ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮೊದಲ ದಿನ ಎಡವಿದೆ. ಉತ್ತರ ಪ್ರದೇಶದ ಬಿಗು ದಾಳಿಗೆ ಆತಿಥೇಯ ತಂಡ ರನ್ಗಳಿಸಲು ಪರದಾಡಿದೆ. ರವಿ ಕುಮಾರ್ ಸಮರ್ಥ್ ಹೊರತು ಪಡಿಸಿ ಉಳಿದವರಿಂದ ಹೆಚ್ಚು ಕೊಡುಗೆ ಬರಲಿಲ್ಲ.
ಬೆಂಗಳೂರಿನ ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ಟಾಸ್ ಗೆದ್ದ ಉತ್ತರ ಪ್ರದೇಶ ಫೀಲ್ಡಿಂಗ್ ಆರಿಸಿಕೊಂಡಿತು. ರವಿಕುಮಾರ್ ಸಮರ್ಥ್ ಮತ್ತು ಮಯಾಂಕ್ ಅಗರ್ವಾಲ್ ದೊಡ್ಡ ಜೊತೆಯಾಟ ತಂದುಕೊಡಲಿಲ್ಲ. ಅಗರ್ವಾಲ್ 10 ರನ್ಗಳಿಸಿ ಔಟಾದರು. ಕರುಣ್ ನಾಯರ್ ಕೊಡುಗೆ 29 ರನ್ ಮಾತ್ರ. ಸಮರ್ಥ್ 57 ರನ್ಗಳಿಸಿದ್ದಾಗ ಸೌರಭ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು.
ಕೆ.ವಿ. ಸಿದ್ದಾರ್ಥ್ ಕ್ರೀಸ್ನಲ್ಲಿ ನೆಲೆಯೂರುವ ಪ್ರಯತ್ನ ಮಾಡಿದರು. ಆದರೆ ನಾಯಕ ಮನೀಷ್ ಪಾಂಡೆ 27 ರನ್ಗಳಿಸಿ ಔಟಾದರು. ಶ್ರೀನಿವಾಸ್ ಶರತ್ ಶೂನ್ಯ ಸುತ್ತಿದರೆ, ಸಿದ್ದಾರ್ಥ್ ಆಟ 37ಕ್ಕೆ ಅಂತ್ಯಕಂಡಿತು. ಕೆ. ಗೌತಮ್ ಕೊಡುಗೆ 12 ರನ್ ಮಾತ್ರ.
ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ 7 ವಿಕೆಟ್ ಕಳೆದುಕೊಂಡು 213 ರನ್ಗಳಿಸಿದೆ. 26 ರನ್ಗಳಿಸಿರುವ ಶ್ರೇಯಸ್ ಗೋಪಾಲ್ ಮತ್ತು 12 ರನ್ಗಳಿಸಿರುವ ವೈಶಾಕ್ ಅಜೇಯರಾಗುಳಿದಿದ್ದಾರೆ. ಯುಪಿ ಪರ ಸೌರಭ್ ಕುಮಾರ್ 4 ಹಾಗೂ ಶಿವಂ ಮಾವಿ 3 ವಿಕೆಟ್ ಪಡೆದು ಮಿಂಚಿದರು.