K.L.Rahul- NCA ಜುಲಾನ್ ಗೋಸ್ವಾಮಿ ಬೌಲಿಂಗ್.. ಕೆ.ಎಲ್. ರಾಹುಲ್ ಬ್ಯಾಟಿಂಗ್..!

ಕಳೆದ ಕೆಲವು ದಿನಗಳಿಂದ ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ.
ಇತ್ತೀಚೆಗೆ ಜರ್ಮನಿಯಲ್ಲಿ ತೊಡೆ ಸಂದು ನೋವಿಗೆ ಚಿಕಿತ್ಸೆ ಪಡೆದುಕೊಂಡು ವಾಪಸ್ ಬಂದಿರುವ ಕೆ.ಎಲ್. ರಾಹುಲ್ ಮತ್ತೆ ಕಮ್ ಬ್ಯಾಕ್ ಮಾಡಲು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಮುಂದಿನ ವೆಸ್ಟ್ ಇಂಡೀಸ್ ವಿರುದ್ದದ ಐದು ಪಂದ್ಯಗಳ ಟಿ-20 ಸರಣಿಗೆ ಕೆ.ಎಲ್. ರಾಹುಲ್ ಆಯ್ಕೆಯಾಗಿದ್ದಾರೆ. ಆದ್ರೆ ಅದಕ್ಕಿಂತ ಮುನ್ನ ಕೆ.ಎಲ್. ರಾಹುಲ್ ಫಿಟ್ ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಬೇಕಿದೆ.
ಈಗಾಗಲೇ ಕೆ.ಎಲ್. ರಾಹುಲ್ ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.
ಇದೀಗ ಮತ್ತೊಂದು ವಿಡಿಯೋ ಕೂಡ ವೈರಲ್ ಆಗುತ್ತಿದೆ. ಕಾರಣ, ಕೆ.ಎಲ್. ರಾಹುಲ್ ಅವರಿಗೆ ನೆಟ್ಸ್ ನಲ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ಟೀಮ್ ಇಂಡಿಯಾ ಮಹಿಳಾ ತಂಡದ ಹಿರಿಯ ವೇಗಿ ಜುಲಾನ್ ಗೋಸ್ವಾಮಿ ಅವರು ಬೌಲಿಂಗ್ ಮಾಡಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.
ಕೆ.ಎಲ್. ರಾಹುಲ್ ಅವರ ಅಭಿಯೊಬ್ಬ ಈ ವಿಡಿಯೋವನ್ನು ತನ್ನ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅಲ್ಲದೆ ಕೆ.ಎಲ್. ರಾಹುಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜುಲಾನ್ ಗೋಸ್ವಾಮಿ ಬೌಲಿಂಗ್ ಮಾಡುತ್ತಿದ್ದಾರೆ. ಕೆ.ಎಲ್. ರಾಹುಲ್ ಅವರು ವೆಸ್ಟ್ ಇಂಡೀಸ್ ಸರಣಿಗೆ ಕೆ.ಎಲ್. ರಾಹುಲ್ ಫುಲ್ ಫಿಟ್ ಆಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
K L Rahul is batting and Jhulan Goswami is bowling.
He is fully fit for West Indies tour 💙🔥 #MenInBlue
📍NCA, Bangalore#KlRahul #IndvsWI #INDvsEND
— 𝘛𝘶𝘴𝘩𝘢𝘳 ⚡ (@TUSHARBAGGA1M) July 18, 2022
ಅಂದ ಹಾಗೇ ಕೆ.ಎಲ್. ರಾಹುಲ್ ಐಪಿಎಲ್ ನಂತರ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ದದ ಟಿ-20 ಸರಣಿಗೆ ಟೀಮ್ ಇಂಡಿಯಾವನ್ನು ಮುನ್ನಡೆಸುವ ಅವಕಾಶ ಸಿಕ್ಕಿತ್ತು. ಆದ್ರೆ ಗಾಯದಿಂದ ತಂಡದಿಂದ ಹೊರಬಿದ್ದರು. ಬಳಿಕ ಇಂಗ್ಲೆಂಡ್ ಪ್ರವಾಸದಿಂದಲೂ ಹೊರಗುಳಿದಿದ್ದರು.

ಇತ್ತೀಚೆಗೆ ರಾಹುಲ್ ತನ್ನ ಮದುವೆಯ ವಿಚಾರದಲ್ಲೂ ಸುದ್ದಿಯಾಗಿದ್ದರು. ಬಹುಕಾಲದ ಗೆಳತಿ ಆತಿಯಾ ಶೆಟ್ಟಿ ಜೊತೆ ಮುಂದಿನ ಮೂರು ತಿಂಗಳೊಳಗೆ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದ್ರೆ ಮೂಲಗಳ ಪ್ರಕಾರ ಕೆ.ಎಲ್. ರಾಹುಲ್ ಮುಂದಿನ ವರ್ಷ ಮದುವೆಯಾಗುತ್ತಿದ್ದಾರೆ ಎಂದು ಅವರ ಆಪ್ತ ಬಳಗದವರು ಹೇಳುತ್ತಿದ್ದಾರೆ.
ಇನ್ನು ಟೀಮ್ ಇಂಡಿಯಾ ಮಹಿಳಾ ತಂಡದ ವೇಗಿ ಜುಲಾನ್ ಗೋಸ್ವಾಮಿ ಅವರು ಈಗಾಗಲೇ ಟಿ-20 ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ. ಆದ್ರೆ ಅವರು ಮಹಿಳಾ ಏಕದಿನ ತಂಡದಲ್ಲೂ ಕಾಣಿಸಿಕೊಂಡಿಲ್ಲ. ಸದ್ಯ ಅವರು ವಿಶ್ರಾಂತಿಯಲ್ಲಿದ್ದಾರೆ. ಆದ್ರೂ ಅಭ್ಯಾಸ ನಡೆಸುವುದನ್ನು ಬಿಟ್ಟಿಲ್ಲ.