team india ಕೋವಿಡ್ ನಿಂದ ಚೇತರಿಸಿಕೊಂಡ ಶಿಖರ್ ಧವನ್ – ಶ್ರೇಯಸ್ ಅಯ್ಯರ್..!

ಕೋವಿಡ್ ಆಘಾತದಿಂದ ಟೀಮ್ ಇಂಡಿಯಾ ಹೊರಬಂದಿದೆ. ವೆಸ್ಟ್ ಇಂಡೀಸ್ ಸರಣಿಗೆ ಮುನ್ನ ಟೀಮ್ ಇಂಡಿಯಾದ ನಾಲ್ವರು ಅಟಗಾರರು ಮತ್ತು ಮೂವರು ಸಿಬ್ಬಂದಿಗಳಿಗೆ ಕೋವಿಡ್ ದೃಢಪಟ್ಟಿತ್ತು. ಹೀಗಾಗಿ ವಿಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯದಿಂದ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಹಾಗೂ ರುತುರಾಜ್ ಗಾಯಕ್ವಾಡ್ ಹಾಗೂ ನೆಟ್ ಬೌಲರ್ ನವದೀಪ್ ಸೈನಿ ಅವರು ಹೊರಗುಳಿದಿದ್ದರು.
ಇದೀಗ ಶಿಖರ್ ಧವನ್, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಡ್, ನವದೀಪ್ ಸೈನಿ ಅವರು ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅಲ್ಲದೆ ಟೀಮ್ ಇಂಡಿಯಾದ ಅಭ್ಯಾಸದಲ್ಲೂ ಕಾಣಿಸಿಕೊಂಡಿದ್ದಾರೆ. team india – Shikhar Dhawan, Iyer train after recovering from COVID-19
ಶಿಖರ್ ಧವನ್ ಮತ್ತು ಶ್ರೇಯಸ್ ಅಯ್ಯರ್ ಅವರು ಬ್ಯಾಟಿಂಗ್ ತಾಲೀಮು ನಡೆಸಿದ್ದಾರೆ. ಅದರಲ್ಲೂ ಶಿಖರ್ ಧವನ್ ಅವರು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮತ್ತೆ ಹಳೆಯ ಲಯಕ್ಕೆ ಬಂದಿದ್ದೇನೆ. ಬ್ಯಾಟ್ ನ ಸದ್ದು ಕೇಳಿದಾಗ ತುಂಬಾನೇ ಖುಷಿಯಾಗುತ್ತದೆ ಎಂದು ಶಿಖರ್ ಧವನ್ ಬರೆದುಕೊಂಡಿದ್ದಾರೆ.
ಆದ್ರೆ ಎರಡನೇ ಏಕದಿನ ಪಂದ್ಯದಲ್ಲಿ ಆಡ್ತಾರೋ ಇಲ್ವೋ ಎಂಬುದು ಇನ್ನೂ ತಿಳಿದುಬಂದಿಲ್ಲ.
ಈಗಾಗಲೇ ಮೂರು ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 1-0ಯಿಂದ ಮುನ್ನಡೆ ಪಡೆದುಕೊಂಡಿದೆ. ಎರಡನೇ ಏಕದಿನ ಪಂದ್ಯ ಫೆಬ್ರವರಿ 9ರಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.