ನ್ಯೂಜಿಲೆಂಡ್ (Newzealand)ಕ್ರಿಕೆಟ್ ತಂಡದ ಆಲ್ರೌಂಡರ್ (All Rounder) ಕಾಲಿನ್ ಡಿ ಗ್ರಾಂಡ್ (Collin de Grandhomme) ಹೋಮ್ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ (Retirement) ಹೇಳಿದ್ದಾರೆ. ಗಾಯದ ಸಮಸ್ಯೆ ಹಾಗೂ ಯುವಕರಿಗೆ ಸ್ಥಾನ ಕೊಡುವ ಲೆಕ್ಕಾಚಾರದಲ್ಲಿ ಈ ನಿರ್ಧಾರ ಮಾಡಿರುವುದಾಗಿ ಕಾಲಿನ್ ತಿಳಿಸಿದ್ದಾರೆ. ಆಲ್ರೌಂಡರ್ ಈ ನಿರ್ಧಾರ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಕೋಚ್ ಗ್ಯಾರಿ ಸ್ಟಡ್ಗೆ ಶಾಕ್ ನೀಡಿದೆ.
ಮಧ್ಯಮ ವೇಗದ ಬೌಲಿಂಗ್ ಮತ್ತು ಮಧ್ಯಮ ಸರದಿಯ ಬ್ಯಾಟ್ಸ್ಮನ್ ಆಗಿ ಗ್ರಾಂಡ್ ಹೋಮ್ 2012ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ನ್ಯೂಜಿಲೆಂಡ್ ತಂಡದ ಪರವಾಗಿ ಈ ಆಟಗಾರ ಎಲ್ಲಾ ಮಾದರಿಯಲ್ಲಿ ಒಟ್ಟು 115 ಪಂದ್ಯಗಳನ್ನು ಆಡಿದ್ದರು. 36 ವರ್ಷದ ಗ್ರಾಂಡ್ಹೋಮ್ ತಮ್ಮ ಆಲ್ರೌಂಡರ್ ಆಟದಿಂದ ಖ್ಯಾತಿ ಪಡೆದಿದ್ದರು.
ಹಾರ್ಡ್ ಹಿಟ್ಟಿಂಗ್ ಬ್ಯಾಟ್ಸ್ಮನ್ ಆಗಿ ಹೆಸರು ಮಾಡಿದ್ದ ಗ್ರಾಂಡ್ಹೋಮ್ 2019ರ ಏಕದಿನ ವಿಶ್ವಕಪ್ ಫೈನಲ್ ಮತ್ತು 2021ರ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು. 29 ಟೆಸ್ಟ್ ಪಂದ್ಯಗಳಲ್ಲಿ (Test Match) ಗ್ರಾಂಡ್ಹೋಮ್ 2 ಶತಕ, 8 ಅರ್ಧ ಶತಕ ಮತ್ತು 49 ವಿಕೆಟ್ ಪಡೆದಿದ್ದರು. 45 ಏಕದಿನ ಪಂದ್ಯಗಳಲ್ಲಿ (ODI) 106.15 ಸ್ಟ್ರೈಕ್ ರೇಟ್ನಲ್ಲಿ 742 ರನ್ಗಳಿಸಿದ್ದರು. 30 ವಿಕೆಟ್ಗಳನ್ನು ಕೂಡ ಕಬಳಿಸಿದ್ದರು. 41 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ (T20I) 138.35 ಸ್ಟ್ರೈಕ್ರೇಟ್ನಲ್ಲಿ 505 ರನ್ ಹಾಗೂ 12 ವಿಕೆಟ್ ಪಡೆದಿದ್ದರು.
ಗ್ರಾಂಡ್ಹೋಮ್ ಪ್ರಥಮ ದರ್ಜೆ ಪಂದ್ಯವನ್ನು ಜಿಂಬಾಬ್ವೆ ಪರವಾಗಿ ಆರಂಭಿಸಿದ್ದರು. 2003-04ರ ಅಂಡರ್ 19 ವಿಶ್ವಕಪ್ ಅನ್ನು ಜಿಂಬಾಬ್ವೆ ಪರವಾಗಿ ಆಡಿದ್ದರು. 2006ರಲ್ಲಿ ಈ ಆಲ್ರೌಂಡರ್ ಆಕ್ಲಂಡ್ ಪರವಾಗಿ ಮೊದಲ ಪಂದ್ ಆಡಿದ್ದರು.
ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದರೂ, ಟಿ20 ಲೀಗ್ಗಳಲ್ಲಿ ಕಾಲಿನ್ ಆಡಲಿದ್ದಾರೆ. ಗ್ರಾಂಡ್ಹೋಮ್ ಬಿಗ್ಬ್ಯಾಷ್ನಲ್ಲಿ ಆಡಿಲೇಡ್ ಸ್ಟ್ರೈಕರ್ಸ್ ಪರವಾಗಿ ಕಣಕ್ಕಿಳಿಯಲಿದ್ದಾರೆ. ಐಪಿಎಲ್ ಪಂದ್ಯಗಳಿಗೂ ಲಭ್ಯವಿರುವುದಾಗಿ ಹೇಳಿದ್ದಾರೆ.