Legends cricket League ಇಂಡಿಯಾ ಕ್ಯಾಪಿಟಲ್ಸ್ ಚಾಂಪಿಯನ್
ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಚಾಂಪಿಯನ್ನಾಗಿ ಹೊರಹೊಮ್ಮಿದೆ.
ಜೈಪುರದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 211 ರನ್ ಕಲೆ ಹಾಕಿತು. ಭಿಲ್ವಾರಾ ಕಿಂಗ್ಸ್ 18.2 ಓವರ್ ಗಳಲ್ಲಿ 107 ರನ್ ಗಳಿಗೆ ಆಲೌಟ್ ಆಯಿತು.
ಇಂಡಿಯಾ ಕ್ಯಾಪಿಟಲ್ಸ್ ಪರ ನಾಯಕ ಗೌತಮ್ ಗಂಭೀರ್ 8, ಡ್ವೇನ್ ಸ್ಮಿತ್ 3, ಹ್ಯಾಮಿಲ್ಟನ್ ಮಸಕಾಡ್ಜ 1, ದಿನೇಶ್ ರಾಮ್ದಿನ್ 0, ರಾಸ್ ಟೇಲರ್ 82, ಮಿಚೆಲ್ ಜಾನ್ಸನ್ 62, ಆಶ್ಲೆ ನರ್ಸ್ ಅಜೇಯ 42 ರನ್ ಗಳಿಸಿದರು.
ಭಿಲ್ವಾರಾ ಕಿಂಗ್ಸ್ ಪರ ರಾಹುಲ್ ಪರ 30ಕ್ಕೆ 4 ವಿಕೆಟ್ ಪಡೆದರು.ಮಾಂಟಿ ಪೆನ್ಸರ್ 13ಕ್ಕೆ 2 ವಿಕೆಟ್ ಪಡೆದರು.
212 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಭಿಲ್ವಾರಾ ಕಿಂಗ್ಸ್ ತಂಡ ಇಂಡಿಯಾ ಕ್ಯಾಪಿಲ್ಸ್ ದಾಳಿಗೆ ತತ್ತರಿಸಿ ಹೋಯ್ತು. ಮಾರ್ನೆ ವಾನ್ ವಿಕ್ 5, ವಿಲಿಯಮ್ ಪೋರ್ಟರ್ ಫೀಲ್ಡ್ 12, ಶೇನ್ ವಾಟ್ಸನ್ 27, ಯೂಸುಫ್ ಪಠಾಣ್ 6, ಜೆಸಲ್ ಕಾರಿಯಾ 22, ಇರ್ಫಾನ್ ಪಠಾಣ್ 2, ಶ್ರೀಶಾಂತ್ ಅಜೇಯ 13 ರನ್ ಗಳಿಸಿದರು.
ಪವನ್ ಸುಯಲ್ ಮತ್ತು ಪ್ರವೀಣ್ ತಾಂಬೆ ತಲಾ 2 ವಿಕೆಟ್ ಪಡೆದರು. ರಾಸ್ ಟೇಲರ್ ಪಂದ್ಯ ಶ್ರೇಷ್ಠ ಹಾಗೂ ಯೂಸುಫ್ ಪಠಾಣ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.