US Open Tennis 2022 – ಕಾರ್ಲೊಸ್ ಮತ್ತು ರೂಡ್ ನಡುವೆ ಬಿಗ್ ಫೈಟ್
![US Open Tennis 2022 - ಕಾರ್ಲೊಸ್ ಮತ್ತು ರೂಡ್ ನಡುವೆ ಬಿಗ್ ಫೈಟ್ 3 Norway's Casper Ruud us open 2022 sports karnataka](http://sportskarnataka.com/wp-content/uploads/2022/09/ruud-300x200.png)
ಸ್ಪೇನ್ ನ ಕಾರ್ಲೊಸ್ ಆಕ್ಲಾರಾಝ್ ಮತ್ತು ನಾರ್ವೆಯ ಕ್ಯಾಸ್ಪರ್ ರೂಡ್ ಅವರು 2022ರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ. ಅಲ್ಲದೆ ನಂಬರ್ ವನ್ ಸ್ಥಾನಕ್ಕೂ ಪೈಪೋಟಿ ನಡೆಯಲಿದೆ.
ವರ್ಷದ ಕೊನೆಯ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯಾಗಿರುವ ಯುಎಸ್ ಓಪನ್ ಟೂರ್ನಿಯ ಫೈನಲ್ ಪಂದ್ಯ ಭಾನುವಾರ ನಡೆಯಲಿದೆ. ಅಚ್ಚರಿಯದಂದ್ರೆ ಈ ವರ್ಷದ ಯುಎಸ್ ಓಪನ್ ಟೂರ್ನಿಯಲ್ಲಿ ಯುವ ಆಟಗಾರನೊಬ್ಬನ ಉದಯವಾಗಲಿದೆ.
ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ ಕಾರ್ಲೊಸ್ ಆಕ್ಲಾರಾಝ್ ಅವರು 6-7, 6-3, 6-1, 6-7, 6-3ರಿಂದ ಅಮೆರಿಕಾದ ಫ್ರಾನ್ಸೆಸ್ ಟೈಫೋಯ್ ಅವರನ್ನು ಪರಾಭವಗೊಳಿಸಿದ್ದಾರೆ.
19ರ ಹರೆಯದ ಕಾರ್ಲೊಸ್ ಅವರು ತನ್ನ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಯ ಫೈನಲ್ ನಲ್ಲಿ ಆಡುತ್ತಿದ್ದಾರೆ. ಅಲ್ಲದೆ 19ರ ಹರೆಯದಲ್ಲೇ ವಿಶ್ವದ ನಂಬರ್ ವನ್ ಆಟಗಾರನಾಗುವ ಅವಕಾಶ ಅವರ ಮುಂದಿದೆ.
ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ನಾರ್ವೆಯ ಕ್ಯಾಸ್ಪರ್ ರೂಡ್ ಅವರು ರಷ್ಯಾದ ಕರೆನ್ ಖಚನೊವಾ ಅವರನ್ನು ಮಣಿಸಿದ್ರು.
ಇನ್ನು ಮಹಿಳೆಯರ ಸಿಂಗಲ್ಸ್ ನಲ್ಲಿ ಪೊಲೆಂಡ್ ನ ಐಗಾ ಸ್ವಿಟೆಕ್ ಮತ್ತು ಜಬ್ಯುರ್ ನಡುವೆ ಶನಿವಾರದಂದು ಫೈನಲ್ ಪಂದ್ಯ ನಡೆಯಲಿದೆ.