ಸ್ಪ್ಯಾನಿಷ್ ರಾಷ್ಟ್ರೀಯತೆ ಪಡೆದ Vinicius Junior
ಬ್ರೆಜಿಲ್ ನ ವಿನಿಶಿಯಸ್ ಜೂನಿಯರ್ ಸ್ಪ್ಯಾನಿಷ್ ರಾಷ್ಟ್ರೀಯತೆಯನ್ನು ಪಡೆದುಕೊಂಡಿದ್ದಾರೆ ಎಂದು ಅವರ ಕ್ಲಬ್ ರಿಯಲ್ ಮ್ಯಾಡ್ರಿಡ್ ಸೋಮವಾರ ಘೋಷಿಸಿದೆ.
ಈ ಮೂಲಕ ಕ್ಲಬ್ಗೆ ಮತ್ತೊಂದು ಯೂರೋಪಿಯನ್ ಒಕ್ಕೂಟವಲ್ಲದ (EU) ಆಟಗಾರನನ್ನು ನೋಂದಾಯಿಸಲು ಅವಕಾಶ ಸಿಗಲಿದೆ. “ನಮ್ಮ ಬ್ರೆಜಿಲಿಯನ್ ಆಟಗಾರ ವಿನಿಶಿಯಸ್ ಜೂನಿಯರ್ ಶುಕ್ರವಾರ ಸೆಪ್ಟೆಂಬರ್ 2 ರಂದು ಸ್ಪ್ಯಾನಿಷ್ ಸಂವಿಧಾನಕ್ಕೆ ನಿಷ್ಠೆಯ ಪ್ರಮಾಣವಚನ ಸ್ವೀಕರಿಸಿದರು. ಆದ್ದರಿಂದ ಅವರು ಈ ಕ್ಷಣದಿಂದ ಸ್ಪ್ಯಾನಿಷ್ ರಾಷ್ಟ್ರೀಯತೆಯನ್ನು ಹೊಂದಿದ್ದಾರೆ” ಎಂದು ರಿಯಲ್ ಮ್ಯಾಡ್ರಿಡ್ನ ಹೇಳಿಕೆ ತಿಳಿಸಿದೆ.
ಸ್ಪ್ಯಾನಿಷ್ ಲಿಗಾ ನಿಯಮಗಳ ಅಡಿಯಲ್ಲಿ, ಕ್ಲಬ್ನಿಂದ ನೋಂದಾಯಿಸಲಾದ EU ಅಲ್ಲದ ಆಟಗಾರರ ಸಂಖ್ಯೆಗೆ ಮಿತಿಗಳಿವೆ. 22 ವರ್ಷ ವಯಸ್ಸಿನ ವಿನಿಶಿಯಸ್, 2018 ರಲ್ಲಿ ಫ್ಲೆಮೆಂಗೊದಿಂದ ರಿಯಲ್ ಮ್ಯಾಡ್ರಿಡ್ಗೆ ಸೇರಿಕೊಂಡರು ಮತ್ತು ಪ್ರಮುಖ ಆಟಗಾರರಾದರು. ಅವರು ಕಳೆದ ಋತುವಿನ ಚಾಂಪಿಯನ್ಸ್ ಲೀಗ್ ಫೈನಲ್ ಆಡಿದ್ದರು. ಮತ್ತು ಅವರು 14 ಬಾರಿ ಬ್ರೆಜಿಲ್ ತಂಡದ ಪರ ಆಡಿದ್ದಾರೆ.
Real Madrid, Vinicius Junior, Spanish Nationality