ಅಂಡರ್ 19 ವಿಶ್ವಕಪ್ನಲ್ಲಿ (Under 19 World Cup) ಭಾರತ (India) ಮತ್ತು ಆಸ್ಟ್ರೇಲಿಯಾ (Australia) ನಡುವೆ ಬಿಗ್ ಫೈಟ್ ನಡೆಯುವುದು ಗ್ಯಾರೆಂಟಿ. 2018ರ ಅಂಡರ್ 19 ವಿಶ್ವಕಪ್ ಫೈನಲ್ನಲ್ಲಿ ಪೃಥ್ವಿ ಷಾ (Prithvi Shaw) ಬಳಗ ಫೈನಲ್ನಲ್ಲಿ ಆಸ್ಟ್ರೇಲಿಯಾವನ್ನು ಹೊಸಕಿ ಹಾಕಿತು. 2020ರಲ್ಲಿ ಕಾರ್ತಿಕ್ ತ್ಯಾಗಿ (Karthik Tyagi) ಮತ್ತು ಇತರ ವೇಗಿಗಳು ಆಸ್ಟ್ರೇಲಿಯಾದ ಆಟವನ್ನು ಕ್ವಾರ್ಟರ್ ಫೈನಲ್ನಲ್ಲೇ ಮುಗಿಸಿದರು. ಈಗ ಸೆಮಿಫೈನಲ್ನಲ್ಲಿ ಈ ಎರಡೂ ತಂಡಗಳು ಮುಖಾಮುಖಿ ಆಗುತ್ತಿವೆ.
ಹಾಲಿ ಟೂರ್ನಿಯಲ್ಲಿ ಟೀಮ್ ಇಂಡಿಯಾಕ್ಕೆ ಎದುರಾಳಿಗಿಂತ ಹೆಚ್ಚು ಕಾಡಿದ್ದು ಕೋವಿಡ್ 19. ಆದರೂ ಭಾರತ ಅಜೇಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಬ್ಯಾಟಿಂಗ್ ಜೊತೆಗೆ ಅದ್ಭುತ ಬೌಲಿಂಗ್ ಎದುರಾಳಿಯನ್ನು ಸುಲಭವಾಗಿ ಸೋಲುವಂತೆ ಮಾಡಿದೆ. ಅಂಗ್ಕೃಷ್ ರಘುವಂಶಿ, ಹರ್ನೂರ್ ಸಿಂಗ್, ರಾಜ್ ಭಾವಾ ಮತ್ತು ನಾಯಕ ಯಶ್ ಧುಲ್ (Yash Dhull) ಈಗಾಗಲೇ ದೊಡ್ಡ ಇನ್ನಿಂಗ್ಸ್ನ ರುಚಿ ಕಂಡಿದ್ದಾರೆ. ಶೇಕ್ ರಶೀದ್, ಸಿದ್ಧಾರ್ಥ್ ಯಾದವ್ ಮತ್ತು ಕೌಶಲ್ ಥಾಂಬೆ ದೊಡ್ಡ ಇನ್ನಿಂಗ್ಸ್ ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಬೌಲರ್ ರಾಜವರ್ಧನ್ ಹಂಗರ್ಗೆಕರ್ ಬಿಗ್ ಹಿಟ್ಗೆ ಫೇಮಸ್
ರಾಜವರ್ಧನ್ ಹಂಗರ್ಗೆಕರ್ ಮತ್ತು ರವಿ ಕುಮಾರ್ ಹೊಸ ಚೆಂಡಿನಲ್ಲಿ ಎದುರಾಳಿಗಳನ್ನು ಕಾಡಿದ್ದಾರೆ. ವಿಕ್ಕಿ ಓಸ್ಟ್ವಾಲ್, ಸಿದ್ಧಾರ್ಥ್ ಯಾದವ್, ಥಾಂಬೆ, ಧುಲ್, ಸೇರಿದಂತೆ ರಘುವಂಶಿ ಮತ್ತು ಹರ್ನೂರ್ ಸಿಂಗ್ ಕೂಡ ಸ್ಪಿನ್ ಬೌಲಿಂಗ್ ಮಾಡಬಲ್ಲರು.
ಆಸ್ಟ್ರೇಲಿಯಾ ಕೂಡ ಬಲಿಷ್ಠ ತಂಡ. ಟಾಪ್ ಆರ್ಡರ್ ಬ್ಯಾಟಿಂಗ್ ಮತ್ತು ಬೌಲಿಂಗ್ ವೈವಿಧ್ಯತೆ ತಂಡದ ಬೋನಸ್. ಆದರೆ ಸ್ಪಿನ್ ಮುಂದೆ ಆಸೀಸ್ ವೀಕ್ ಅನ್ನುವುದು ಟೀಮ್ ಇಂಡಿಯಾಕ್ಕೆ ಗೊತ್ತಿದೆ. ಟೀಗ್ ವಿಲ್ಲಿ, ಕ್ಯಾಂಬೆಲ್ ಕೆಲ್ಲವೇ, ಏಡನ್ ಕಾಹಿಲ್, ಕೋರಿ ಮಿಲ್ಲರ್ ಮತ್ತು ಕೂಪರ್ ಕಾನೊಲ್ಲಿ ಮೇಲೆ ಆಸೀಸ್ ಬ್ಯಾಟಿಂಗ್ ಅವಲಂಭಿತವಾಗಿದೆ.
ಟಾಮ್ ವಿಟ್ನಿ, ವಿಲಿಯಂ ಸಾಲ್ಸ್ಮನ್, ಜಾಕ್ ನಿಸ್ಬೆಟ್ ಬೌಲಿಂಗ್ ಶಕ್ತಿ ಪ್ರದರ್ಶಿಸಿದ್ದಾರೆ. ಕೂಲಿಡ್ಜ್ ಮೈದಾನ ಸ್ಪಿನ್ನರ್ಗಳ ಸ್ವರ್ಗ ಆಗಿರುವುದರಿಂದ ಟೀಮ್ ಇಂಡಿಯಾ ಗೆಲ್ಲುವ ಫೆವರೀಟ್ ಆಗಿದೆ.