ಮೂರು ನಿಮಿಷಗಳಲ್ಲಿ ಎರಡು ಗೋಲುಗಳನ್ನು ಬಾರಿಸಿದ ಕ್ಯಾಮರೂನ್ ತಂಡ ಸೋಲಿನಿಂದ ಪಾರಾಗಿದೆ.
63ನೇ ನಿಮಷಿದವರೆಗೂ 1-3 ಗೋಲುಗಳಿಂದ ಹಿಂದಿದ್ದ ಕ್ಯಾಮರೂನ್ ನಂತರ 3-3 ಗೋಲುಗಳಲ್ಲಿ ಡ್ರಾ ಸಾಧಿಸಿ 1 ಅಂಕ ಪಡೆಯಿತು.
ಪಂದ್ಯದ 29ನೇ ನಿಮಿಷದಲ್ಲಿ ಕ್ಯಾಮರೂನ್ ತಂಡದ ಚಾರ್ಲ್ಸ್ ಕ್ಯಾಸಲೆಟ್ಟೊ ಗೋಲು ಬಾರಿಸಿ ಮುನ್ನಡೆ ನೀಡಿದರು. ಸರ್ಬಿಯ ಮೊದಲ ಅವಧಿಮುಕ್ತಾಯದ ವೇಳೆಗೆ 2 ಗೋಲು ಹೊಡೆಯಿತು.
ಪಾವ್ಲೊವಿಚ್ (45+1) ಗೋಲು ಹೊಡೆದರು, ಮಿಲ್ಕೊವಿಕ್ ಆಕರ್ಷಕವಾಗಿ (45+3) ಗೋಲು ಹೊಡೆದರು.
ಎರಡನೆ ಅವಧಿಯ 63ನೇ ನಿಮಿಷದಲ್ಲಿ ವಿನ್ಸಮಟ್ ಅಬೂಬಕ್ಕರ್ ಗೋಲು ಹೊಡೆದರು. ಈ ಆಘಾತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಮೋಟಿಂಗ್ ಮತ್ತೊಂದು ಗೋಲು ಹೊಡೆದು ಸರ್ಬಿಯಾಗೆ ಮತ್ತೆ ಆಘಾತ ನೀಡಿದರು. ಕ್ಯಾಮರೂನ್ ನೋಡನೋಡುತ್ತಿದ್ಂತೆ ಡ್ರಾ ಸಾಧಿಸಿ ಸೋಲಿನಿಂದ ಪಾರಾಯಿತು.