ಇಂಡಿಯನ್ ಪ್ರೀಮಿಯರ್ ಲೀಗ್ನ 15 ನೇ ಸೀಸನ್ ಅಭಿಮಾನಿಗಳಿಗೆ ಹಬ್ಬದೂಟವನ್ನು ಹಾಕುತ್ತಿದೆ. ಬ್ಯಾಟ್ಸ್ ಮನ್ ಗಳು ರನ್ ಬಾರಿಸಿ ರಂಜಿಸಿದರೆ, ಬೌಲರ್ ಗಳು ವಿಕೆಟ್ ಬೇಟೆ ನಡೆಸಿ ಮಿಂಚಿದ್ದಾರೆ. ಪ್ರಸಕ್ತ ಋತುವಿನ ಪಂದ್ಯಗಳಲ್ಲಿ ನಾವು ದೊಡ್ಡ ಮೊತ್ತವನ್ನು ಕಾಣುತ್ತಿದ್ದೇವೆ. ಅಲ್ಲದೆ ಸಾಧಾರಣ ಮೊತ್ತವನ್ನು ಚೇಸ್ ಮಾಡುವಲ್ಲಿ ಯಶಸ್ವಿಯಾದ ತಂಡಗಳು ಶ್ರೀಮಂತ ಲೀಗ್ ನ ರೋಚಕೆಯನ್ನು ಹೆಚ್ಚಿಸಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಪರ್ಪಲ್ ಕ್ಯಾಪ್ ಗಾಗಿ ಬೌಲರ್ ಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಪ್ರಸ್ತುತ, ಮೆಗಾ ಹರಾಜಿನ ಮೊದಲ ದಿನದಲ್ಲಿ ಖರೀದಿದಾರರ ಮನ ಗೆಲ್ಲುವಲ್ಲಿ ವಿಫಲರಾದ ಉಮೇಶ್ ಯಾದವ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಕೋಲ್ಕತ್ತಾ ಪರ ಆಡುತ್ತಿರುವ ಉಮೇಶ್ ಯಾದವ್ 3 ಪಂದ್ಯಗಳಲ್ಲಿ 8 ವಿಕೆಟ್ ಪಡೆದು ಮುನ್ನಡೆಯಲ್ಲಿದ್ದಾರೆ. ಈ ಪೈಕಿ ಒಂದು ಬಾರಿ ಅವರು 4 ವಿಕೆಟ್ ಸಾಧನೆ ಮಾಡಿದ್ದಾರೆ. ಭಾನುವಾರದ ಪಂದ್ಯದ ನಂತರ ಎರಡನೇ ಸ್ಥಾನದಲ್ಲಿ ಬದಲಾವಣೆಯಾಗಿದೆ. ಪಂಜಾಬ್ನ ರಾಹುಲ್ ಚಹಾರ್ 6 ವಿಕೆಟ್ಗಳೊಂದಿಗೆ ಈ ಸ್ಥಾನವನ್ನು ವಶಪಡಿಸಿಕೊಂಡರು. ಈ ಮೂಲಕ ರಾಜಸ್ಥಾನದ ಸ್ಪಿನ್ ಬೌಲರ್ ಯುಜ್ವೇಂದ್ರ ಚಹಾಲ್ 5 ವಿಕೆಟ್ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಮೊಹಮ್ಮದ್ ಶಮಿ, ಟಿಮ್ ಸೌಥಿ ಮತ್ತು ವನಿಂದು ಹಸರಂಗಾ ಎರಡು ಪಂದ್ಯಗಳಲ್ಲಿ 5 ವಿಕೆಟ್ಗಳೊಂದಿಗೆ ಪಟ್ಟಿಯಲ್ಲಿ ನಾಲ್ಕು, ಐದು ಮತ್ತು ಆರನೇ ಸ್ಥಾನದಲ್ಲಿದ್ದಾರೆ. ಚೆನ್ನೈನ ಡಿಜೆ ಬ್ರಾವೋ 5 ವಿಕೆಟ್ಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ದೆಹಲಿಯ ಸ್ಪಿನ್ ಬೌಲರ್ ಕುಲದೀಪ್ ಯಾದವ್ 8ನೇ ಸ್ಥಾನಕ್ಕೆ ತಲುಪಿದಿದ್ದಾರೆ. ಗುಜರಾತ್ನ ವೇಗದ ಬೌಲರ್ ಲೋಕಿ ಫರ್ಗುಸನ್ 9ನೇ ಸ್ಥಾನದಲ್ಲಿದ್ದಾರೆ. ಖಲೀಲ್ ಅಹ್ಮದ್ ಮತ್ತು ಮುಂಬೈನ ಬೌಲರ್ ಟಿಮಲ್ ಮಿಲ್ಸ್ ಕ್ರಮವಾಗಿ 10 ನೇ ಸ್ಥಾನದಲ್ಲಿದ್ದಾರೆ, ಇಬ್ಬರೂ 2 ಪಂದ್ಯಗಳಲ್ಲಿ 4-4 ವಿಕೆಟ್ಗಳನ್ನು ಪಡೆದಿದ್ದಾರೆ.