US Open 2022 – ಕಾರ್ಲೊಸ್, ನಡಾಲ್ ಮೂರನೇ ಸುತ್ತಿಗೆ ಎಂಟ್ರಿ..!
ಯುವ ಆಟಗಾರ ಸ್ಪೇನ್ ನ ಕಾರ್ಲೊಸ್ ಆಕ್ಲಾರಝ್ ಅವರು ಯುಎಸ್ ಓಪನ್ ಟೆನಿಸ್ ಟೂನಿಯ ಪುರುಷರ ಸಿಂಗಲ್ಸ್ ನಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ಕಾರ್ಲೊಸ್ ಆಕ್ಲಾರಝ್ ಅವರು 6-2, 6-1, 7-5ರಿಂದ ಅರ್ಜೆಂಟಿನಾದ ಫೆಡೆರಿಕೊ ಕೊರಿಯಾ ಅವರನ್ನು ಸೋಲಿಸಿದ್ರು.
ಮೂರನೇ ಸುತ್ತಿನಲ್ಲಿ ಕಾರ್ಲೊಸ್ ಅವರು ಅಮೆರಿಕಾದ ಜೆನ್ಸನ್ ಬ್ರೂಕ್ಸ್ ಬೈ ಅವರನ್ನು ಎದುರಿಸಲಿದ್ದಾರೆ.
ಜೆನ್ಸನ್ ಬ್ರೂಕ್ಸ್ ಅವರು ಎರಡನೇ ಸುತ್ತಿನ ಪಂದ್ಯದಲ್ಲಿ 6-4, 7-6, 6-1ರಿಂದ ಬೊರ್ನಾ ಕಾರಿಕ್ ಅವರನ್ನು ಪರಾಭವಗೊಳಿಸಿದ್ರು.
ಇನ್ನು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳ ಚಾಂಪಿಯನ್ ರಫೆಲ್ ನಡಾಲ್ ಕೂಡ ಮೂರನೇ ಸುತ್ತು ತಲುಪಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ರಫೆಲ್ ನಡಾಲ್ ಅವರು, 2-6, 6-4, 6-2, 6-1ರಿಂದ ಫಾಬಿಯೊ ಫೋಗಿನಿ ಅವರನ್ನು ಸೋಲಿಸಿದ್ದಾರೆ.
ಹಾಗೇ ರಿಚರ್ಡ್ ಗ್ಯಾಸ್ಕೇಟ್ ಅವರು 6-2, 6-4, 4-6 6-4ರಿಂದ ಮಿಮಿರ್ ಕೆಸ್ಮಾನೊವಿಕ್ ಅವರನ್ನು ಸೋಲಿಸಿದ್ರೆ, ಫ್ರಾನ್ಸೆಸ್ ಟಿಯಾಫೋಯ್ 7-6, 7-5, 7-6ರಿಂದ ಜೇಸನ್ ಕುಬ್ಲೇರ್ ಅವರನ್ನು ಮಣಿಸಿದ್ದಾರೆ.
ಪುರುಷರ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಐಯ್ಯಾ ಇವಾಸ್ಕಾ 6-4, 4-6, 7-6, 6-3ರಿಂದ ಹ್ಯೂಬರ್ಟ್ ಹುರ್ಕಾಝ್ ಅವರನ್ನು ಪರಾಭವಗೊಳಿಸಿದ್ದಾರೆ.