US Open 2022 ಕ್ವಾರ್ಟರ್ ಫೈನಲ್ ಪ್ರವೇಶಿಸದ ನಿಕ್ ಕೈರ್ಗಿಸೊ
ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ನಿಕ್ ಕೈರ್ಗಿಸೊ ಅವರು ಪುರುಷರ ಸಿಂಗಲ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಭಾನುವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ನಿಕ್ ಕೈರ್ಗಿಸೊ ಅವರು ವಿಶ್ವದ ನಂಬರ್ ವನ್ ಆಟಗಾರ ರಷ್ಯಾದ ಡೇನಿಲ್ ಮೆಡ್ವೆಡೇವ್ ಅವರನ್ನು ಅಚ್ಚರಿಗೊಳಿಸಿದ್ರು.
ಪಂದ್ಯದ ಆರಂಭದಿಂದಲೇ ಅಮೋಘ ಆಟವನ್ನಾಡಿದ್ದ ಕೈರ್ಗಿಸೊ ಅವರು 7-6, 3-6, 6-3, 6-2ರಿಂದ ಡೇನಿಲ ಮೆಡ್ವೆಡೇವ್ ಅವರನ್ನು ಪರಾಭವಗೊಳಿಸಿದ್ರು.
ಹಾಗೇ ಇಟಲಿಯ ಮ್ಯಾಟೊ ಬೆರೆಟಿನಿ ಅವರು ಸತತ ಎರಡನೇ ಬಾರಿ ಯುಎಸ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಮ್ಯಾಟೊ ಬೆರೆಟಿನಿ ಅವರು 3-6ಮ 7-6, 6-3, 4-6, 6-2ರಿಂದ ಸ್ಪೇನ್ ನ ಆಲೆಜಾಂಡ್ರೊ ಡೆವಿಡೊವಿಕ್ ಅವರನ್ನು ಮಣಿಸಿದ್ರು.
ಇನ್ನು ಮಹಿಳೆಯರ ಸಿಂಗಲ್ಸ್ ನಲ್ಲಿ ಅಮೆರಿಕಾದ ಕೊಕೊ ಗೌಫ್ ಅವರು 7-5, 7-5ರಿಂದ ಚೀನಾದ ಝೆಹಾಂಗ್ ಶುಯ್ ಅವರನ್ನು ಪರಾಭವಗೊಳಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಹಾಗೇ ಮಹಿಳೆಯರ ಇನ್ನೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ನ ಕರೊಲಿನ್ ಗಾರ್ಸಿಯಾ ಅವರನ್ನು ಮಣಿಸಿದ್ರು. ಅದ್ಭುತ ಆಟವನ್ನಾಡಿದ್ದ ಗಾರ್ಸಿಯಾ ಅವರು 6-4, 6-1ರಿಂದ ಗೆಲುವಿನ ನಗೆ ಬೀರಿದ್ರು. Nick Kyrgios, Daniil Medvedev, Matteo Berrettini, Alejandro Davidovich, Coco Gauff