US Open: ಜೋಕೊಗೆ ಸಿಗುತ್ತಾ ಆಡುವ ಅವಕಾಶ
ವಿಂಬಲ್ಡನ್ 2022 ರ ಚಾಂಪಿಯನ್ ನೊವಾಕ್ ಜೊಕೊವಿಕ್ ಜುಲೈ 10 ರಂದು ತಮ್ಮ ಏಳನೇ ವಿಂಬಲ್ಡನ್ ಪ್ರಶಸ್ತಿಯನ್ನು ಪಡೆದರು ಮತ್ತು ಈಗ 21 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಹೊಂದಿದ್ದಾರೆ.
ಜೊಕೊವಿಕ್ ಅವರು ಪ್ರಸ್ತುತ ತಮ್ಮ ರಜೆಯನ್ನು ಕುಟುಂಬಸ್ಥರೊಂದಿಗೆ ಕಳೆಯುತ್ತಿದ್ದಾರೆ. ಸದ್ಯ ಅವರ ಅಭಿಮಾನಿಗಳಲ್ಲಿ ಹೆಚ್ಚು ಚರ್ಚಿಸಲಾದ ವಿಷಯವೆಂದರೆ ಅವರು ಮತ್ತೆ ಮೈದಾನಕ್ಕೆ ಯಾವಾಗ ಎಂಟ್ರಿ ನೀಡುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದಾರೆ. ಆದರೆ ಈ ಎಲ್ಲದರ ಮಧ್ಯ ಈಗ ಚರ್ಚಿತವಾಗುತ್ತಿರುವ ವಿಷಯ ಜೋಕೊವಿಚ್ ಯುಎಸ್ ಓಪನ್ ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಎದ್ದಿದೆ.

ಯುಎಸ್ ಓಪನ್ ಬಗ್ಗೆ ನೋವಾಕ್ ಅವರಿಗೆ ಕೇಳಿದಾಗ “ನಾನು ಅಲ್ಲಿಗೆ ಹೋಗಲು ನಿಜವಾಗಿಯೂ ಇಷ್ಟಪಡುತ್ತೇನೆ” ಎಂದು ಜೊಕೊವಿಕ್ ಹೇಳಿದರು.
ನೊವಾಕ್ ಜೊಕೊವಿಕ್ ಅವರು COVID-19 ವ್ಯಾಕ್ಸಿನೇಷನ್ ಪಡೆದಿಲ್ಲ. ಅವರು ಇನ್ನೂ ಕೋವಿಡ್ ವ್ಯಾಕ್ಸಿನೇಷನ್ ತೆಗೆದುಕೊಂಡಿಲ್ಲ ಮತ್ತು ಆದ್ದರಿಂದ ಯುನೈಟೆಡ್ ಸ್ಟೇಟ್ಸ್ ಪ್ರವೇಶಿಸಲು ಸಾಧ್ಯವಿಲ್ಲ. ಈ ವರ್ಷದ ಜನವರಿಯಲ್ಲಿ ಜೊಕೊವಿಚ್ ಆಸ್ಟ್ರೇಲಿಯಾ ಓಪನ್ ನಲ್ಲೂ ಆಡಲು ಅನುಮತಿ ನೀಡಿರಲಿಲ್ಲ. ಅಲ್ಲದೆ ಆಯೋಜಕರ ತೀರ್ಪನ್ನು ಪ್ರಶ್ನಿಸಿ ಜೋಕೊ ನ್ಯಾಯಲಯದ ಮೊರೆ ಹೋಗಿದ್ದರು. ಅಲ್ಲದೆ ಅವರಿಗೆ ವರ್ಷದ ಗ್ರ್ಯಾನ್ ಸ್ಲ್ಯಾಮ್ ಟೂರ್ನಿ ಆಡುವ ಅವಕಾಶದಿಂದ ವಂಚಿರಾಗಿದ್ದರು.

ಈ ಬಗ್ಗೆ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರ ಜೋಕೊದ್ದಾಗಿದೆ. ಅಲ್ಲದೆ ತಮ್ಮ ಅಜೇಯ ಓಟ ಮುಂದುವರೆಸಲು ಲಸಿಕೆ ಪಡೆಯಲಿದ್ದಾರೆ ಎಂಬುದು ಅಭಿಮಾನಿಗಳ ನಂಬಿಕೆಯಾಗಿದೆ.
ಭಾನುವಾರ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಿಕ್ ಕಿರ್ಗಿಯೊಸ್ ಅವರನ್ನು 4-6, 6-3, 6-4, 7-6 (3) ಸೆಟ್‌ಗಳಿಂದ ಸೋಲಿಸಿ ವಿಂಬಲ್ಡನ್ ಚಾಂಪಿಯನ್ ಆಗಿದ್ದರು.
Unvaccinated Novak Djokovic Be Allowed to Participate?