇಟ್ಟುಕೊಂಡಿದೆ. ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ನಿಕಿನ್ ಜೋಸ್ ಗರಿಷ್ಠ ರನ್ ಸಾಧಕರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅನುಭವಿ ಆಟಗಾರರಾದ ಮಯಾಂಕ್ ಅಗರ್ ವಾಲ್, ಶ್ರೇಯಸ್ ಗೋಪಾಲ್, ಆರ್.ಸಮರ್ಥ್, ಮನೀಷ್ ಪಾಂಡೆ ತಂಡಕ್ಕೆ ಶಕ್ತಿ ತುಂಬ ಬಹುದು.
ಔಲಿಂಗ್ ವಿಭಾಗದಲ್ಲಿ ವಿ.ಕೌಶಿಕ್, ವಿ.ಕಾವೇರಪ್ಪ, ರೋನಿತ್ ಮೋರೆ, ಕೆ.ಗೌತಮ್ ವಿಕೆಟ್ ಗಳನ್ನು ಪಡೆದು ಮಿಂಚಿದ್ದಾರೆ. ಈ ಆಟಗಾರರು ಸ್ಥಿರ ಪ್ರದರ್ಶನ ನೀಡಿದಲ್ಲಿ ಗೆಲುವು ಸಾಧ್ಯ.
ಸೌರಾಷ್ಟ್ರ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದು ಮಹತ್ವದ ಪಂದ್ಯದಲ್ಲಿ ಅಬ್ಬರಿಸುವ ಯೋಜನೆ ಹಾಕಿಕೊಂಡಿದ್ದಾರೆ.
Vijay Hazare: Karnataka-Saurashtra fight