ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಪಾಕಿಸ್ತಾನವನ್ನು 107 ರನ್‌ಗಳಿಂದ ಸೋಲಿಸಿ, ಗೆಲುವಿನ ಅಭಿಯಾನ ಆರಂಭಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ ಗಳಲ್ಲಿ 7 ವಿಕೆಟ್ ಗೆ 244 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು 43 ಓವರ್‌ಗಳಲ್ಲಿ 137 ರನ್ ಗಳಿಸಿ ಆಲೌಟ್ ಆಯಿತು.

ಸ್ನೇಹ್ ರಾಣಾ ಮತ್ತು ಪೂಜಾ ವಸ್ತ್ರಾಕರ್ ಅದ್ಭುತ ಇನ್ನಿಂಗ್ಸ್ ಆಡಿದರು. ಪೂಜಾ 59 ಎಸೆತಗಳಲ್ಲಿ 67 ರನ್ ಗಳಿಸಿದರು. ಇದೇ ಸಮಯದಲ್ಲಿ ಸ್ನೇಹ್ ಬ್ಯಾಟ್‌ನಿಂದ 53 ರನ್‌ಗಳು ಸಿಡಿಸಿದರು. ಸ್ಮೃತಿ ಮಂಧಾನ ಕೂಡ 52 ರನ್‌ಗಳ ಕೊಡುಗೆ ನೀಡಿದರು.

ಪಾಕಿಸ್ತಾನ ವಿರುದ್ಧ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ, ಭಾರತಕ್ಕೆ ಇದು ಸತತ ನಾಲ್ಕನೇ ಗೆಲುವು. ಇದಕ್ಕೂ ಮುನ್ನ 2009, 2013 ಮತ್ತು 2017ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕ್ ತಂಡವನ್ನು ಸೋಲಿಸಿತ್ತು. ಇದು ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸತತ 11 ನೇ ಜಯವಾಗಿದೆ.

ಟೀಂ ಇಂಡಿಯಾ ಗೆಲುವಿನಲ್ಲಿ ಸ್ಪಿನ್ ಬೌಲರ್ ರಾಜೇಶ್ವರಿ ಗಾಯಕ್ವಾಡ್ ಅದ್ಭುತ ಪ್ರದರ್ಶನ ನೀಡಿದರು. ರಾಜೇಶ್ವರಿ ಕೇವಲ 31 ರನ್ ನೀಡಿ 4 ವಿಕೆಟ್ ಪಡೆದರು. ಪಾಕ್ ಆರಂಭಿಕ ಆಟಗಾರ್ತಿ ಜವೇರಿಯಾ ಖಾನ್ (11), ಆಲಿಯಾ ರಿಯಾಜ್ (11), ಫಾತಿಮಾ ಸನಾ (17) ಮತ್ತು ವಿಕೆಟ್ ಕೀಪರ್ ಸಿದ್ರಾ ನವಾಜ್ (12) ಅವರನ್ನು ಔಟ್ ಮಾಡುವ ಮೂಲಕ ಪಾಕಿಸ್ತಾನ ತಂಡದ ಬೆನ್ನು ಮುರಿದರು.
7ನೇ ವಿಕೆಟ್ ಗೆ ದಾಖಲೆಯ ಜೊತೆಯಾಟ
ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 244 ರನ್ ಗಳಿಸಿತ್ತು. ಭಾರತ 114 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಸ್ನೇಹ್ ರಾಣಾ ಮತ್ತು ಪೂಜಾ ವಸ್ತ್ರಕರ್ ಅದ್ಭುತ ಇನ್ನಿಂಗ್ಸ್ ಆಡಿದರು. ಪೂಜಾ 59 ಎಸೆತಗಳಲ್ಲಿ 67 ರನ್ ಗಳಿಸಿದರು. ಸ್ನೇಹ್ 53 ರನ್ ಗಳಿಸಿದರು. ಈ ಜೋಡಿ ಏಳನೆ ವಿಕೆಟ್ ಗೆ ಭಾರತದ ಪರ ಗರಿಷ್ಠ ರನ್ ಕಲೆ ಹಾಕಿತು. ಈ ಜೋಡಿ 97 ಎಸೆತಗಳಲ್ಲಿ 122 ರನ್ ಸಿಡಿಸಿದರು.
ಇವರಿಬ್ಬರ ಹೊರತಾಗಿ ದೀಪ್ತಿ ಶರ್ಮಾ 40 ರನ್ ಗಳಿಸಿದರು. ಅಭ್ಯಾಸ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಶತಕ ಸಿಡಿಸಿದ್ದ ಹರ್ಮನ್‌ಪ್ರೀತ್ ಕೌರ್ ಕೇವಲ 5 ರನ್ ಗಳಿಸಿ ಔಟಾದರು.
ರಿಚಾ ಘೋಷ್, ನಾಯಕಿ ಮಿಥಾಲಿವಿಶೇಷ ಕೊಡುಗೆ ನೀಡಲಿಲ್ಲ. ರಿಚಾ 1 ರನ್ ಗಳಿಸಿದರೆ, ಮಿಥಾಲಿ ಕೇವಲ 9 ರನ್ ಗಳಿಸಿ ಔಟಾದರು. ಪಾಕಿಸ್ತಾನ ಪರ ನಶ್ರಾ ಸಂಧು ಮತ್ತು ನಿದಾ ದಾರ್ ತಲಾ ಎರಡು ವಿಕೆಟ್ ಪಡೆದರು. ಸ್ಮೃತಿ ಮಂಧಾನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ್ದರು. ಇವರು 71 ಎಸೆತಗಳಲ್ಲಿ 50 ರನ್ ಗಳಿಸಿದರು. ಅವರ ಬ್ಯಾಟ್‌ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದ್ದವು.
ಪಾಕಿಸ್ತಾನ ಪರ ಸಿದ್ರಾ ಅಮೀನ್ (30), ಡಯಾನಾ ಬೇಗ್ (24), ಫಾತಿಮಾ ಸನಾ (17), ಬಿಸ್ಮಾ ಮರೂಫ್ (15) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.
ಭಾರತದ ಪರ ಸ್ನೇಹಾ ರಾಣಾ ಹಾಗೂ ಜೂಲನ್ ಗೋಸ್ವಾಮಿ ತಲಾ ಎರಡು ವಿಕೆಟ್ ಪಡೆದು ಜಯದಲ್ಲಿ ಮಿಂಚಿದರು.