ಪ್ರಸಕ್ತ ಸಾಲಿನ ಕೇಂದ್ರ ಮುಂಗಡ ಪತ್ರದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಕಳೆದ ಬಾರಿ ಮೀಸಲಿಟ್ಟಿದ್ದ ಹಣಕ್ಕಿಂತ 300 ಕೋಟಿ ರೂಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
2021-22 ಅವಧಿಯಲ್ಲಿ ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ 2759.02 ಕೋಟಿ ರೂಪಾ ನೀಡಿತ್ತು. ಈ ಮೊತ್ತವನ್ನು 2022-23ರ ಅವಧಿಯ ಬಜೆಟ್ನಲ್ಲಿ 3062.60 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ 305.58 ಕೋಟಿ ರೂ ಗಳನ್ನು ಹೆಚ್ಚುವರಿಯಾಗಿ ಕ್ರೀಡಾ ಕ್ಷೇತ್ರಕ್ಕೆ ನೀಡಲಾಗಿದೆ.
ಜೊತೆಗೆ ರಾಷ್ಟ್ರೀಯ ಯುವ ಸಬಲೀಕರಣ ಕಾರ್ಯಕ್ರಮಕ್ಕೆ ಕೂಡ ಕೇಂದ್ರ ಸರ್ಕಾರ ಬಜೆಟ್ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ಈ ಯೋಜನೆಗೆ 108 ಕೋಟಿ ರೂಪಾಯಿ ನಿಗದಿ ಪಡಿಸಲಾಗಿತ್ತು. ಈ ಬಾರಿ ಆ ಮೊತ್ತವನ್ನು 138 ಕೋಟಿ ರೂಪಾಗಳಿಗೆ ಹೆಚ್ಚಿಸಲಾಗಿದೆ.
ಕೇಂದ್ರ ಸರ್ಕಾರದ ಪ್ರಮುಖ ಕಾರ್ಯಕ್ರಮವಾದ ಖೇಲೋ ಇಂಡಿಯಾ ಯೂತ್ ಗೇಮ್ಸ್ಗೆ ಕೂಡ ಬಜೆಟ್ನಲ್ಲಿ ಹೆಚ್ಚಿನ ಮೊತ್ತವನ್ನು ನೀಡಲಾಗಿದೆ. ಕಳೆದ ವರ್ಷ ಈ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 876 ಕೋಟಿ ಮಂಜೂರು ಮಾಡಿತ್ತು. ಈ ವರ್ಷದ ಆರ್ಥಿಕ ಬಜೆಟ್ನಲ್ಲಿ ಈ ಯೋಜನೆಗೆ 974 ಕೋಟಿ ನಿಗದಿಪಡಿಸಿದೆ.
ಕ್ರೀಡಾ ಕ್ಷೇತ್ರಕ್ಕೆ ನೀಡಿರುವ ಬಜೆಟ್ ಒಲಂಪಿಕ್ಸ್ ಅಥ್ಲೀಟ್ಗಳ ತರಬೇತಿ ಮತ್ತು ತಯಾರಿಗಾಗಿ ವ್ಯಯಿಸುವ ಹಣದ ಮೊತ್ತದ ಜೊತೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ, ಅಥ್ಲೆಟಿಕ್ಸ್ ಅಥಾರಿಟಿ ಆಫ್ ಇಂಡಿಯಾದಂತಹ ಸಂಸ್ಥೆಗಳ ಬಜೆಟ್ ಅನ್ನು ಒಳಗೊಂಡಿರುತ್ತದೆ.