under 19 world cup ಲಂಕಾ ತಂಡಕ್ಕೆ ಶಾಕ್ ನೀಡಿದ ಅಫಘಾನಿಸ್ತಾನ ಸೆಮೀಸ್ ಗೆ ಎಂಟ್ರಿ..!
19ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಅಫಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸಿದೆ.
ಆಂಟಿಗುವಾ ದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಫಘಾನಿಸ್ತಾನ ನಾಲ್ಕು ರನ್ ಗಳಿಂದ ಶ್ರೀಲಂಕಾ ತಂಡವನ್ನು ಪರಾಭವಗೊಳಿಸಿತು.
ಸೆಮಿಫೈನಲ್ ಪಂದ್ಯದಲ್ಲಿ ಅಫಘಾನಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಕಾದಾಟ ನಡೆಸಲಿವೆ.
under 19 world cup – Afghanistan defeat Sri Lanka
ಮೊದಲು ಬ್ಯಾಟಿಂಗ್ ಮಾಡಿದ್ದ ಅಫಘಾನಿಸ್ತಾನ ತಂಡ 134 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಅಲ್ಲದೆ ಸೋಲಿನ ಭೀತಿಗೂ ಸಿಲುಕಿತ್ತು. ಆದ್ರೆ ಲಂಕಾ ತಂಡಕ್ಕೆ ಠಕ್ಕರ್ ನೀಡಿದ ಅಫಘಾನಿಸ್ತಾ ತಂಡದ ಬೌಲರ್ ಗಳು ಪಂದ್ಯದ ಮೆಲೆ ಸಂಪೂರ್ಣವಾಗಿ ಮೇಲುಗೈ ಸಾಧಿಸಿದ್ರು. ಅಲ್ಲದೆ ಲಂಕಾ ತಂಡವನ್ನು 130 ರನ್ ಗಳಿಗೆ ಕಟ್ಟಿ ಹಾಕಿ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು. ಶ್ರೀಲಂಕಾದ ತಂಡದ ನಾಯಕ ದುನಿತ್ ವೆಲಾಲಾಗೆ ಅವರು 34 ಎಸೆತಗಳಲ್ಲಿ 61 ರನ್ ದಾಖಲಿಸಿದ್ರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಫೆಬ್ರವರಿ 1ರಂದು ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ.