ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ನೇರ ಸೆಟ್ಗಳಿಂದ ಸೋತು ಕ್ವಾರ್ಟರ್ ಫೈನಲ್ನಲ್ಲಿ ಎಡವಿದ್ದಾರೆ. ಯುವ ಆಟಗಾರ ಲಕ್ಷ್ಯಸೇನ್ ಯುಎಸ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ.
12ನೇ ವಿಶ್ವ ರ್ಯಾಂಕ್ ಆಟಗಾರ್ತಿ ಸಿಂಧು, ಮಹಿಳಾ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ ನಲ್ಲಿ ಚೀನಾದ ಗಾವೊ ಫಾಂಗ್ ಜೀ ವಿರುದ್ಧ 20-22, 13-21 ಅಂಕಗಳಿಂದ ಮಣಿದರು.
36ನೇ ರ್ಯಾಂಕ್ ಆಟಗಾರ್ತಿ ಗಾವೊ ಫಂಗ್ ವಿರುದ್ಧ ಸಿಂಧು ಕಠಿಣ ಸವಾಲು ಎದುರಿಸಿದರು. ಅದರಲ್ಲೂ ಎರಡನೆ ಸುತ್ತಿನಲ್ಲಿ ಸಿಂಧು ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡು ಸೋತರು.
ಇನ್ನು ಪುರುಷರ ವಿಭಾಗದ ಸಿಂಗಲ್ಸ್ನ ಕ್ವಾರ್ಟರ್ನಲ್ಲಿ ಲಕ್ಷ್ಯಸೇನ್, ಭಾರತದವರೇ ಆದ ಶಂಕರ್ ಮತ್ತು ಸ್ವಾಮಿ ವಿರುದ್ಧ 21-10, 21-17 ಅಂಕಗಳಿಂದ ಗೆದ್ದರು. ಆತ್ಮವಿಶ್ವಾಸದಿಂದಲೆ ಆಡಿದ ಲಕ್ಷ್ಯಸೇನ್ ಭರವಸೆಯ ಆಟಗಾರನ ವಿರುದ್ಧ 38 ನಿಮಿಷಗಳ ಕಾಲ ಸೆಣಸಿ ಗೆದ್ದರು.
ಲಕ್ಷ್ಯಸೇನ್ ಸೆಮಿಫೈನಲ್ಸ್ನಲ್ಲಿ ಎರಡನೆ ಸೀಡ್ ಆಟಗಾರ ಚೀನಾದ ಲೀ ಶೀ ಫೆಂಗ್ ವಿರುದ್ಧ ಸೆಣಸಲಿದ್ದಾರೆ. ಫೆಂಗ್ ವಿರುದ್ಧ ಲಕ್ಷ್ಯಸೇನ್ ಈವರೆಗೂ 5-3 ಗೆಲುವಿನ ದಾಖಲೆ ಹೊಂದಿದ್ದಾರೆ.