ಮೊಹಾಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ಅಶ್ವಿನ್ ದಾಖಲೆಯನ್ನು ಬರೆದಿದ್ದಾರೆ.
ಸ್ಟಾರ್ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. ಮೊಹಾಲಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಚರಿತ್ ಅಸ್ಲಂಕಾ (9) ಅವರ ವಿಕೆಟ್ ಪಡೆಯುತ್ತಿದ್ದಂತೆ ಅಶ್ವಿನ್ ಈ ದಾಖಲೆಯನ್ನು ಮಾಡಿದರು ಮತ್ತು ಕಪಿಲ್ ದೇವ್ (434) ಅವರ ದಾಖಲೆಯನ್ನು ಮುರಿದರು. ಭಾರತ ತಂಡದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ದಾಖಲೆ ಅನಿಲ್ ಕುಂಬ್ಳೆ (619) ಹೆಸರಿನಲ್ಲಿದೆ.
ಎರಡನೇ ದಿನ ಶ್ರೀಲಂಕಾ ಬ್ಯಾಟ್ಸ್‌ಮನ್ ಧನಂಜಯ್ ಡಿ ಸಿಲ್ವಾ ಅವರನ್ನು ಅಶ್ವಿನ್ ಔಟ್ ಮಾಡುವ ಮೂಲಕ ನ್ಯೂಜಿಲೆಂಡ್‌ನ ಮಾಜಿ ವೇಗಿ ಸರ್ ರಿಚರ್ಡ್ ಹ್ಯಾಡ್ಲಿ ಅವರನ್ನು ಹಿಂದಿಕ್ಕಿದ್ದರು.
ಕಪಿಲ್ ದೇವ್ 131 ಪಂದ್ಯಗಳಲ್ಲಿ 434 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ ಕುಂಬ್ಳೆ ಭಾರತದ ಆಟಗಾರರಲ್ಲಿ ಮುಂಚೂಣಿಯಲ್ಲಿದ್ದಾರೆ. 132 ಪಂದ್ಯಗಳಲ್ಲಿ 619 ವಿಕೆಟ್‌ಗಳನ್ನು ಪಡೆದಿದ್ದಾರೆ. ಆರ್ ಅಶ್ವಿನ್ 85 ಪಂದ್ಯಗಳಲ್ಲಿ 432 ವಿಕೆಟ್ ಪಡೆದಿದ್ದಾರೆ.
ಟೀಮ್ ಇಂಡಿಯಾದ ಪರ ಅನಿಲ್ ಕುಂಬ್ಳೆ, ಕಪಿಲ್ ದೇವ್, ಹರ್ಭಜನ್ ಸಿಂಗ್, ಅಶ್ವಿನ್ ಮಾತ್ರ 400ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅತಿ ಹೆಚ್ಚು ವಿಕೆಟ್ ಗಳನ್ನು ಪಡೆದವರ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯಾ ಮುರಳಿಧರನ್ ಇದ್ದು ಇವರ ಖಾತೆಯಲ್ಲಿ 800 ವಿಕೆಟ್ ಇವೆ. ಎರಡನೇ ಸ್ಥಾನದಲ್ಲಿ ದಿವಂಗತ ಶೇನ್ ವಾರ್ನ್ ಇದ್ದಾರೆ. ಇವರು 708 ವಿಕೆಟ್ ಕಬಳಿಸಿದ್ದಾರೆ.