Durand cup football 2022 -ರಾಜಸ್ತಾನ ಯುನೈಟೆಡ್ ಮತ್ತು ಇಂಡಿಯನ್ ನೇವಿ ಕಾದಾಟ
ಡುರಾಂಡ್ ಕಪ್ ಫುಟ್ ಬಾಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ (ಸೆಪ್ಟಂಬರ್ 5) ರಾಜಸ್ತಾನ ಯುನೈಟೆಡ್ ಮತ್ತು ಇಂಡಿಯನ್ ನೇವಿ ತಂಡಗಳು ಕಾದಾಟ ನಡೆಸಲಿವೆ.
ಬಿ ಗುಂಪಿನ ಈ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿವೆ. ಯಾಕಂದ್ರೆ, ಲೀಗ್ ನಲ್ಲಿ ಕೊನೆಯ ಎರಡು ಸ್ಥಾನಗಳನ್ನು ನಿರ್ಧರಿಸುವ ಪಂದ್ಯವಾಗಿದೆ.
ರಾಜಸ್ತಾನ ಯುನೈಟೆಡ್ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಗೆಲುವು, ಒಂದು ಸೋಲು ಹಾಗೂ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ನಾಲ್ಕು ಅಂಕಗಳನ್ನು ಪಡೆದಿರುವ ರಾಜಸ್ತಾನ ಯುನೈಟೆಡ್ ತಂಡ ಮೂರನೇ ಸ್ಥಾನದಲ್ಲಿದೆ. ಹಾಗೇ ಇಂಡಿಯನ್ ನೇವಿ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಒಂದು ಅಂಕ ಪಡೆದು ನಾಲ್ಕನೇ ಸ್ಥಾನದಲ್ಲಿದೆ.
ಈಗಾಗಲೇ ಬಿ ಗುಂಪಿನಿಂದ ಮುಂಬೈ ಸಿಟಿ ಫುಟ್ ಬಾಲ್ ಕ್ಲಬ್ ಮತ್ತು ಎಟಿಕೆ ಮೋಹನ್ ಬಾಗನ್ ತಂಡಗಳು ಕ್ವಾರ್ಟರ್ ಫೈನಲ್ ಗೆ ಅರ್ಹತೆಯನ್ನು ಪಡೆದುಕೊಂಡಿವೆ. ಈ ಎರಡು ತಂಡಗಳು ಲೀಗ್ ನ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಗೆಲುವುಗಳನ್ನು ದಾಖಲಿಸಿವೆ. ಹಾಗೇ ತಲಾ ಒಂದೊಂದು ಪಂದ್ಯಗಳನ್ನು ಡ್ರಾ ಮಾಡಿಕೊಂಡ್ರೆ, ತಲಾ ಒಂದೊಂದು ಪಂದ್ಯಗಳಲ್ಲಿ ಸೋಲು ಅನುಭವಿಸಿವೆ. ಗೋಲು ಗಳಿಕೆಯ ಆಧಾರದಲ್ಲಿ ಮುಂಬೈ ಸಿಟಿ ತಂಡ ಬಿ ಗುಂಪಿನಲ್ಲಿಅಗ್ರಸ್ಥಾನ ಪಡೆದುಕೊಂಡಿದೆ.
ಇಂದಿನ ಇನ್ನೊಂದು ಪಂದ್ಯದಲ್ಲಿ ನೆರೊಕಾ ಫುಟ್ ಬಾಲ್ ಕ್ಲಬ್ ಮತ್ತು ಚೆನ್ನೈಯನ್ ಫುಟ್ ಕ್ಲಬ್ ತಂಡಗಳು ಮುಖಾಮುಖಿಯಾಗಲಿವೆ. ಇದು ಸಿ ಗುಂಪಿನ ಕೊನೆಯ ಪಂದ್ಯವಾಗಿದೆ. ಅಂದ ಹಾಗೇ ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ ಈಗಾಗಲೇ ಹೈದ್ರಾಬಾದ್ ಫುಟ್‍ಬಾಲ್ ಕ್ಲಬ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಆರ್ಮಿ ರೆಡ್ ತಂಡ 4 ಪಂದ್ಯಗಳಲ್ಲಿ ಒಂದು ಗೆಲುವು, ಎರಡು ಡ್ರಾ ಹಾಗೂ ಒಂದು ಸೋಲಿನೊಂದಿಗೆ ಒಟ್ಟು ಐದು ಅಂಕಪಡೆದುಕೊಂಡಿದೆ. ಅಂಕಪಟ್ಟಿಯಲ್ಲಿ ಸದ್ಯಕ್ಕೆ ಎರಡನೇ ಸ್ಥಾನದಲ್ಲಿದೆ.
ಇನ್ನೊಂದೆಡೆ ಚೆನ್ನೈಯನ್ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಗೆಲುವು, ಒಂದು ಸೋಲು ಮತ್ತು ಒಂದು ಡ್ರಾದೊಂದಿಗೆ ನಾಲ್ಕು ಅಂಕಪಡೆದುಕೊಂಡಿದೆ. ಹಾಗೇ ನೆರೊಕಾ ತಂಡ ಒಂದು ಗೆಲುವು, ಒಂದು ಸೋಲು ಹಾಗೂ ಒಂದು ಡ್ರಾದೊಂದಿದೆ ನಾಲ್ಕು ಅಂಕಪಡೆದಿದೆ. ಹೀಗಾಗಿ ಎರಡು ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಿದೆ. todays match Rajasthan United vs Indian Navy, Neroca FC Vs Chennaiyin, footaball sports karnataka