ಭಾರತ ಈಗ ಅಂಡರ್ 19 ವಿಶ್ವಕಪ್ನಲ್ಲಿ 5ನೇ ಟ್ರೋಫಿಯ ನಿರೀಕ್ಷೆಯಲ್ಲಿದೆ. ಯಶ್ ಧುಲ್ ನಾಯಕತ್ವದ ತಂಡ ಕಪ್ ಗೆದ್ದರೆ ಜೂನಿಯರ್ ವಿಶ್ವಕಪ್ ಗೆದ್ದ 3ನೇ ನಾಯಕ ಅನ್ನುವ ಖ್ಯಾತಿ ಪಡೆಯಲಿದ್ದಾರೆ.
2000: ಮೊಹಮ್ಮದ್ ಕೈಫ್ ನಾಯಕತ್ವದಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್ಗಳ ಜಯ. ಇದು ಭಾರತದ ಚೊಚ್ಚಲ ಜೂನಿಯರ್ ವಿಶ್ವಕಪ್ ಗೆಲುವಾಗಿತ್ತು. ಕೈಫ್-ಯುವರಾಜ್ ಭಾರತ ತಂಡವನ್ನು ದಶಕಗಳ ಕಾಲ ಪ್ರತಿನಿಧಿಸಿದರು. ರಿತಿಂದರ್ ಸೋಧಿ, ಅಜಯ್ ರಾತ್ರಾ ಮತ್ತು ವೇಣುಗೋಪಾಲ್ ರಾವ್ ಕೂಡ ಕೆಲ ಸಮಯ ಟೀಮ್ ಇಂಡಿಯಾದಲ್ಲಿದ್ದರು.
2008: ವಿರಾಟ್ ಕೊಹ್ಲಿ ನಾಯಕತ್ವದದಲ್ಲಿ 2ನೇ ಬಾರಿಗೆ ಭಾರತ ಅಂಡರ್ 19 ವಿಶ್ವಕಪ್ ಗೆದ್ದುಕೊಂಡಿತ್ತು. ದಕ್ಷಿಣ ಆಫ್ರಿಕಾವನ್ನು ಫೈನಲ್ ಪಂದ್ಯದಲ್ಲಿ ಡಕ್ ವರ್ತ್ ನಿಯಮದಂತೆ 12 ರನ್ಗಳಿಂದ ಸೋಲಿಸಿತು. ವಿರಾಟ್ ಕೊಹ್ಲಿ ಜೂನಿಯರ್ ತಂಡದಿಂದ ಟೀಮ್ ಇಂಡಿಯಾ ತನಕ ಎಲ್ಲಾ ನಾಯಕತ್ವವನ್ನು ವಹಿಸಿಕೊಂಡಿದ್ದರು. ಆ ತಂಡದಲ್ಲಿದ್ದ ರವೀಂದ್ರ ಜಡೇಜಾ ಮತ್ತು ಮನೀಷ್ ಪಾಂಡೆ ಟೀಮ್ ಇಂಡಿಯಾದ ಪ್ರಮುಖ ಆಟಗಾರರು.
2012: ಉನ್ಮುಕ್ತ್ ಚಾಂದ್ ನಾಯಕತ್ವದಲ್ಲಿ ಭಾರತ 3ನೇ ಬಾರಿಗೆ ಚಾಂಪಿಯನ್ ಆಗಿತ್ತು. ನ್ಯೂಜಿಲೆಂಡ್ನಲ್ಲಿ ನಡೆದ ಈ ಟೂರ್ನಿಯಲ್ಲಿ ಭಾರತ ಆಸ್ಟ್ರೇಲಿಯಾವನ್ನು 6 ವಿಕೆಟ್ಗಳಿಂದ ಸೋಲಿಸಿತ್ತು. ಅಚ್ಚರಿ ಅಂದರೆ ಈ ಚಾಂಪಿಯನ್ ತಂಡದ ಹಲವು ಆಟಗಾರರು ಇನ್ನೂ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಕೇವಲ ಹನುಮ ವಿಹಾರಿ ಮಾತ್ರ ಟೆಸ್ಟ್ ತಂಡದ ಸದಸ್ಯರಾಗಿದ್ದಾರೆ.
2018:ಪೃಥ್ವಿ ಷಾ ನಾಯಕತ್ವದಲ್ಲಿ 4ನೇ ಬಾರಿಗೆ ಟೀಮ್ ಇಂಡಿಯಾ ಜೂನಿಯರ್ ವಿಶ್ವಕಪ್ ಗೆದ್ದುಕೊಂಡು ಬಂದಿತ್ತು. ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿತ್ತು. ಆ ತಂಡದ ಭಾಗವಾಗಿದ್ದ ಪೃಥ್ವಿ ಷಾ ಮತ್ತು ಶುಭ್ ಮನ್ ಗಿಲ್ ಈಗ ಟೀಮ್ ಇಂಡಿಯಾದಲ್ಲಿದ್ದಾರೆ. ಉಳಿದ ಆಟಗಾರರು ಕೂಡ ಟೀಮ್ ಇಂಡಿಯಾದ ಬಾಗಿಲು ಬಡಿಯುತ್ತಿದ್ದಾರೆ.