ಚೊಚ್ಚಲ ಆವೃತ್ತಿಯ ಐಸಿಸಿ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ಗೆ ವೇದಿಕೆ ಸಜ್ಜುಗೊಂಡಿದೆ.
ಭಾರತ ಸೇರಿ 16 ತಂಡಗಳ ನಡುವಿನ ಕಾದಾಟ ಇಂದಿನಿಂದ ಆರಂಭವಾಗಲಿದೆ.
ದ.ಆಫ್ರಿಕಾದ ಪಾಚೆಫ್ಸ್ಟ್ರೂಮ್ ಹಾಗೂ ಬೆನೀನಿಯ ಒಟ್ಟು 4 ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು 16 ದಿನ 41 ಪಂದ್ಯಗಳು ನಡೆಯಲಿವೆ.
ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿ 9 ತಂಡಗಳು ನೇರ ಪ್ರವೇಶ ಪಡೆದಿವೆ. ಉಳಿದ 5 ತಂಡಗಳು ಅರ್ಹತಾ ಸುತ್ತಿನ ಮೂಲಕ ಟೂರ್ನಿ ಪ್ರವೇಶಿಸಿವೆ. ಟೂರ್ನಿಯಲ್ಲಿ 4 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಶಫಾಲಿ ವರ್ಮಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.
ಟೂರ್ನಿ ಮಾದರಿ: ಗುಂಪು ಹಂತದಲ್ಲಿ ಎಲ್ಲಾ ತಂಡಗಳು 3 ಪಂದ್ಯಗಳನ್ನು ಆಡಲಿವೆ. ಅಗ್ರ 3 ತಂಡಗಳು ಸೂಪರ್ 6 ಹಂತ ಪ್ರವೇಶಿಸಲಿವೆ. 2 ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.