US Open 2022 – ಚಾಂಪಿಯನ್ ಆಟಗಾರ್ತಿಯರಿಗೆ ಶಾಕ್.. ಹೊರಬಿತ್ತು ಅಚ್ಚರಿಯ ಫಲಿತಾಂಶ

ಪ್ರತಿಷ್ಠಿತ ಯುಎಸ್ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಅಚ್ಚರಿ ಫಲಿತಾಂಶಗಳು ಹೊರಬಿದ್ದಿವೆ. ಸ್ಟಾರ್ ಆಟಗಾರ್ತಿಯರು ಮೊದಲ ಸೆಟ್ ನಲ್ಲೇ ನಿರಾಸೆ ಅನುಭವಿಸಿ ಟೂರ್ನಿಯಿಂದ ಹೊರನಡೆಯುತ್ತಿದ್ದಾರೆ.
ಕಳೆದ ಬಾರಿಯ ಚಾಂಪಿಯನ್ ಆಟಗಾರ್ತಿ ಎಮ್ಮಾ ರಾಡ್ಯುಕಾನ್ ಅವರು ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ. ಗ್ರೇಟ್ ಬ್ರಿಟನ್ ನ ಎಮ್ಮಾ ರಾಡ್ಯುಕಾನ್ ಅವರು 3-6, 3-6ರಿಂದ ಫ್ರಾನ್ಸ್ ನ ಆಲೀಝ್ ಕಾರ್ನೆಟ್ ವಿರುದ್ಧ ಸೋಲು ಅನುಭವಿಸಿದ್ದಾರೆ.
ಮಹಿಳೆಯರ ಇನ್ನೊಂದು ಸಿಂಗಲ್ಸ್ ನಲ್ಲಿ ವಿಂಬಲ್ಡನ್ ಚಾಂಪಿಯನ್ ಎಲೆನಾ ರ್ಯಾಬಕಿನಾ ಕೂಡ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ. ಫ್ರೆಂಚ್ ನ ಕ್ಲಾರಾ ಬ್ಯುರೆಲ್ ಅವರು 6-4, 6-4 ನೇರ ಸೆಟ್ ಗಳಿಂದ ಎಲೆನಾ ರಾಬಕಿನಾ ಅವರನ್ನು ಮಣಿಸಿದ್ರು.

ಮಹಿಳೆಯರ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲೂ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಅಮೆರಿಕಾದ ಡೇನಿಯಲ್ ಕಾಲಿನ್ಸ್ ಅವರು ಜಪಾನ್ ನೌಮಿ ಒಸಾಕಾಗೆ ಶಾಕ್ ನೀಡಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ನೌಮಿ ಒಸಾಕಾ 6-7, 3-6ರಿಂದ ಡೇನಿಯಲ್ ಕಾಲಿನ್ಸ್ ಅವರಿಗೆ ತಲೆಬಾಗಿದ್ದಾರೆ. ನೌಮಿ ಒಸಾಕಾ 2018 ಮತ್ತು 2020ರಲ್ಲಿ ಅಂದ್ರೆ ಎರಡು ಬಾರಿ ಯುಎಸ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು.
ಹಾಗೇ ಪೊಲೆಂಡ್ ನ ಐಗಾ ಸ್ವಿಟೆಕ್ 6-3, 6-0ಯಿಂದ ಇಟಲಿಯ ಜಾಸ್ಮಿನ್ ಪೌಲಿನಿ ಅವರನ್ನು ಪರಾಭವಗೊಳಿಸಿದ್ರು.