Durand Cup 2022 – 2ನೇ ಕ್ವಾರ್ಟರ್ ಫೈನಲ್ ನಲ್ಲಿ ಬೆಂಗಳೂರು – ಒಡಿಸ್ಸಾ ಕಾದಾಟ

ಡುರಾಂಡ್ ಕಪ್ ಫುಟ್ ಬಾಲ್ ಟೂರ್ನಿಯ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಂಗಳೂರು ಫುಟ್ ಬಾಲ್ ಕ್ಲಬ್ ಮತ್ತು ಒಡಿಸ್ಸಾ ಫುಟ್ ಬಾಲ್ ಕ್ಲಬ್ ತಂಡಗಳು ಇಂದು ಸಂಜೆ 6 ಗಂಟೆಗೆ ಕೊಲ್ಕತ್ತಾದ ಕಿಶೋರ್ ಭಾರತಿ ಅಂಗಣದಲ್ಲಿ ಕಾದಾಟ ನಡೆಸಲಿವೆ.
ಈ ಪಂದ್ಯದಲ್ಲಿ ಬೆಂಗಳೂರು ಫುಟ್ ಬಾಲ್ ಕ್ಲಬ್ ತಂಡ ಗೆಲ್ಲುವ ನೆಚ್ಚಿನ ತಂಡವಾಗಿದೆ. ಇದಕ್ಕೆ ಪೂರಕವಾಗಿ ಅಂಕಿ ಅಂಶಗಳು ಕೂಡ ಬಿಎಫ್ ಸಿ ತಂಡಕ್ಕೆ ನೆರವು ನೀಡಲಿದೆ. ಈಗಾಗಲೇ ಒಡಿಸ್ಸಾ ಮತ್ತು ಬೆಂಗಳೂರು ತಂಡಗಳು ಹತ್ತು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರು ಬಾರಿ ಬೆಂಗಳೂರು ಫುಟ್ ಬಾಲ್ ಕ್ಲಬ್ ತಂಡ ಗೆಲುವು ದಾಖಲಿಸಿದೆ. ಒಡಿಸ್ಸಾ ತಂಡ ಮೂರು ಬಾರಿ ಜಯ ಸಾಧಿಸಿದೆ. ಒಂದು ಪಂದ್ಯ ಡ್ರಾನದಲ್ಲಿ ಅಂತ್ಯಗೊಂಡಿದೆ.
Bengaluru FC: Gurpreet Singh Sandhu (GK), Prabir Das, Sandesh Jhingan, Aleksandar Jovanovic, Naorem Roshan Singh, Bruno Ramires, Suresh Singh, Javi Hernandez, Udanta Singh, Sunil Chhetri, Roy Krishna
Odisha FC: Lalthuammawia Ralte, Sebastian Thangmuansang, Narender Gahlot, Carlos Delgado, Sahil Panwar, Osama Malik, Saul Crespo, Raynier Fernandes, Nandhakumar, Jerry Mawihmingthanga, Diego Mauricio
ಸೆಮಿಫೈನಲ್ ಪ್ರವೇಶಿಸಿದ ಮಹಮ್ಮದನ್ ಸ್ಪೋಟ್ರ್ಸ್ ಕ್ಲಬ್ –
ಡುರಾಂಡ್ ಕಪ್ ( Durand Cup 2022 ) ಫುಟ್ ಬಾಲ್ ಟೂರ್ನಿಯಲ್ಲಿ ಮಹಮ್ಮದನ್ ಸ್ಪೋಟ್ರ್ಸ್ ಕ್ಲಬ್ ತಂಡ ಸೆಮಿಫೈನಲ್ ಪ್ರವೇಶಿಸಿದೆ.
ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಹಮ್ಮದನ್ ಸ್ಪೋಟ್ರ್ಸ್ ಕ್ಲಬ್ ತಂಡ 3-0 ಗೋಲುಗಳಿಂದ ಕೇರಳ ಬ್ಲ್ಯಾಸ್ಟರ್ಸ್ ತಂಡವನ್ನು ಪರಾಭವಗೊಳಿಸಿತು.
ಮಹಮ್ಮದನ್ ಸ್ಪೋಟ್ರ್ಸ್ ಕ್ಲಬ್ ತಂಡದ ಪರ 17ನೇ ನಿಮಿಷದಲ್ಲಿ ಫಯಾಝ್ ಅವರು ಮೊದಲ ಗೋಲು ದಾಖಲಿಸಿದ್ರು. ಹಾಗೇ, ಆಬಿಯೊಲಾ ದೌಡಾ ಅವರು 59 ಮತ್ತು 84ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿನ ಅಂತರವನ್ನು ಹೆಚ್ಚಿಸಿದ್ರು.