USA Atlanta Open t-20 cricket – ದ್ವಿಶತಕ ಸಿಡಿಸಿದ್ದ ಕೆರೆಬಿಯನ್ ದೈತ್ಯ ರಕೀಮ್ ಕಾರ್ನ್‍ವಾಲ್
ವೆಸ್ಟ್ ಇಂಡೀಸ್ ದೈತ್ಯ ಆಟಗಾರ ರಕೀಮ್ ಕಾರ್ನ್‍ವಾಲ್ ಅವರು ಟಿ-20 ಕ್ರಿಕೆಟ್ ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅಮೆರಿಕಾದ ಅಟ್ಲಾಂಟಾ ಓಪನ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ದ್ವಿಶತಕದ ಸಾಧನೆ ಮಾಡಿದ್ದಾರೆ.
ಅಟ್ಲಾಂಟಾ ಫೈರ್ ತಂಡವನ್ನು ಪ್ರತಿನಿಧಿಸುತ್ತಿರುವ ರಕೀಮ್ ಕಾರ್ನ್‍ವಾಲ್ ಅವರು ಎದುರಾಳಿ ಸ್ಕ್ವೇರ್ ಡ್ರೈವ್ ಬೌಲರ್ ಗಳಿಗೆ ದುಃಸ್ವಪ್ನವಾಗಿ ಕಾಡಿದ್ದಾರೆ.
ರಕೀಮ್ ಅವರು 77 ಎಸತೆಗಳಲ್ಲಿ ಅಜೇಯ 205 ರನ್ ಗಳಿಸಿದ್ದಾರೆ. ಇದರಲ್ಲಿ 22 ಸಿಕ್ಸರ್ ಗಳು ಮತ್ತು 17 ಬೌಂಡರಿಗಳಿದ್ದವು. ರಕೀಮ್ ಅವರ ಸ್ಪೋಟಕ ಆಟದಿಂದ ಆಟ್ಲಾಂಟಾ ಫೈರ್ ತಂಡ ನಿಗದಿತ 20 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತು. ಅಲ್ಲದೆ ಅಟ್ಲಾಂಟಾ ಫೈರ್ ತಂಡ 172 ರನ್ ಗಳಿಂದ ಗೆಲುವು ಕೂಡ ದಾಖಲಿಸಿತು.
ಆಟ್ಲಾಂಟಾ ಓಪನ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. ತಲಾ ನಾಲ್ಕು ಗುಂಪುಗಳ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ನಲ್ಲಿ ಹೋರಾಟ ನಡೆಸಲಿವೆ.ಗೆದ್ದ ತಂಡ 75ಸಾವಿರ ನಗದು ಬಹುಮಾನವನ್ನು ಪಡೆದುಕೊಳ್ಳಲಿದೆ.
ಅಂದ ಹಾಗೇ ಆಲ್ ರೌಂಡರ್ ಆಗಿರುವ ರಕೀಮ್ ಕಾರ್ನ್‍ವಾಲ್ ಅವರು, ಇನ್ನೂ ಕೂಡ ವೆಸ್ಟ್ ಇಂಡೀಸ್ ವೈಟ್ ಬಾಲ್ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಆದ್ರೆ ವೆಸ್ಟ್ ಇಂಡೀಸ್ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಶ್ರೀಲಂಕಾ ವಿರುದ್ಧ ಆಡಿದ್ದರು.
https://video.twimg.com/ext_tw_video/1577825998569078786/pu/vid/1280×720/LNXkeqZjtUHdcRoi.mp4?tag=12