Japan Open Super 750 – ಎಚ್. ಪ್ರಣೋಯ್ ಗೆ ಸೋಲು.. ಭಾರತದ ಹೋರಾಟ ಅಂತ್ಯ..!

ಭಾರತದ ಎಚ್. ಎಸ್. ಪ್ರಣೋಯ್ ಅವರು ಜಪಾನ್ ಓಪನ್ ಸೂಪರ್ 750 ಟೂರ್ನಿಯ ಕ್ವಾರ್ಟರ್ ಫೈನಲ್ ನಲ್ಲಿ ನಿರಾಸೆ ಅನುಭವಿಸಿದ್ದಾರೆ. ಇದರೊಂದಿಗೆ ಜಪಾನ್ ಓಪನ್ ಟೂರ್ನಿಯಲ್ಲಿ ಭಾರತದ ಹೋರಾಟ ಕೂಡ ಅಂತ್ಯಗೊಂಡಿದೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಚ್.ಎಸ್, ಪ್ರಣೋಯ್ ಅವರು 21-17, 15-21, 22-20ರಿಂದ ಚೌ ಟೀನ್ ಚೆನ್ ವಿರುದ್ಧ ಸೋಲು ಅನುಭವಿಸಿದ್ದಾರೆ.
ಜಿದ್ದಾಜಿದ್ದಿನಿಂದ ಸಾಗಿದ್ದ ಈ ಪಂದ್ಯ ಸುಮಾರು 80 ನಿಮಿಷಗಳ ಕಾಲ ನಡೆಯಿತ್ತು. ಅಂತಿಮವಾಗಿ ಪ್ರಣೋಯ್ ಅವರಿಗೆ ಗೆಲುವಿನ ನಗೆ ಬೀರಲು ಟೀನ್ ಚೆನ್ ಅವರು ಅವಕಾಶ ನೀಡಲಿಲ್ಲ.
ಮೊದಲ ಎರಡು ಸೆಟ್ ಗಳಲ್ಲಿ ಪ್ರಣೋಯ್ ಮತ್ತು ಟಿನ್ ಚೆನ್ ಸಮಬಲದ ಹೋರಾಟವನ್ನು ಪ್ರದರ್ಶಿಸಿದ್ರು. ಅಂತಿಮ ಸೆಟ್ ನಲ್ಲಿ ಪ್ರಣೋಯ್ ಅದ್ಭುತ ಆಟವನ್ನೇ ಆಡಿದ್ದರು. ಅಲ್ಲದೆ ಮೂರು ಬಾರಿ ಪಂದ್ಯವನ್ನು ಗೆಲ್ಲುವಂತೆ ನೋಡಿಕೊಂಡ್ರು. ಆದ್ರೆ ಅಂತಿಮವಾಗಿ ಟಿನ್ ಚೆನ್ ಮೇಲುಗೈ ಸಾಧಿಸಲು ಯಶಸ್ವಿಯಾದ್ರು.