ಅಂಡರ್ 19 ವಿಶ್ವಕಪ್ನಲ್ಲಿ (Under 19 World Cup) ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿದೆ. ದಾಖಲೆಯ 8 ನೇ ಬಾರಿ ಫೈನಲ್ಗೆ ಎಂಟ್ರಿಕೊಟ್ಟಿರುವ ಟೀಮ್ ಇಂಡಿಯಾ (India) 5ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 4 ಬಾರಿಯ ಚಾಂಪಿಯನ್ ಭಾರತ ಸತತ 4ನೇ ಬಾರಿ ವಿಶ್ವಕಪ್ ಫೈನಲ್ ಪ್ರವೇಶ ಪಡೆದಿದೆ.
ಜೂನಿಯರ್ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡ ದೆಹಲಿ ಹುಡುಗರೆಲ್ಲಾ ಈಗ ಶತಕವೀರರಾಗಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ (Virat Kohli), ಉನ್ಮುಕ್ತ್ ಚಾಂದ್ (Unmukt Chand)ನಾಯಕರಾಗಿ ಶತಕ ಸಿಡಿಸಿದ್ದರು. ಈಗ ಯಶ್ ಧುಲ್ (Yash Dhull) ಆ ಸಾಧನೆ ಮಾಡಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಗೆಲುವಿನಲ್ಲಿ ಮಿಂಚಿದ್ದು ನಾಯಕ ಯಶ್ ಧುಲ್ ಶತಕದ ಆಟ. ಧುಲ್ 110 ಎಸೆತಗಳಲ್ಲಿ 110 ರನ್ಗಳಿಸಿ ರನೌಟ್ ಆಗಿದ್ದರು. ಈ ಇನ್ನಿಂಗ್ಸ್ನಲ್ಲಿ 10 ಫೋರ್ ಮತ್ತು 1 ಸಿಕ್ಸರ್ ಒಳಗೊಂಡಿತ್ತು.
2012ರಲ್ಲಿ ಉನ್ಮುಕ್ತ್ ಚಾಂದ್ ಆಸ್ಟ್ರೇಲಿಯಾ (Australia) ವಿರುದ್ಧದ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಟೌನ್ಸ್ ವಿಲ್ಲೆಯಲ್ಲಿ (Townsville) ಚಾಂದ್ 130 ಎಸೆತಗಳಲ್ಲಿ ಅಜೇಯ 111 ರನ್ಗಳಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಚಾಂದ್ 7 ಫೋರ್ ಮತ್ತು 6 ಸಿಕ್ಸರ್ ಸಿಡಿಸಿದ್ದರು.
ನಾಯಕನಾಗಿ ಜೂನಿಯರ್ ವಿಶ್ವಕಪ್ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಅಂದರೆ ಅದು ವಿರಾಟ್ ಕೊಹ್ಲಿ. ವೆಸ್ಟ್ ಇಂಡೀಸ್ (Westindies) ವಿರುದ್ಧ ಕೌಲಲಂಪುರದಲ್ಲಿ (Kaulalampur) ಕೊಹ್ಲಿ 74 ಎಸೆತಗಳಲ್ಲಿ ಅಜೇಯ 100 ರನ್ಗಳಿಸಿದ್ದರು. ಕೊಹ್ಲಿ ಇನ್ನಿಂಗ್ಸ್ನಲ್ಲಿ 10 ಫೋರ್ ಮತ್ತು 4 ಸಿಕ್ಸರ್ಗಳಿದ್ದವು. ಈ ಪಂದ್ಯ 2008ರಲ್ಲಿ ನಡೆದಿತ್ತು.