ಟೆಸ್ಟ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ಪಡೆದ ಭಾರತದ ಮೊದಲ ಬೌಲರ್, ಆಸ್ಟ್ರೇಲಿಯಾ ವಿರುದ್ಧದ ಮೂರೇ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 32 ವಿಕೆಟ್ ಪಡೆದು ದಾಖಲೆ.. ಹರ್ಭಜನ್ ಸಿಂಗ್ ಡೇಂಜರಸ್ ಸ್ಪಿನ್ನರ್ ಆಗಿ ಬೆಳೆದರು. ವರ್ಷದಿಂದ ವರ್ಷಕ್ಕೆ ಟರ್ಬನೇಟರ್ ದಾಖಲೆ ಮೇಲೆ ದಾಖಲೆ ಬರೆದಿದ್ದರು. ಇನ್ನೇನು ಭಾರತೀಯ ಕ್ರಿಕೆಟ್ನಲ್ಲ ಎಲ್ಲಾ ದಾಖಲೆಗಳು ಹರ್ಭಜನ್ ಸಿಂಗ್ ಹೆಸರಿನಲ್ಲಾಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಟೈಮ್ ಎಲ್ಲವನ್ನೂಕಿತ್ತುಕೊಂಡಿತ್ತು.
30 ವರ್ಷಕ್ಕೆ ಮುನ್ನವೇ 400 ಟೆಸ್ಟ್ ವಿಕೆಟ್..!
ಹರ್ಭಜನ್ ಸಿಂಗ್ 2011ರಲ್ಲಿ ಟೆಸ್ಟ್ ಜೀವನದ 400ನೇ ವಿಕೆಟ್ ಪಡೆದಿದ್ದರು. ಆಗ ಅವರಿಗೆ ಕೇವಲ 29 ವರ್ಷ 273 ದಿನವಾಗಿತ್ತು. ಸಾಕಷ್ಟು ಕ್ರಿಕೆಟ್ ಕೂಡ ಉಳಿದುಕೊಂಡಿತ್ತು. ಆದರೆ ಅದೃಷ್ಟ ಮಾತ್ರ ಸಾಥ್ ನೀಡಲಿಲ್ಲ. ಮುಂದೆ 12 ವರ್ಷಗಳ ಕಾಲ ಕ್ರಿಕೆಟ್ ಮೈದಾನದಲ್ಲಿದ್ದರೂ ಕಬಳಿಸಿದ್ದು ಕೇವಲ 17 ವಿಕೆಟ್ ಮಾತ್ರ. ಅಂದರೆ 41ನೇ ವರ್ಷಕ್ಕೆ ನಿವೃತ್ತಿಯಾಗುವಾಗ ಹರ್ಭಜನ್ ಸಿಂಗ್ ಸಂಪಾದಿಸಿದ್ದು ಕೇವಲ 417 ಟೆಸ್ಟ್ ವಿಕೆಟ್..!
ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 707 ವಿಕೆಟ್..!
ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ 2007ರ ಟಿ20 ಮತ್ತು 2011 ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಗೆದ್ದಾಗ ತಂಡದ ಭಾಗವಾಗಿದ್ದರು. ಹರ್ಭಜನ್ 103 ಟೆಸ್ಟ್ ಗಳಲ್ಲಿ 417 ವಿಕೆಟ್ ಗಳನ್ನು ಪಡೆದಿದ್ದರು. 236 ಏಕದಿನ ಪಂದ್ಯಗಳಿಂದ 269 ವಿಕೆಟ್ ಪಡೆದುಕೊಂಡಿದ್ದರು. 28 ಅಂತರಾಷ್ಟ್ರೀಯ ಟಿ20 ಪಂದ್ಯಗಳಿಂದ 25 ವಿಕೆಟ್ ಸಂಪಾದಿಸಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಪರ ಅನಿಲ್ ಕುಂಬ್ಳೆ ಒಟ್ಟು 953 ವಿಕೆಟ್ ಪಡೆದಿದ್ದರೆ, ಹರ್ಭಜನ್ ಸಿಂಗ್ 707 ವಿಕೆಟ್ ಪಡೆದು ಸ್ಪಿನ್ ದಿಗ್ಗಜ ಎನಿಸಿಕೊಂಡಿದ್ದರು.
ಅಶ್ವಿನ್ ಆಟ, ಹರ್ಭಜನ್ ಪರದಾಟ..!
ತಮಿಳುನಾಡಿನ ಆಫ್ ಸ್ಪಿನ್ನರ್ ಅಶ್ವಿನ್ ತಂಡಕ್ಕೆ ಎಂಟ್ರಿಕೊಟ್ಟಿದ್ದು ಹರ್ಭಜನ್ ಸಿಂಗ್ ಪರದಾಡುವಂತೆ ಮಾಡಿತು. ಅಶ್ವಿನ್ ತಂಡದೊಳಗೆ ಬಂದು ಮೊದಲಿಗೆ ವಿಕೆಟ್ ಬೇಟೆಯಾಡಿದರು. ನಂತರ ಹರ್ಭಜನ್ ಸಿಂಗ್ ಸ್ಥಾನವನ್ನೇ ಕಿತ್ತುಕೊಂಡರು. ಈಗ ಅಶ್ವಿನ್ 81 ಟೆಸ್ಟ್ ಪಂದ್ಯಗಳಲ್ಲೇ ಹರ್ಭಜನ್ ದಾಖಲೆ ಮುರಿದು ಮುಂದಕ್ಕೆ ಹೋಗಿದ್ದಾರೆ.
ಒಟ್ಟಿನಲ್ಲಿ ಹರ್ಭಜನ್ ಸಿಂಗ್ ಕೊಡುಗೆ ಭಾರತೀಯ ಕ್ರಿಕೆಟ್ನಲ್ಲಿ ಶಾಶ್ವತ. ಕೊಲ್ಕತ್ತಾ, ಮುಂಬೈ, ಬೆಂಗಳೂನಿಂದ ಹಿಡಿದು, ಸಿಡ್ನಿ, ಮೆಲ್ಬರ್ನ್, ಆಡಿಲೇಡ್ ತನಕ, ಲಾರ್ಡ್ಸ್ ನಿಂದ ಹಿಡಿದು ದಕ್ಷಿಣ ಆಫ್ರಿಕಾ ಜೊಹಾನ್ಸ್ ಬರ್ಗ್ ತನಕ ಹರ್ಭಜನ್ ಎಲ್ಲಾ ಮೈದಾನಗಳಲ್ಲೂ ಮಿಂಚಿದ್ದರು.