US Open 2022- ಮೂರನೇ ಸುತ್ತು ಪ್ರವೇಶಿಸಿದ ಸೆರೆನಾ ವಿಲಿಯಮ್ಸ್..!

ಗ್ರ್ಯಾಂಡ್ ಸ್ಲ್ಯಾಂ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಅವರು ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಅವರು ವಿಶ್ವದ ಎರಡನೇ ಶ್ರೇಯಾಂಕಿತೆ ಆನೆಟ್ ಕಾಂಟವೇಟ್ ಅವರನ್ನು ಸೋಲಿಸಿದ್ರು.
ಅದ್ಭುತ ಆಟ ಪ್ರದರ್ಶಿಸಿದ ಸೆರೆನಾ ವಿಲಿಯಮ್ಸ್ 7-6, 2-6, 6-2ರಿಂದ ಆನೆಟ್ ಕಾಂಟವೇಟ್ ಅವರನ್ನು ಮಣಿಸಿದ್ರು.
ಮಹಿಳೆಯರ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತೆ ಗ್ರೀಸ್ ನ ಮರಿಯಾ ಸಕ್ಕಾರಿ ಅವರು ನಿರಾಸೆ ಅನುಭವಿಸಿದ್ರು.
ಎರಡನೇ ಸುತ್ತಿನ ಪಂದ್ಯದಲ್ಲಿ ಮರಿಯಾ ಸಕ್ಕಾರಿ ಅವರು 6-3, 5-7, 5-7ರಿಂದ ಚೀನಾದ ವಾಂಗ್ ಕ್ಸಿಯು ವಿರುದ್ಧ ಸೋಲು ಅನುಭವಿಸಿದ್ದರು. ಕಳೆದ ವರ್ಷ ಮರಿಯಾ ಸಕ್ಕಾರಿ ಅವರು ಯುಎಸ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಆದ್ರೆ ಈ ಬಾರಿ ಎರಡನೇ ಸುತ್ತಿನಲ್ಲೇ ಶ್ರೇಯಾಂಕ ರಹಿತೆ ಆಟಗಾರ್ತಿಯ ಎದುರು ಸೋಲು ಅನುಭವಿಸಿದ್ದಾರೆ.
ಮತ್ತೊಂದು ಪಂದ್ಯದಲ್ಲಿ 18ರ ಹರೆಯದ ಕೊಕೊ ಗೌಫ್ ಅವರು 6-2, 7-6ರಿಂದ ರೊಮಾನಿಯಾದ ಎಲೆನಾ ಗ್ಯಾಬ್ರಿಯೆಲ್ ರೌಸ್ ಅವರನ್ನು¸ ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಮೂರನೇ ಸುತ್ತಿನ ಪಂದ್ಯದಲ್ಲಿ ಕೊಕೊ ಗೌಫ್ ಅವರು ಅಮೆರಿಕಾದ ಮೆಡಿಸನ್ ಕೈಸ್ ಅವರನ್ನು ಎದುರಿಸಲಿದ್ದಾರೆ. ಮೆಡಿಸನ್ ಕೈಸ್ ಅವರು ಎರಡನೇ ಸುತ್ತಿನ ಪಂದ್ಯದಲ್ಲಿ 6-4, 5-7, 7-6ರಿಂದ ಇಟಲಿಯಾ ಕ್ಯಾಮಿಲಾ ಗಿಯೊರ್ಗಿ ಅವರನ್ನು ಮಣಿಸಿದ್ದರು.