ಟೆನಿಸ್ನ ಭವಿಷ್ಯದ ಸೂಪರ್ ಸ್ಟಾರ್ ಎಂದು ಕರೆಸಿಕೊಳ್ಳುವ ಸ್ಪೇನ್ನ ಕಾರ್ಲೊಸ್ ಆಲ್ಕರಾಝ್ 2023ರ ವಿಂಬಲ್ಡನ್ ಟೆನಿಸ್ ಟೂರ್ನಿಯ ನೂತನ ಚಾಂಪಿಯನ್ನಾಗಿ ಹೊರ ಹೊಮ್ಮಿದ್ದಾರೆ.
ಭಾನುವಾರ ಇಲ್ಲಿನ ಆಲ್ ಇಂಗ್ಲೆಂಡ್ ಕೋರ್ಟ್ ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ 23 ಗ್ರ್ಯಾನ್ ಸ್ಲಾಂಗಳ ಒಡೆಯ ನವೋಕ್ ಜೊಕೊವಿಕ್ ವಿರುದ್ಧ 4 ಗಂಟೆ 42 ನಿಮಿಷಗಳ ಕಾಲ ಹೋರಾಡಿ 20 ವರ್ಷಗಳ ಆಲ್ಕರಾಝ್ 1-6, 7-6(8/6), 6-1, 3-6, 6-4 ಸೆಟ್ಗಳಲ್ಲಿ ಜಯ ಸಾಧಿಸಿ ಸಂಭ್ರಮಿಸಿದರು.
ಕೇವಲ 34 ನಿಮಿಷದಲ್ಲಿ ಜೋಕೋವಿಕ್ 6-1 ಅಂಕಗಳಿಂದ ಮೊದಲ ಸೆಟ್ ಗೆದ್ದುಕೊಂಡರು. ಸತತ 5ನೇ, ಒಟ್ಟಾರೆ 8ನೇ ವಿಂಬಲ್ಡನ್ ಮತ್ತು 24ನೇ ಗ್ರ್ಯಾನ್ ಸ್ಲಾಮ್ ಗೆಲ್ಲುವ ಕನಸು ಕಂಡಿದ್ದರು.
ನಂತರ ಎಚ್ಚೆತ್ತು ಅಡಿದ ಹಾಲಿ ಯುಎಸ್ ಚಾಂಪಿಯನ್ ಆಲ್ಕರಾಜ್ ಎರಡನೆ ಸೆಟ್ ನಿಂದ ಆಟವನ್ನು ತೀವ್ರಗೊಳಿಸಿದರು. ಒಂದೊಂದು ಅಂಕಕ್ಕೂ ಉಭಯ ಆಟಗಾರರು ಪೈಪೋಟಿ ನಡೆಸಿದರು.
ಟೈ ಬ್ರೇಕ್ ರನಲ್ಲಿ ಮುನ್ನಡೆ ಸಾಧಿಸಿದರೂ ಜೋಕೋವಿಕೆಗ್ ಅಂಕ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 85 ನಿಮಿಷಗಳ ಕಾಲ ಪ್ರಾಬಲ್ಯ ಮೆರೆದ ಆಲ್ಕರಾಜ್ ಎರಡನೆ ಸೆಟ್ ಗೆದ್ದರು.
ಮೂರನೆ ಸೆಟ್ನಲ್ಲೂ ಆಲ್ಕರಾಜ್ ಪ್ರಾಬಲ್ಯ ಮೆರೆದರು. ನಾಲ್ಕನೆ ಸೆಟ್ ನಲ್ಲಿ ತೀವ್ರ ಪೈಪೋಟಿ ನೀಡಿದ ಜೋಕೋವಿಕ್ ಗೆದ್ದುಕೊಂಡು ಪಂದ್ಯವನ್ನು 5ನೇ ಸೆಟ್ ಗೆ ಕೊಂಡೊಯ್ದರು.ನಿರ್ಣಾಯಕ ಹಂತದಲ್ಲಿ ಆಲ್ಕರಾಜ್ 4-2 ಮುನ್ನಡೆ ಸಾಧಿಸಿ ಜೋಕೋವಿಕ್ ಮೇಲೆ ಒತ್ತಡ ಹೇರಿದರು.ಎಚ್ಚರಿಕೆಯಿಂದ ಆಡಿ ಗೆದ್ದುಕೊಂಡರು. ವಿಂಬಲ್ನನಲ್ಲಿ ಚಾಂಪಿಯನ್ ಆದ 3ನೇ ಅಇ ಕಿರಿಯ ಆಟಗಾರ ಎನಿಸಿದ್ದಾರೆ.