US open 2022- Carlos Alcaraz – ಟೆನಿಸ್ ಜಗತ್ತಿಗೆ ಚಾಂಪಿಯನ್ ಆಟಗಾರನ ಎಂಟ್ರಿ..! ಯುಎಸ್ ಓಪನ್ ಗೆದ್ದ ಸ್ಪೇನ್ ನ ಹೊಸ ಗೂಳಿ..!
![US open 2022- Carlos Alcaraz ಟೆನಿಸ್ ಜಗತ್ತಿಗೆ ಚಾಂಪಿಯನ್ ಆಟಗಾರನ ಎಂಟ್ರಿ..! ಯುಎಸ್ ಓಪನ್ ಗೆದ್ದ ಸ್ಪೇನ್ ನ ಹೊಸ ಗೂಳಿ..! 3 Casper Ruud us open 2022 sports karnataka](http://sportskarnataka.com/wp-content/uploads/2022/09/ruud-12-300x198.png)
ಸ್ಪೇನ್ ನ ಯುವ ಆಟಗಾರ ಕಾರ್ಲೊಸ್ ಆಕ್ಲರಾಝ್ ಅವರು ಯುಎಸ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
19ರ ಹರೆಯದ ಕಾರ್ಲೊಸ್ ಆಕ್ಲರಾಝ್ ಅವರು ಪುರುಷರ ಸಿಂಗಲ್ಸ್ ಫೈನಲ್ಸ್ ನಲ್ಲಿ ನಾರ್ವೆಯ ಕ್ಯಾಸ್ಪರ್ ರೂಡ್ ಅವರನ್ನು ಸೋಲಿಸಿದ್ರು. ಈ ಮೂಲಕ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ವನ್ ಸ್ಥಾನವನ್ನು ಪಡೆದುಕೊಂಡ್ರು.
ಭಾರಿ ಕುತೂಹಲ ಮೂಡಿಸಿದ್ದ ಫೈನಲ್ ಪಂದ್ಯದಲ್ಲಿ ಇಬ್ಬರು ಯುವ ಆಟಗಾರರು ಪ್ರಶಸ್ತಿಗಾಗಿ ಕಾದಾಟ ನಡೆಸಿದ್ರು. ಅಂತಿಮವಾಗಿ ಕಾರ್ಲೊಸ್ ಆಕ್ಲರಾಝ್ 6-4, 2-6, 7-6, 6-3ರಿಂದ ಕ್ಯಾಸ್ಪರ್ ರೂಡ್ ಅವರನ್ನು ಮಣಿಸಿ ಚೊಚ್ಚಲ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ್ರು.
ಇನ್ನು ಮಹಿಳೆಯರ ಡಬಲ್ಸ್ ನಲ್ಲಿ ಚೆಕ್ ಗಣರಾಜ್ಯದ ಕ್ಯಾಟೆರಿನಾ ಸಿನಿಯಾಕೊವಾ ಮತ್ತು ಬಾರ್ಬೊರಾ ಕ್ರೆಜೆಸಿಕೊವಾ ಅವರು ಪ್ರಶಸ್ತಿ ಗೆದ್ದುಕೊಂಡ್ರು. ಫೈನಲ್ ನಲ್ಲಿ ಕ್ಯಾಟೆರಿನಾ ಸಿನಿಯಾಕೊವಾ ಮತ್ತು ಬಾರ್ಬೊರಾ ಕ್ರೆಜೆಸಿಕೊವಾ 3-6, 7-5, 6-1ರಿಂದ ಕ್ಯಾಟಿ ಮೆನ್ ನಾಲಿ ಮತ್ತು ಟೇಲರ್ ಟೌನ್ ಸೆಂಡ್ ಅವರನ್ನು ಪರಾಭವಗೊಳಿಸಿದ್ರು.
ಒಟ್ಟಿನಲ್ಲಿ ವರ್ಷದ ನಾಲ್ಕು ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಗಳು ಮುಕ್ತಾಯಗೊಂಡಿವೆ. ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಪ್ರಶಸ್ತಿಗಳನ್ನು ರಫೆಲ್ ನಡಾಲ್ ಗೆದ್ದುಕೊಂಡ್ರೆ, ವಿಂಬಲ್ಡನ್ ಟ್ರೋಫಿಯನ್ನು ನೊವಾಕ್ ಜಾಕೊವಿಕ್ ಗೆದ್ದುಕೊಂಡ್ರು. ಹಾಗೇ ಯುಎಸ್ ಓಪನ್ ಪ್ರಶಸ್ತಿ 19ರ ಹರೆಯದ ಕಾರ್ಲೊಸ್ ಆಕ್ಲರಾಝ್ ಅವರ ಪಾಲಾಗಿದೆ. ಈ ಮೂಲಕ ಟೆನಿಸ್ ಜಗತ್ತಿಗೆ ಹೊಸ ಆಟಗಾರನ ಉದಯವಾಗಿದೆ.