US Open 2022- ನಿಕ್ ಕೈರ್ಗಿಸ್, ಆಂಡಿ ಮುರ್ರೆ ಮುನ್ನಡೆ

ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ನಿಕ್ ಕೈರ್ಗಿಸ್ ಅವರು ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಜಿದ್ದಾಜಿದ್ದಿನಿಂದ ಸಾಗಿದ ಎರಡನೇ ಸುತ್ತಿನ ಪಂದ್ಯದಲ್ಲಿ ನಿಕ್ ಕೈರ್ಗಿಸ್ ಅವರು 7-6, 6-4, 4-6, 6-4ರಿಂದ ಫ್ರಾನ್ಸ್ ನ ಬೆಂಜಮಿನ್ ಬೊಂಝಿ ಅವರನ್ನು ಮಣಿಸಿದ್ರು.
ಇನ್ನು ಮೂರನೇ ಸುತ್ತಿನ ಪಂದ್ಯದಲ್ಲಿ ನಿಕ್ ಕೈರ್ಗಿಸ್ ಅವರು ಅಮೆರಿಕಾದ ಜೆಜೆ ವೋಲ್ಫ್ ಅವರನ್ನು ಎದುರಿಸಲಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಜೆಜೆ ವೋಲ್ಫ್ ಅವರು 4-6, 7-5, 6-4, 6-3ರಿಂದ ಆಲೆಜಾಂಡ್ರೋ ಟಾಬಿಲೊ ಅವರನ್ನು ಸೋಲಿಸಿದ್ರು.
ಪುರುಷರ ಇನ್ನೊಂದು ಸಿಂಗಲ್ಸ್ ನಲ್ಲಿ ಮಾಜಿ ನಂಬರ್ ವನ್ ಆಟಗಾರ ಆಂಡಿ ಮುರ್ರೆ ಅವರು ಮುನ್ನಡೆ ಸಾಧಿಸಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಆಂಡಿ ಮುರ್ರೆ 5-7, 6-3, 6-1, 6-0ಯಿಂದ ಅಮೆರಿಕಾದ ಎಮಿಲಿಯೊ ನಾವಾ ಅವರನ್ನು ಪರಾಭವಗೊಳಿಸಿದ್ರು.